• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!

|

ನವದೆಹಲಿ, ಫೆಬ್ರವರಿ 13: ಸ್ವದೇಶಿ ನಿರ್ಮಿತ, ಭಾರತದ ಅತ್ಯಂತ ವೇಗವಾಗಿ ಚಲಿಸುವ 'ಇಂಜಿನ್ ರಹಿತ' ರೈಲು ಟ್ರೇನ್ ಎನಿಸಿಕೊಂಡಿರುವ ವಂದೇ ಭಾರತ್ ಏಕ್ಸ್ ಪ್ರೆಸ್(ಟ್ರೇನ್ 18) ಗೆ ಪ್ರಧಾನಿ ಮೋದಿ ಅವರು ಫೆ.15ರಂದು ಅಧಿಕೃತವಾಗಿ ಹಸಿರು ನಿಶಾನೆ ನೀಡಲಿದ್ದಾರೆ. ಸದ್ಯ ವಂದೇ ಭಾರತ್ ಏಕ್ಸ್ ಪ್ರೆಸ್ ನ ಆಹಾರ ಮೆನು ಹೊರ ಬಂದಿದೆ. ಉಪಾಹಾರಕ್ಕೆ ಮಫಿನ್ ಮತ್ತು ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್ ಇದೆಲ್ಲವೂ ವಂದೇ ಭಾರತ್ ಎಕ್ಸ್ ಪ್ರೆಸ್(ಟ್ರೇನ್ 18) ನ ಆಹಾರದ ಮೆನುವಾಗಲಿದೆ. ಅಲಹಾಬಾದ್ ರೆಸ್ಟೋರೆಂಟ್‌ನ ಬಿಸಿ ಬಿಸಿ ಹಬೆಯಾಡುವ ಊಟ, ಕಾನ್ಪುರದ ಪಂಚತಾರಾ ಹೋಟೆಲ್‌ನ ರಾತ್ರಿಯೂಟವನ್ನು ಸವಿಯಬಹುದು.

ನವದೆಹಲಿಯಿಂದ ವಾರಾಣಸಿಗೆ ಹಾಗೂ ವಾರಾಣಸಿಯಿಂದ ನವದೆಹಲಿಗೆ ಪ್ರಯಾಣಿಸುವ ಜನರ ಬಹು ದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸುತ್ತಿದ್ದು, ಫೆಬ್ರವರಿ 15ರಂದು ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯ ನಿರ್ವಹಿಸಲಿದೆ. ಈ ಬಹು ನಿರೀಕ್ಷಿತ ರೈಲಿನಲ್ಲಿ ಗತಿಮಾನ್ ಎಕ್ಸ್ ಪ್ರೆಸ್ ಮಾದರಿ ಸೌಲಭ್ಯಗಳನ್ನು ಅಳವಡಿಸಲು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ನಿರ್ಧರಿಸಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆ

ಗಂಟೆಗೆ 180 ಕಿ.ಮೀ. ವೇಗವಾಗಿ ಚಲಿಸಲು ಸಮರ್ಥವಾಗಿ ಹೊಂದಿದ್ದರೂ ಆರಂಭದಲ್ಲಿ ಈ ಎಕ್ಸ್ ಪ್ರೆಸ್ ವೇಗವನ್ನು ಪ್ರತಿ ಗಂಟೆಗೆ 130-160 ಕಿ.ಮೀ. ವೇಗಕ್ಕೆ ನಿಗದಿ ಪಡಿಸಲಾಗಿದೆ. ಈ ಮೂಲಕ ಸಂಚರಿಸಲಿದೆ. ದೆಹಲಿ ಮತ್ತು ವಾರಾಣಸಿ ನಡುವೆ ಇರುವ 770 ಕಿ.ಮೀ. ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

16 ಬೋಗಿಗಳುಳ್ಳ ಈ ರೈಲು ನಿರ್ಮಾಣಕ್ಕೆ 18 ತಿಂಗಳು ಸಮಯ ಹಿಡಿದಿದೆ. ಇನ್ನು 97 ಕೋಟಿ ರುಪಾಯಿ ವೆಚ್ಚವಾಗಿದೆ. ರಾಯ್ ಬರೇಲಿಯಲ್ಲಿ ಇರುವ ಇಂಟಿಗ್ರಲ್ ಬೋಗಿ ಕಾರ್ಖಾನೆಯಲ್ಲಿ ಇದರ ನಿರ್ಮಾಣವಾಗಿದೆ. 30 ವರ್ಷಗಳ ಹಿಂದಿನ ಶತಾಬ್ದಿ ಎಕ್ಸ್ ಪ್ರೆಸ್ ನ ಮುಂದಿನ ಹಂತದ ರೈಲು ಇದೆ ಎನ್ನಲಾಗುತ್ತಿದೆ.

ಕಾನ್ಪುರದ ಪಂಚತಾರಾ ಹೋಟೆಲ್ ಊಟ

ಕಾನ್ಪುರದ ಪಂಚತಾರಾ ಹೋಟೆಲ್ ಊಟ

ಕಾನ್ಪುರದ ಪಂಚತಾರಾ ಹೋಟೆಲ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಐಆರ್ ಸಿಟಿಸಿಯು ರಾತ್ರಿಯೂಟವನ್ನು ಹೊರಗುತ್ತಿಗೆ ಮೂಲಕ ಪಡೆಯುತ್ತಿದೆ. ವಾರಣಾಸಿಯಿಂದ ನವದೆಹಲಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕಾನ್ಪುರದ ಬಳಿಕ ರಾತ್ರಿಯೂಟ ಸಿಗಲಿದೆ. ದೆಹಲಿಯಿಂದ ವಾರಣಾಸಿಗೆ ತೆರಳುವ ಪ್ರಯಾಣಿಕರಿಗೆ ಮಧ್ಯಾಹ್ನದೂಟವನ್ನು ಅಲಹಾಬಾದ್‌ನಲ್ಲಿ ಪೂರೈಸಲಾಗುತ್ತದೆ. ಯಾವ ಆಹಾರ ಮಳಿಗೆಯನ್ನು ಇನ್ನೂ ಅಂತಿಮಪಡಿಸಿಲ್ಲ ಎಂದು ಐಆರ್‌ಸಿಟಿಸಿ ಮೂಲಗಳು ಹೇಳಿವೆ.

ಭಾರತದ ಅತ್ಯಂತ ವೇಗದ ರೈಲಿನ ಹೆಸರು ವಂದೇ ಭಾರತ್ ಎಕ್ಸ್ ಪ್ರೆಸ್

ಪ್ಯಾಟೀಸ್, ಮಫಿನ್ ಹಾಗೂ ಡೋನಟ್ಸ್

ಪ್ಯಾಟೀಸ್, ಮಫಿನ್ ಹಾಗೂ ಡೋನಟ್ಸ್

ಆಹಾರವನ್ನು ವಿತರಿಸುವವರೆಗೂ ಅದು ಬಿಸಿ ಕಾಯ್ದುಕೊಳ್ಳುವಂತೆ ವಿಶೇಷ ಪ್ಯಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆಹಾರ ಪೂರೈಕೆ ಕುರಿತಂತೆ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಭಾರತೀಯ ರೈಲ್ವೆಯಲ್ಲಿ ಸಿಗುವ ಎಂದಿನ ಉಪಾಹಾರವಾದ ಕಟ್ಲೆಟ್ ಹಾಗೂ ಬ್ರೆಡ್ ಬದಲಾಗಿ, ಈ ರೈಲಿನಲ್ಲಿ ಪ್ಯಾಟೀಸ್, ಮಫಿನ್ ಹಾಗೂ ಡೋನಟ್ಸ್ ಪೂರೈಸಲಾಗುತ್ತದೆ.

ಆಹಾರದ ಬೆಲೆ ಎಷ್ಟಿದೆ?

ಆಹಾರದ ಬೆಲೆ ಎಷ್ಟಿದೆ?

ನವದೆಹಲಿಯಿಂದ ವಾರಣಾಸಿಗೆ ಎಕ್ಸಿಕ್ಯೂಟಿವ್ ಶ್ರೇಣಿಯ ರೈಲು ಪ್ರಯಾಣದಲ್ಲಿ ಬೆಳಗ್ಗೆ ಚಹಾ ಸೇವನೆ, ಉಪಹಾರಾ ಹಾಗೂ ಲಂಚ್ ಪ್ಯಾಕೇಜಿಗೆ 399 ರು ನಿಗದಿಯಾಗಿದೆ. ಚೇರ್ ಕ್ಲಾಸ್ ನಲ್ಲಿ ಪ್ರಯಾಣಿಸುವವರು ಇದೇ ಪ್ಯಾಕೇಜಿಗೆ 344ರು ನೀಡಬೇಕಾಗುತ್ತದೆ. ರಿಟರ್ನ್ ಜರ್ನಿಯಲ್ಲಿ ಕ್ರಮವಾಗಿ ಈ ಪ್ಯಾಕೇಜಿಗೆ 349 ರು ಹಾಗೂ 288 ರು ನಿಗದಿಯಾಗಿದೆ.

ಎಲ್ಲಿಂದ ಎಲ್ಲಿಗೆ? ಸಮಯ ಯಾವಾಗ

ಎಲ್ಲಿಂದ ಎಲ್ಲಿಗೆ? ಸಮಯ ಯಾವಾಗ

ವಂದೇ ಭಾರತ ರೈಲು ನವದೆಹಲಿ ಮತ್ತು ವಾರಾಣಸಿ ನಡುವೆ ಶನಿವಾರದಿಂದ ದಿನನಿತ್ಯ ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ವಾರಾಣಸಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಕಾನ್ಪುರ ಮತ್ತು ಪ್ರಯಾಗ್​ರಾಜ್​ಗಳಲ್ಲಿ ನಿಲುಗಡೆ ನೀಡಲಿದೆ.

ಸಿಂಗಲ್ ಇಂಜಿನ್ ರಹಿತ ಆದರೆ, ಹಲವು ಇಂಜಿನ್ ಸಹಿತ

ಸಿಂಗಲ್ ಇಂಜಿನ್ ರಹಿತ ಆದರೆ, ಹಲವು ಇಂಜಿನ್ ಸಹಿತ

ಇಲ್ಲಿ ತನಕ ಬಳಕೆಯಲ್ಲಿರುವ ರೈಲುಗಳಲ್ಲಿ ಸಿಂಗಲ್ ಇಂಜಿನ್(ಲೋಕೋಮೋಟಿವ್) ಹಲವು ಬೋಗಿ/ಕೋಚ್ ಗಳನ್ನು ಎಳೆದುಕೊಂಡು ಮುಂದಕ್ಕೆ ಸಾಗುತ್ತದೆ. ಈ ಇಂಜಿನ್ ಚಾಲನೆಗೆ ಡೀಸೆಲ್ ಅಥವಾ ಎಲೆಕ್ಟ್ರಿಸಿಟಿ ಅಗತ್ಯ. ಆದರೆ, ಟ್ರೇನ್18ನಲ್ಲಿ ಒಂದೇ ಇಂಜಿನ್ ಮೇಲೆ ಒತ್ತಡ ಹೇರುವುದಕ್ಕಿಂತ, ಪ್ರತಿ ಕೋಚ್ ಗಳಿಗೆ ಸ್ವಸಾಮರ್ಥ್ಯದಿಂದ ಚಲಿಸುವ ಶಕ್ತಿ ನೀಡಲಾಗಿದೆ. ಈ ವ್ಯವಸ್ಥೆ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ಸ್ (EMU) ಎಂದು ಕರೆಯಲಾಗುತ್ತದೆ. ಇದು ಹಾಲಿ ಎಲೆಕ್ಟ್ರಿಕ್ ರೈಲಿಗಿಂತ ಉತ್ತಮವಾಗಿದ್ದು, ಸಮರ್ಥವಾಗಿ ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಮೆಟ್ರೋ, ಸಬ್ ಅರ್ಬನ್ ರೈಲಿಗೆ ಸೀಮಿತವಾಗಿದ್ದ ಇಎಂಯುಗಳನ್ನು ಈಗ ದೂರಗಾಮಿ ಅತಿ ವೇಗದ ಚಾಲನೆಗೆ ಸಿದ್ಧಪಡಿಸಲಾಗಿದೆ

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ

16 ಎಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಇದರ ವೇಗ ಶೇಕಡಾ 10ರಿಂದ 15ರಷ್ಟು ಹೆಚ್ಚು. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

English summary
Train 18, aka, Vande Bharat Express, India's first home-built engine-less train is all set for its maiden journey. According to reports IRCTC has got an ‘elaborate’ menu for Train 18 passengers, similar to what is being offered on trains like the Gatimaan Express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more