ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಮಾತ್ರ ಕೊವಿಡ್ ಪರೀಕ್ಷೆ ಉಚಿತ: ಸುಪ್ರೀಂ ಕೋರ್ಟ್

|
Google Oneindia Kannada News

ದೆಹಲಿ, ಏಪ್ರಿಲ್ 13: ಮಾನವೀಯತೆ ದೃಷ್ಟಿಯಿಂದ ಖಾಸಗಿ ಲ್ಯಾಬ್‌ಗಳು ಕೊರೊನಾ ಪರೀಕ್ಷೆಯನ್ನು ಉಚಿತವಾಗಿ ಮಾಡಬೇಕು ಎಂದು ಏಪ್ರಿಲ್ 8 ರಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದೀಗ, ಈ ಆದೇಶವನ್ನು ಮರು ಪರಿಶೀಲಿಸಿ ಹೊಸ ಆದೇಶ ಹೊರಡಿಸಿದೆ.

ಆರ್ಥಿಕವಾಗಿ ಬಡವರು ಎಂದು ಗುರುತಿಸಿಕೊಂಡವರಿಗೆ ಕೊರೊನಾ ಪರೀಕ್ಷೆಯನ್ನು ಉಚಿತವಾಗಿ ಮಾಡಲಿ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ವಿಭಾಗದಲ್ಲಿ ಯಾರೆಲ್ಲ ಬರುತ್ತಾರೆ ಎಂದು ಕೇಂದ್ರ ಸರ್ಕಾರ ನಿರ್ಧರಿಸಲಿ ಎಂದು ಸೂಚಿಸಿದೆ.

ಉಚಿತ ಪರೀಕ್ಷೆ: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಅಡ್ಡಿ?ಉಚಿತ ಪರೀಕ್ಷೆ: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಅಡ್ಡಿ?

'ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅರ್ಹತೆ ಪಡೆದವರಿಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಈ ಆದೇಶ ಅನ್ವಯವಾಗಬೇಕು. ಇದು ಯಾರಿಗೆಲ್ಲಾ ಅನ್ವಯವಾಗುತ್ತೆ ಎಂದು ಒಂದು ವಾರದೊಳಗೆ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

Free COVID19 Testing For Only Poor Said Supreme Court

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಕೊರೊನಾ ಪರೀಕ್ಷೆ ಮಾಡಲು ಖಾಸಗಿ ಲ್ಯಾಬ್‌ಗಳು ಅನುಮತಿ ಪಡೆದುಕೊಂಡಿದ್ದು, ಪರೀಕ್ಷೆ ಶುಲ್ಕವಾಗಿ 4500 ರೂಪಾಯಿ ಹಣ ನಿಗದಿ ಮಾಡಿತ್ತು. ಬಳಿಕ, ಕೋರ್ಟ್ ಮಾನವೀಯ ದೃಷ್ಟಿಯಿಂದ ಉಚಿತವಾಗಿ ಮಾಡಿ ಎಂದು ಹೇಳಿತ್ತು.

ಈ ಆದೇಶ ಬಳಿಕ ಖಾಸಗಿ ಲ್ಯಾಬ್‌ಗಳು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಉಚಿತವಾಗಿ ಮಾಡುವುದರಿಂದ ಲ್ಯಾಬ್ ಆರ್ಥಿಕ ತೊಂದರೆಗೆ ಒಳಗಾಗುತ್ತೆ. ಈಗಾಗಲೇ ದೇಶದಲ್ಲಿ ಆರ್ಥಿಕತೆ ಕುಸಿತ ಕಾಣುತ್ತಿದೆ. ಲ್ಯಾಬ್‌ನಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಈಗ, ಕೋರ್ಟ್ ತನ್ನ ಆದೇಶದಲ್ಲಿ ಬದಲಾವಣೆ ತಂದಿದೆ.

English summary
Free COVID19 Testing for only poor (Ayushman Bharat and other category of economically weaker) said Supreme court on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X