ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೀಡಂ 251 ಅಗ್ಗದ ಮೊಬೈಲ್ ಖ್ಯಾತಿಯ ಮೋಹಿತ್ ಬಂಧನ

By Mahesh
|
Google Oneindia Kannada News

ನವದೆಹಲಿ, ಜೂನ್ 11: 'ಫ್ರೀಡಂ 251' ಹೆಸರಿನಲ್ಲಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಬುಕ್ಕಿಂಗ್ ತೆಗೆದುಕೊಂಡಿದ್ದ ರಿಂಗಿಂಗ್ ಬೆಲ್ ಕಂಪೆನಿ ನಿರ್ದೇಶಕ ಮೋಹಿತ್ ಗೋಯೆಲ್ ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿಯೊಬ್ಬರಿಂದ ಹಣ ಪಡೆದು, ಸಾಮೂಹಿಕ ಅತ್ಯಾಚಾರ ಪ್ರಕರಣವೊಂದನ್ನು ಡೀಲ್ ಮಾಡುವುದಾಗಿ ಭರವಸೆ ನೀಡಿದ ಆರೋಪದ ಮೇಲೆ ಮೋಹಿತ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗುತ್ತಿದೆ.

ಫ್ರೀಡಂ 251 ಮಾರಾಟದಿಂದ ರಿಂಗಿಂಗ್ ಬೆಲ್ ಗೆ ಲಾಭ ಎಷ್ಟು? ಫ್ರೀಡಂ 251 ಮಾರಾಟದಿಂದ ರಿಂಗಿಂಗ್ ಬೆಲ್ ಗೆ ಲಾಭ ಎಷ್ಟು?

ರಿಂಗಿಂಗ್ ಬೆಲ್ಸ್ ಸ್ಥಾಪಕ ಮೋಹಿತ್ ಅವರ ವಿರುದ್ಧ ರಾಜಸ್ಥಾನದ ಆಲ್ವಾರ್ ನಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿಯಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದರು.

Freedom 251 Maker Ringing Bells Mohit Goel Arrested

ಮಾರ್ಚ್ 06ರಂದು ಮಹಿಳೆಯೊಬ್ಬರು ತನ್ನ ಮೇಲೆ ಐವರು ಉದ್ಯಮಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಉದ್ಯಮಿಗಳನ್ನು ಬಂಧಿಸಿದಾಗ, ಮಹಿಳೆ ಪರವಾಗಿ ಗೋಯೆಲ್ ಹಾಗೂ ಇನ್ನು ಮೂವರು ಹಣ ಸುಲಿಗೆ ಮಾಡಲು ಯತ್ನಿಸಿದ್ದು ತಿಳಿದು ಬಂದಿದೆ. ಪ್ರಕರಣವನ್ನು ಇತ್ಯರ್ಥಗೊಳಿಸಲು ಸುಮಾರು 5 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಮೊಬೈಲ್ ನೀಡುವುದಾಗಿ ಮುಂಗದ ಹಣ ಪಡೆದು, ಕೈಕೊಟ್ಟ ಆರೋಪದ ಮೇಲೆ ಮೋಹಿತ್ ಬಂಧನಕ್ಕೊಳಗಾಗಿದ್ದರು. ಫೆಬ್ರವರಿ 2016ರಲ್ಲಿ 251 ರೂಪಾಯಿಗೆ ಮೊಬೈಲ್ ನೀಡುವುದಾಗಿ ರಿಂಗಿಂಗ್ ಬೆಲ್ಸ್ ಕಂಪೆನಿ ಹೇಳಿತ್ತು. ಅಷ್ಟೆ ಅಲ್ಲದೆ ಮುಂಗಡ ಬುಕ್ಕಿಂಗ್ ಕೂಡಾ ಆರಂಭಿಸಿತ್ತು. ಜೂನಿನಲ್ಲಿ ಫೋನುಗಳನ್ನು ಡೆಲಿವರಿ ಮಾಡುವುದಾಗಿ ಕಂಪೆನಿ ಹೇಳಿಕೊಂಡಿತ್ತು.ಆದರೆ, ಸರಿಯಾಗಿ ಫೋನ್ ಡೆಲಿವರಿ ಮಾಡದ ಕಾರಣ, ನೂರಾರು ಮಂದಿ ದೂರು ದಾಖಲಿಸಿದ್ದರು. ಹೀಗಾಗಿ, ಅಂದು ಮೋಹಿತ್ ರನ್ನು ಬಂಧಿಸಲಾಗಿತ್ತು.

English summary
Three persons, including Mohit Goel, a partner of Noida-based company Ringing Bells, which had announced Freedom 251 smartphones at a price of Rs. 251, were arrested today for allegedly trying to extort money from a businessman to "settle a gang-rape case", Delhi Police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X