ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ

|
Google Oneindia Kannada News

ಇಂಫಾಲ, ಜು.19: ಕೆಲವು ಫೇಸ್‌ಬುಕ್ ಪೋಸ್ಟ್‌ಗಳ ವಿಚಾರದಲ್ಲಿ ದೇಶದ್ರೋಹ ಆರೋಪದಡಿ ಬಂಧಿಸಲ್ಪಟ್ಟ ಮಣಿಪುರ ಮೂಲದ ರಾಜಕೀಯ ಕಾರ್ಯಕರ್ತನ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ಕೋವಿಡ್ ಚಿಕಿತ್ಸೆಗೆ ಹಸುವಿನ ಸೆಗಣಿ ಹಾಗೂ ಗೋಮೂತ್ರ ಶಿಫಾರಸು ಮಾಡಿದ್ದ ಬಿಜೆಪಿಯ ನಾಯಕನನ್ನು ಟೀಕೆ ಮಾಡಿ "ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವು ಕೆಲಸ ಮಾಡುವುದಿಲ್ಲ" ಎಂದು 37 ವರ್ಷದ ಲೈಚೋಂಬಮ್ ಎರೆಂಡ್ರೊ ಹೇಳಿದ್ದರು. ಈ ಹಿನ್ನೆಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಣಿಪುರ ನಾಯಕನನ್ನು ಬಂಧಿಸಲಾಗಿತ್ತು.

'ಆಘಾತಕಾರಿ': ರದ್ದು ಮಾಡಿದ ಕಾನೂನಿನಡಿ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್'ಆಘಾತಕಾರಿ': ರದ್ದು ಮಾಡಿದ ಕಾನೂನಿನಡಿ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣವನ್ನು ನಾಳೆಯವರೆಗೆ ಮುಂದೂಡಬೇಕೆಂದು ಬಯಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆದರೆ ನ್ಯಾಯಾಧೀಶರು ಕೂಡಲೇ ಲೈಚೋಂಬಮ್ ಎರೆಂಡ್ರೊರನ್ನು ಬಿಡುಗಡೆ ಮಾಡಿ ಎಂದು ಆದೇಶ ನೀಡಿದ್ದಾರೆ.

Free him before 5pm today: Supreme Court on activist held for fb post

"ಅರ್ಜಿದಾರನನ್ನು ಬಂಧನದಲ್ಲಿ ಇರಿಸುವುದರಿಂದ 21 ನೇ ವಿಧಿ ಅನ್ವಯ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಈ ಹಿನ್ನೆಲೆ ಇಂದು ಸಂಜೆ 5 ಗಂಟೆಯೊಳಗೆ 1,000 ವೈಯಕ್ತಿಕ ಬಾಂಡ್‌ನೊಂದಿಗೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ," ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಶಾ ಹೇಳಿದ್ದಾರೆ. ಎರೆಂಡ್ರೊರ ತಂದೆ ಜಾಮೀನಿಗಾಗಿ ಮನವಿ ಮಾಡಿದ್ದರು.

ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಲೈಚೋಂಬಮ್ ಮತ್ತು ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಖೇಮ್, ಅಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಸಾವಿನ ಬಗ್ಗೆ ನೀಡಿದ ಪ್ರತಿಕ್ರಿಯೆಯ ಆಧಾರದಲ್ಲಿ ಬಂಧಿಸಲಾಗಿತ್ತು. ಮಣಿಪುರ ಬಿಜೆಪಿ ಉಪಾಧ್ಯಕ್ಷ ಉಷಾಮ್ ದೇಬನ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ ಪ್ರೇಮಾನಂದ ಮೀಟೆ ಈ ಪೋಸ್ಟ್‌ಗಳು ಆಕ್ರಮಣಕಾರಿ ಎಂದು ದೂರು ನೀಡಿದ್ದರು.

'ಕೋವಿಡ್‌ ಮರಣ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಿ' : ಕೇಂದ್ರಕ್ಕೆ ಸುಪ್ರೀಂ ಸೂಚನೆ 'ಕೋವಿಡ್‌ ಮರಣ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಿ' : ಕೇಂದ್ರಕ್ಕೆ ಸುಪ್ರೀಂ ಸೂಚನೆ

ಇದಕ್ಕೂ ಮುನ್ನ, 2020 ರ ಜೂನ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ರಾಜ್ಯಸಭಾ ಸಂಸದ ಸನಜೋಬಾ ಲೀಶೆಂಬಾ ಫೋಟೋವನ್ನು ಇದ್ದ ಮತ್ತೊಂದು ಫೇಸ್‌ಬುಕ್ ಪೋಸ್ಟ್ ವಿರುದ್ದ ರಾಜ್ಯ ಪೊಲೀಸರು ದೇಶದ್ರೋಹ ದೂರು ದಾಖಲಿಸಿದ್ದರು. ಮಿನಾಯ್ ಮಚಾ ಅಂದರೆ ಸೇವಕನ ಮಗ ಎಂಬ ಶೀರ್ಷಿಕೆಯ ಫೋಟೋದಲ್ಲಿ ಬಿಜೆಪಿಯ ಹಿರಿಯ ನಾಯಕನ ಮುಂದೆ ಮಣಿಪುರದ ನಾಮಸೂಚಕ ರಾಜ ತಲೆ ಬಾಗಿರುವುದು ತೋರಿಸುತ್ತದೆ. ಇವೆರಡು ಪ್ರಕರಣ ಬಳಿಕ ಲೈಚೋಂಬಮ್ ಜಾಮೀನಿನಲ್ಲಿದ್ದರು.

ಇನ್ನು ಕಳೆದ ವಾರ ಸುಪ್ರೀಂ ಕೋರ್ಟ್, "75 ವರ್ಷಗಳ ಸ್ವಾತಂತ್ರ್ಯದ ನಂತರ ದೇಶದ್ರೋಹ ಕಾನೂನು ಇನ್ನೂ ಅಗತ್ಯವಿದೆಯೇ" ಎಂದು ಪ್ರಶ್ನಿಸಿತ್ತು. "ಈ ಕಾನೂನು ಸಂಸ್ಥೆಗಳ ಕಾರ್ಯಚಟುವಟಿಕೆಗೆ ಗಂಭೀರ ಬೆದರಿಕೆಯಾಗಿದೆ. ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ," ಎಂದು ಹೇಳಿತ್ತು. ಹಾಗೆಯೇ ಇದು ಹರಿತವಿರುವ ಗರಗಸಕ್ಕೆ ಹೋಲಿಸಿದೆ. ವಾದದ ಸಮಯದಲ್ಲಿ, ದೇಶದ್ರೋಹ ಕಾನೂನಿನ ಇತಿಹಾಸದಲ್ಲಿ "ಕನಿಷ್ಠ ಅಪರಾಧ ಅಥವಾ ಕಡಿಮೆ ಪ್ರಮಾಣದ ಶಿಕ್ಷೆ" ಇದೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಸರ್ಕಾರದ ಉನ್ನತ ವಕೀಲ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ "ಮಾರ್ಗಸೂಚಿಗಳೊಂದಿಗೆ" ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ವಾದಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
The Supreme Court today ordered the release of Leichombam Erendro, a Manipur-based political activist arrested for sedition in May over some Facebook posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X