ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಮೆಟ್ರೋ ಪ್ರಯಾಣ ಉಚಿತ: ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 27: ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ದೆಹಲಿ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಸಾರಿಗೆ ಸಂಪರ್ಕದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸುಲಭ ಓಡಾಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮೆಟ್ರೋ ರೈಲಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶದ ಕಾರಣವನ್ನು ದೆಹಲಿ ಸರ್ಕಾರ ನೀಡಿತ್ತು. ಈ ಉದ್ದೇಶವನ್ನು ಈಡೇರಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.

ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್ ಮಹಿಳೆಯರಿಗೆ ಬಸ್, ಮೆಟ್ರೋ ಪ್ರಯಾಣ ಉಚಿತ: ಕೇಜ್ರಿವಾಲ್ ಹೊಸ ಪ್ಲ್ಯಾನ್

ದೆಹಲಿ ಮೆಟ್ರೋ ರೈಲು ನಿಗಮದಲ್ಲಿ (ಡಿಎಂಆರ್‌ಸಿ) ಕೇಂದ್ರ ಮತ್ತು ದೆಹಲಿ ಸರ್ಕಾರಗಳು 50:50ರಷ್ಟು ಪಾಲುದಾರಿಕೆ ಹೊಂದಿವೆ.

free rides in metro for women centre rejects delhi aap government proposal

ಮಹಿಳೆಯರಿಗೆ ಮೆಟ್ರೋ ರೈಲು ಹಾಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಸಂಬಂಧ ಜೂನ್‌ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಪ್ರಸ್ತಾವ ಮುಂದಿಟ್ಟಿತ್ತು. ಈ ನಿರ್ಧಾರದಿಂದ ಮಹಿಳೆಯರು ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಅವರ ಸುರಕ್ಷತೆಗೂ ನೆರವಾಗುತ್ತದೆ ಎಂದು ಎಎಪಿ ಸಮರ್ಥಿಸಿಕೊಂಡಿತ್ತು.

ಮಹಿಳೆಯರಿಗೆ ಉಚಿತ ಪ್ರಯಾಣ ವಿರೋಧಿಸಿ ಮೋದಿಗೆ 'ಮೆಟ್ರೋ ಮ್ಯಾನ್' ಪತ್ರಮಹಿಳೆಯರಿಗೆ ಉಚಿತ ಪ್ರಯಾಣ ವಿರೋಧಿಸಿ ಮೋದಿಗೆ 'ಮೆಟ್ರೋ ಮ್ಯಾನ್' ಪತ್ರ

ಇದು 2020ರ ವಿಧಾನಸಭೆ ಚುನಾವಣೆಗೋಸ್ಕರ ಮಾಡುತ್ತಿರುವ ಗಿಮಿಕ್ ಅಷ್ಟೇ ಎಂದು ಈ ಯೋಜನೆಯನ್ನು ಬಿಜೆಪಿ ಟೀಕಿಸಿತ್ತು.

ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಮೆಟ್ರೋದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸಂಚರಿಸುವ ಮೂಲಕ ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡಬೇಕಿದೆ. ಇದರಿಂದ ಮಾಲಿನ್ಯ ನಿಯಂತ್ರಣವೂ ಸಾಧ್ಯ, ಜೊತೆಗೆ ಮಹಿಳೆಯರಿಗೂ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದರು.

ಹೊಸ ಯೋಜನೆ: ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ಹೊಸ ಯೋಜನೆ: ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ

ಈ ಉದ್ದೇಶವನ್ನು 'ಮೆಟ್ರೋ ಮ್ಯಾನ್' ಎಂದೇ ಖ್ಯಾತರಾದ ಡಿಎಂಆರ್‌ಸಿ ಮಾಜಿ ಮುಖ್ಯಸ್ಥ ಇ. ಶ್ರೀಧರನ್ ವಿರೋಧಿಸಿದ್ದರು. ಇದರಿಂದ ಮೆಟ್ರೋ ನಿರ್ವಹಣೆಯಲ್ಲಿ ಅದಕ್ಷತೆ ಉಂಟಾಗಲಿದ್ದು, ದಿವಾಳಿತನಕ್ಕೆ ಎಡೆ ಮಾಡಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದರು.

English summary
Centre on Thursday rejected the proposal of free rides for women in Metro by Delhi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X