ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತ ಕೊರೊನಾ ಲಸಿಕೆ: ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಏಪ್ರಿಲ್ 26: ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ರೋಗಿಗಳು ಆಕ್ಸಿಜನ್, ಹಾಸಿಗೆಗಳಿಲ್ಲದೆ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ 1 ರಿಂದ ಕೊರೊನಾ ಲಸಿಕಾ ಮೂರನೇ ಅಭಿಯಾನ ಶುರುವಾಗಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ.

ಕೋವಿಡ್ ಲಸಿಕೆ 3ನೇ ಅಭಿಯಾನದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ: ಹರ್ಷವರ್ಧನ್ ಕೋವಿಡ್ ಲಸಿಕೆ 3ನೇ ಅಭಿಯಾನದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ: ಹರ್ಷವರ್ಧನ್

ಅಲ್ಲದೇ ಇದಕ್ಕಾಗಿ 1.34 ಕೋಟಿ ಕೊರೊನಾ ಲಸಿಕೆ ಖರೀದಿ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದೂ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ..18 ವರ್ಷಕ್ಕಿಂತ ಕೆಲಗಿನ ವಯಸ್ಸಿನವರಿಗೂ ಕೊರೊನಾ ವೈರಸ್ ಸೋಂಕು ತಗುಲಿದ ಉದಾಹರಣೆಗಳಿವೆ. ನಾವು ಈ ಮಕ್ಕಳ ಕುರಿತೂ ಚಿಂತನೆ ನಡೆಸಬೇಕಿದೆ ಎಂದು ಕೇಜ್ರಿವಾಲ್ ನುಡಿದಿದ್ದಾರೆ.

Free Vaccine In Delhi To All Above 18; Arvind Kejriwals Message To Firms

ಆದರೆ ಕೇಜ್ರಿವಾಲ್ ಸರ್ಕಾರದ ಈ ಆದೇಶ ದೆಹಲಿ ಸರ್ಕಾರದ ಸುಪರ್ದಿಗೆ ಬರುವ ಸರ್ಕಾರಿ ಆಸ್ಪತ್ರೆಗಳಿಗಷ್ಟೇ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಕೊರೊನಾ ಲಸಿಕೆ ಪಡೆಯಬೇಕಾಗಬಹುದು.

ಇದೇ ಸಂದರ್ಭದಲ್ಲಿ ಕೊರೊನಾ ಲಸಿಕೆಯ ಪ್ರತಿ ಡೋಸ್ ಬೆಲೆಯನ್ನು 150 ರೂ.ಗೆ ಇಳಿಸುವಂತೆ ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡಿರುವ ಕೇಜ್ರಿವಾಲ್, ಲಾಭ ಗಳಿಕೆಗೆ ಇಡೀ ಜೀವನ ಬಾಕಿ ಇದೆ. ಈ ಸಮಯದಲ್ಲಿ ಜನತೆಯ ಸೇವೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ.

English summary
Delhi will vaccinate all above 18 free of cost, Chief Minister Arvind Kejriwal said today. Vaccinations will be open to all adults from Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X