ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ : ಆಸೀಮಾನಂದ ಸೇರಿ ನಾಲ್ವರು ನಿರ್ದೋಷಿ

|
Google Oneindia Kannada News

ನವದೆಹಲಿ, ಮಾರ್ಚ್ 20: ಸಂಜೋತಾ ಎಕ್ಸ್​ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಕುಲ ರಾಷ್ಟ್ರೀಯ ತನಿಖಾ ತಂಡದ ಕೋರ್ಟ್ ಇಂದು ತೀರ್ಪು ನೀಡಿದೆ. ಅಸೀಮಾನಂದ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಲಾಗಿದೆ.

ಪ್ರಕರಣದಲ್ಲಿ ನಬಾಕುಮಾರ್​ ಅಲಿಯಾಸ್​ ಸ್ವಾಮಿ ಅಸೀಮಾನಂದ, ಸುನಿಲ್​ ಜೋಷಿ ಅಲಿಯಾಸ್​ ಮನೋಜ್​ ಜೋಷಿ, ರಾಮಚಂದ್ರ ಕಲಸಂಗ್ರಾ ಅಲಿಯಾಸ್​ ರಾಮ್​ಜೀ ಅಲಿಯಾಸ್​ ವಿಷ್ಣು ಪಟೇಲ್​, ಸಂದೀಪ್​ ಡಾಂಗೆ ಅಲಿಯಾಸ್​ ಪರ್ಮಾನಂದ, ಮತ್ತು ಲೋಕೇಶ್​ ಶರ್ಮಾ ಅಲಿಯಾಸ್​ ಕಲು ಎಂಬುವವರು ಆರೋಪಿಗಳಾಗಿದ್ದರು.

Four accused including Aseemanand acquitted in Samjauta Express blast case

ಸಂಜ್ಯೋತ ರೈಲು ಸ್ಫೋಟ: ಅಸೀಮಾನಂದಗೆ ಜಾಮೀನುಸಂಜ್ಯೋತ ರೈಲು ಸ್ಫೋಟ: ಅಸೀಮಾನಂದಗೆ ಜಾಮೀನು

ಸಂಕಟಮೋಚನ ದೇಗುಲ ಸೇರಿದಂತೆ ವಿವಿಧ ಹಿಂದು ದೇವಾಲಯಗಳ ಮೇಲಿನ ದಾಳಿಗೆ ಪ್ರತಿಕಾರವಾಗಿ ಮುಸ್ಲಿಂ ಮಸೀದಿಗಳ ಮೇಲೆ ದಾಳಿ ಮಾಡಲಾಗಿತ್ತು. ಮಾಲೇಗಾಂವ್, ಸಮಜೋತ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ಹಾಗೂ ಮೆಕ್ಕಾ ಮಸೀದಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇತರ ಹಿಂದೂ ಕಾರ್ಯಕರ್ತರೊಡನೆ ತಾವೂ ಭಾಗಿಯಾಗಿದ್ದಾಗಿ ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ಬಂಧಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಸ್ವಾಮಿ ಆಸೀಮಾನಂದ ತಪ್ಪೊಪ್ಪಿಕೊಂಡಿದ್ದರು. ಆಸೀಮಾನಂದ ಹಾಗೂ ಇತರೆ ಮೂವರು ಆರೋಪಿಗಳ ಮೇಲಿನ ವಿವಿಧ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ನಡೆಸುತ್ತಿತ್ತು.

ಹರ್ಯಾಣದಿಂದ 160 ಕಿ.ಮೀ ದೂರವಿರುವ ಪಾಣಿಪಟ್ ಸಮೀಪದ ದಿವಾನ ಎಂಬ ಗ್ರಾಮದ ಬಳಿ 2007ರ ಫೆ.18ರಂದು ಸಂಜ್ಯೋತಾ ಎಕ್ಸ್ ಪ್ರೆಸ್ ಲಿಂಗ್ ರೈಲು ಸ್ಫೋಟಗೊಂಡಿತ್ತು. ಸ್ಫೋಟದ ರುವಾರಿ ಎಂದು ಆಸೀಮಾನಂದ ಗುರುತಿಸಲಾಗಿತ್ತು. ರೈಲು ಸ್ಫೋಟದಲ್ಲಿ ಸುಮಾರು 68 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಹೆಚ್ಚಿನ ಮಂದಿ ಪಾಕಿಸ್ತಾನಿ ಪ್ರಯಾಣಿಕರಿದ್ದರು. ಆಸೀಮಾನಂದ ಅವರು ಹಿಂದೂಪರ ಸಂಘಟನೆ ಅಭಿನವ್ ಭಾರತ್ ಸಂಘಟನೆಯ ಸದಸ್ಯರಾಗಿದ್ದರು. 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ನಂತರ ಆಸೀಮಾನಂದ ಸ್ವಾಮಿಯನ್ನು ಬಂಧಿಸಲಾಗಿತ್ತು

English summary
The special court has acquitted all four accused in the Samjauta express blast case. The court said that it did not find any evidence against Aseemanand, Lokesh Sharma, Kamal Chauhan and Rajinder Chudhary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X