ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ ಬರ್ಖಾ ದತ್ ಗೆ ಆನ್ಲೈನ್ ನಲ್ಲಿ ಕಿರುಕುಳ, 4 ಮಂದಿ ಬಂಧನ

|
Google Oneindia Kannada News

ನವದೆಹಲಿ, ಮಾರ್ಚ್ 20: ಪತ್ರಕರ್ತೆ ಬರ್ಖಾದತ್ ಅವರಿಗೆ ಆನ್ ಲೈನ್ ನಲ್ಲಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ನಾಲ್ವರು ಬಂಧಿಸಿ, ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯ ಸೈಬಲ್ ಕ್ರೈಂ ವಿಭಾಗದ ಪೊಲೀಸರು ಬಂಧಿತ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ವ್ಯವಸ್ಥಿತವಾಗಿ ಬರ್ಖಾ ವಿರುದ್ಧ ಟ್ರಾಲ್ ಮಾಡಲಾಗುತ್ತಿತ್ತು. ನಂತರ ಅವರಿಗೆ ಇಮೇಲ್, ವಾಟ್ಸಾಪ್ ಕಾಲ್, ಎಸ್ಎಂಎಸ್ ಮೂಲಕ ಕಿರುಕುಳ ನೀಡಲು ಆರಂಭಿಸಿದರು.

ಎಂಜೆ ಅಕ್ಬರ್ ಕೇಸ್ : ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು ಎಂಜೆ ಅಕ್ಬರ್ ಕೇಸ್ : ಪತ್ರಕರ್ತೆ ಪ್ರಿಯಾ ರಮಣಿಗೆ ಜಾಮೀನು

ಈ ಕುರಿತಂತೆ ಸೈಬರ್ ಸೆಲ್ ನಲ್ಲಿ ಫೆಬ್ರವರಿ 21ರಂದು ಬರ್ಖಾ ಅವರು ದೂರು ದಾಖಲಿಸಿದ್ದರು. ತಮ್ಮ ವಾಟ್ಸಾಪ್ ನಂಬರ್ ಗೆ ಬಂದಿರುವ ಅಶ್ಲೀಲ ಸಂದೇಶ, ಚಿತ್ರ, ವಿಡಿಯೋಗಳನ್ನು ಸಾಕ್ಷ್ಯವಾಗಿ ನೀಡಿದರು. ಕಿರುಕುಳ ನೀಡುತ್ತಿದ್ದ ನಾಲ್ವರು ನಂತರ ಜೀವ ಬೆದರಿಕೆಯನ್ನು ಹಾಕಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

 Four arrested for harassing journalist Barkha Dutt online

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 354 ಡಿ, 506, 507, 120 ಬಿ, ಐಟಿ ಕಾಯ್ದೆ 67 ಹಾಗೂ 67 ಎ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಬಂಧಿತರನ್ನು ದೆಹಲಿ ನಿವಾಸಿಗಳಾದ ರಾಜೀವ್ ಶರ್ಮ(23), ಹೇಮರಾಜ್ ಕುಮಾರ್ (31), ಆದಿತ್ಯ ಕುಮಾರ್ (34) ಹಾಗೂ ಸೂರತ್ ನಿವಾಸಿ ಗುರ್ಫಾನ್ ಪಿಂಜಾರಿ(45) ಎಂದು ಗುರುತಿಸಲಾಗಿದೆ.

English summary
On February 21, Dutt had registered an FIR with the cyber cell stating that she was receiving threatening phone calls, messages, WhatsApp calls and obscene pictures from unknown people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X