ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತ ಪ್ರಕರಣ: ಶಿಕ್ಷೆಯಿಂದ ಪಾರಾದ 'ಬಾಲಾಪರಾಧಿ' ಯುವಕ!

|
Google Oneindia Kannada News

ನವದೆಹಲಿ, ಜನವರಿ 9: ವೇಗವಾಗಿ ಚಲಿಸುತ್ತಿದ್ದ ಮರ್ಸಿಡೆಸ್ ಬೆಂಜ್ ಕಾರು ಯುವಕನೊಬ್ಬನ ಮೇಲೆ ಹಾದು ಆತ ಮೃತಪಟ್ಟ ಘಟನೆ ದೆಹಲಿಯಲ್ಲಿ 2016ರಲ್ಲಿ ನಡೆದಿತ್ತು. ಕಾರು ಓಡಿಸುತ್ತಿದ್ದ ಚಾಲಕನಿಗೆ 18 ವರ್ಷ ತುಂಬಲು ಘಟನೆ ನಡೆದ ದಿನ ನಾಲ್ಕು ದಿನಗಳು ಮಾತ್ರವೇ ಇತ್ತು.

ತನ್ನ ತಂದೆಯ ಕಾರನ್ನು ಮನಬಂದಂತೆ ಓಡಿಸುತ್ತಿದ್ದ ಬಾಲಕ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಮೂರು ಬಾರಿ ದಂಡ ಹಾಕಿಸಿಕೊಂಡಿದ್ದ. ಈಗ ಆತ ಪ್ರಾಪ್ತ ವಯಸ್ಸಿಗೆ ಬಂದಿದ್ದರೂ ಆತನನ್ನು ಬಾಲಾಪರಾಧಿ ಎಂದು ಪರಿಗಣಿಸಿರುವ ಸುಪ್ರೀಂಕೋರ್ಟ್, ಇನ್ನು ಒಂದು ದಿನವೂ ಆತ ಜೈಲಿನಲ್ಲಿ ಕಳೆಯುವಂತಿಲ್ಲ ಎಂದು ಆದೇಶಿಸಿದೆ. ಹಾಗೆಯೇ ಆತನ ಮೇಲೆ ನಿಗಾ ಇರಿಸಲು ಸೂಚಿಸಿದೆ.

ಬೆಂಗಳೂರು; ಒನ್‌ ವೇನಲ್ಲಿ ಬಂದ ಆಂಬ್ಯುಲೆನ್ಸ್‌ ಡಿಕ್ಕಿ, 2 ಸಾವುಬೆಂಗಳೂರು; ಒನ್‌ ವೇನಲ್ಲಿ ಬಂದ ಆಂಬ್ಯುಲೆನ್ಸ್‌ ಡಿಕ್ಕಿ, 2 ಸಾವು

2016ರ ಜನವರಿಯಲ್ಲಿ ಉತ್ತರ ದೆಹಲಿಯ ಲುಡ್ಲೊ ಕ್ಯಾಸ್ಟಲ್ ಶಾಲೆ ಸಮೀಪ ರಸ್ತೆ ದಾಟುತ್ತಿದ್ದ ಸಿದ್ಧಾರ್ಥ್ ಶರ್ಮಾ ಅವರಿಗೆ ಅತಿ ವೇಗದಿಂದ ಬಂದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. ಕೆಲವು ದಿನಗಳ ಬಳಿಕ ಆತ ಶರಣಾಗಿದ್ದ.

Four Days Before Turning 18 Mercedes Hit And Run Case Tried As Juvenile

'ನಾವಿಲ್ಲಿ ಪಜಲ್ ಪರಿಹರಿಸುತ್ತಿಲ್ಲ. ನಾವು ಕಾನೂನಿನಲ್ಲಿ ಒಂದು ಪದವನ್ನು ಸೇರಿಸಲು ಅಥವಾ ಬಳಸಲು ಸಾಧ್ಯವಿಲ್ಲ. ಎರಡು ಬಗೆಯಲ್ಲಿ ಪ್ರಕರಣವನ್ನು ವ್ಯಾಖ್ಯಾನಿಸಲು ಅವಕಾಶವಿದ್ದಾಗ, ಬಾಲಾಪರಾಧಿಗಳ ಪರವಾಗಿ ಇರುವುದನ್ನು ಆಯ್ದುಕೊಳ್ಳಬೇಕು' ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ನೇತೃತ್ವದ ನ್ಯಾಯಪೀಠ ಹೇಳಿತು.

ಗುರುವಾರ ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂಕೋರ್ಟ್, ಈ ಅಪರಾಧ ಪ್ರಕರಣವು ಬಾಲಾಪರಾಧಿ ನ್ಯಾಯ ಕಾಯ್ದೆಯ ಅಡಿಯಲ್ಲಿನ 'ಹೇಯ ಕೃತ್ಯ' ವಿಭಾಗಕ್ಕೆ ಸೇರುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ರಾಮನಗರ; ಭೀಕರ ಅಪಘಾತ 3 ಸಾವು, 6 ಜನರಿಗೆ ಗಾಯರಾಮನಗರ; ಭೀಕರ ಅಪಘಾತ 3 ಸಾವು, 6 ಜನರಿಗೆ ಗಾಯ

ಕಾನೂನು ಅವಕಾಶಗಳು ಸ್ಪಷ್ಟವಾಗಿವೆ. ಇದನ್ನು ಬೇರೆ ರೀತಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಾವು ಕಾನೂನಿಗೆ ಒಳಪಟ್ಟಿದ್ದೇವೆ ಎಂದು ನ್ಯಾಯಮೂರ್ತಿ ಹೇಳಿದರು. ಕಾಯ್ದೆಯ ಪ್ರಕಾರ ಅಪರಾಧ ಪ್ರಕರಣಗಳಿಗೆ ಕನಿಷ್ಠ ಶಿಕ್ಷೆಯನ್ನು ನೀಡಲು ಆಗುವುದಿಲ್ಲ ಎಂದು ಪೀಠ ತಿಳಿಸಿತು.

ಈ ಪ್ರಕರಣದಲ್ಲಿ ಬಾಲಾಪರಾಧಿ ವಿರುದ್ಧ ಐಪಿಸಿ ಸೆಕ್ಷನ್ 304ರ ಪ್ರಕಾರ ಕೊಲೆಯಲ್ಲದ ದಂಡನೀಯ ನರಹತ್ಯೆ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೆ ಸೆಕ್ಷನ್ 304ರ ಅಡಿಯಲ್ಲಿನ ಅಪರಾಧಗಳಿಗೆ ಎರಡು ವಿಭಿನ್ನ ಶಿಕ್ಷೆ ನೀಡಬಹುದು. ಗರಿಷ್ಠ ಜೀವಾವಧಿ ಅಥವಾ ಹತ್ತು ವರ್ಷ ಜೈಲು ಶಿಕ್ಷೆ ನೀಡಬಹುದು. ಆದರೆ ಕನಿಷ್ಠ ಶಿಕ್ಷೆಯ ಪ್ರಮಾಣವಿಲ್ಲ.

ಅಪ್ರಾಪ್ತ ವಯಸ್ಸಿನವನಾಗಿದ್ದ ಅಪರಾಧಿಯು ಹೇಯ ಅಪರಾಧ ಕೃತ್ಯ ಎಸಗಿದ್ದರೆ ಮಾತ್ರ ಆತ ವಯಸ್ಕನಾದಾಗ ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಬಹುದು. ಇದಕ್ಕೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದು.

ಈ ಪ್ರಕರಣದಲ್ಲಿ ಬಲಿಯಾಗಿದ್ದ 32 ವರ್ಷದ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಸಿದ್ಧಾರ್ಥ ಶರ್ಮಾ ಅವರ ಸಹೋದರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಪರಾಧಿಯು ಈ ಕೃತ್ಯದ ಅಪಾಯಗಳ ಬಗ್ಗೆ ಜ್ಞಾನ ಹೊಂದಿದ್ದ ಮತ್ತು ಆತನ ಮಾನಸಿಕ ಸಾಮರ್ಥ್ಯವನ್ನು ಪರಿಗಣಿಸಿ ಆತನನ್ನು ವಯಸ್ಕ ಎಂದೇ ಪರಿಗಣಿಸಬಹುದು ಎಂಬುದಾಗ ಬಾಲಾಪರಾಧ ನ್ಯಾಯಮಂಡಳಿ ಹೇಳಿತ್ತು. ಇದನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ದುಬೈನಲ್ಲಿ ರಸ್ತೆ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವುದುಬೈನಲ್ಲಿ ರಸ್ತೆ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ಘಟನೆ ನಡೆದಾಗ 18 ವರ್ಷ ತುಂಬಲು ನಾಲ್ಕು ವರ್ಷವಷ್ಟೇ ಕಡಿಮೆ ಇದ್ದ ಅಪರಾಧಿ, ಈಗ 22 ವರ್ಷದ ಯುವಕ. ಆದರೆ ಆತನನ್ನು ಅಪರಾಧ ಪ್ರಕರಣದ ವಿಚಾರದಲ್ಲಿ ಯುವಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

English summary
Supreme Court considered a young man who was accused in the 2016 Mercedes hit and run case as juvenile, 4 days before turning 18 when he took the life of Siddharth Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X