ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

|
Google Oneindia Kannada News

ನವದೆಹಲಿ, ಜನವರಿ 29: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ (ಜೂನ್ 03, 1930 - ಜನವರಿ 29, 2019) ಮಂಗಳವಾರ ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಅಲ್ಝಮೈರ್(ಮರೆವಿನ ಕಾಯಿಲೆ) ಕಾಯಿಲೆಯಿಂದ ಬಳಲುತ್ತಿದ್ದರು.

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಫರ್ನಾಡಿಸ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾಮಾಜಿಕ ಹೋರಾಟಕ್ಕೆ ಧುಮುಕಿದ್ದರು.

Former union minister George Fernandes passes away

ಆಗಸ್ಟ್ 2009 ರಿಂದ ಜುಲೈ 2010 ರವರೆಗೆ ರಾಜ್ಯ ಸಭಾ ಸದಸ್ಯರಾಗಿ ಅವರು ಕೊನೆಯದಾಗಿ ಸಂಸತ್ತಿನಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಜಕೀಯದಿಂದ ದೂರವುಳಿದ ಅವರು, ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ.

ನಟ-ಮಾಜಿ ಸಚಿವ ಅಂಬರೀಶ್ ಹೃದಯಾಘಾತದಿಂದ ನಿಧನನಟ-ಮಾಜಿ ಸಚಿವ ಅಂಬರೀಶ್ ಹೃದಯಾಘಾತದಿಂದ ನಿಧನ

1970 ರ ಸಮಾಜವಾದದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಫರ್ನಾಡಿಸ್, ಜನತಾ ದಳದ ಮುಖಂಡರಾಗಿ ನಂತರ ಸಮತಾ ಪಕ್ಷವನ್ನು ಕಟ್ಟಿದ್ದರು. ವಾಜಪೇಯಿ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದರಲ್ಲದೆ, ಸಂಪರ್ಕ, ಕೈಗಾರಿಕೆ, ರೈಲ್ವೇ ಖಾತೆಗಳನ್ನೂ ನಿರ್ವಹಿಸಿದ ಅನುಭವ ಪಡೆದಿದ್ದರು.

English summary
Former defence minister George Fernandes died on Tuesday morning at the age of 88. The veteran leader breathed his last in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X