ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ವರನ್ನು ದಹಿಸಿದ ಬೆಂಕಿ: ದೆಹಲಿಯ ಫ್ಯಾಕ್ಟರಿಯಲ್ಲಿ ದುರಂತ

|
Google Oneindia Kannada News

ನವದೆಹಲಿ, ನವೆಂಬರ್ 19: ಕೇಂದ್ರ ದೆಹಲಿಯ ಕರೋಲ್ ಬಾಗ್‌ ಸಮೀಪದ ಜನನಿಬಿಡ ಫ್ಯಾಕ್ಟರಿ ಒಂದರಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ

ಸೋಮವಾರ ಮಧ್ಯಾಹ್ನ 12.23ರ ಸಮಯಕ್ಕೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿಯ ಜ್ವಾಲೆ ಕಾರ್ಖಾನೆಯನ್ನು ಆವರಿಸಿತ್ತು. ಬಟ್ಟೆಗಳನ್ನು ಒಗೆಯಲು ಬಳಸುವ ದ್ರಾವಕವೊಂದು ನೆಲದ ಮೇಲೆ ಚೆಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿತ್ತು ಎಂದು ಹೇಳಲಾಗಿದೆ.

ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ

ಘಟನೆಯಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಘಟನೆ ವೇಳೆ ಬಾಗಿಲಿನ ಸಮೀಪವೇ ಕುಳಿತಿದ್ದ ಸ್ಥೂಲಕಾಯದ ವ್ಯಕ್ತಿಯೊಬ್ಬರು ನಿರ್ಗಮನ ದ್ವಾರದ ಮೂಲಕ ತಪ್ಪಿಸಿಕೊಳ್ಳಲು ಹೋಗಿ ಅಲ್ಲಿ ಸಿಲುಕಿಕೊಂಡರು. ಇದರಿಂದ ಆ ಕಟ್ಟಡದಲ್ಲಿದ್ದ ಇತರರೂ ಹೊರ ಹೋಗುವಂತೆ ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

four dead in a fire accident central delhi factory

ಮೃತಪಟ್ಟವರನ್ನು ಬಾಗನ್ ಪ್ರಸಾದ್ (55), ಆರ್ಎಂ ನರೇಶ್ (40), ಆರತಿ (20) ಮತ್ತು ಆಶಾ (40) ಎಂದು ಗುರುತಿಸಲಾಗಿದೆ.

4 ನಾಯಿಮರಿಗಳ ಸಜೀವ ದಹನ, ಅಸಹಾಯಕವಾಗಿ ಕಣ್ಣೀರಿಟ್ಟ ತಾಯಿ ನಾಯಿ4 ನಾಯಿಮರಿಗಳ ಸಜೀವ ದಹನ, ಅಸಹಾಯಕವಾಗಿ ಕಣ್ಣೀರಿಟ್ಟ ತಾಯಿ ನಾಯಿ

25 ವರ್ಷದ ಅಜಿತ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

English summary
Four people were killed in a fire incident at a factory in central delhi on Monday. Two were them are women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X