• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ಸೇನೆ ಗಡಿಯೊಳಗೆ ನುಗ್ಗಿ 7 ವಾರಗಳು, ಪ್ರಧಾನಿ ಮೌನ ಯಾಕೆ?

|

ಬೆಂಗಳೂರು, ಜೂ. 16: ಭಾರತ-ಚೀನಾ ಗಡಿಯಲ್ಲಿ ಸಂಘರ್ಷಕ್ಕೆ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಭಾಯಿ ಭಾಯಿ ಎನ್ನುತ್ತಲೇ ಚೀನಾ ಸೇನೆಯೆ ಕೊಟ್ಟಿರುವ ಆಘಾತದ ಮಧ್ಯೆಯೂ ಭಾರತೀಯ ಸೇನೆಯ ತಿರುಗೇಟು ಕೊಟ್ಟಿದ. ಇದರಿಂದ ಉದ್ಧಟತನಕ್ಕೆ ಚೀನಾದ 43 ಸೈನಿಕರು ಮೃತಪಟ್ಟಿದ್ದಾರೆ. ಕಳೆದ 45 ವರ್ಷಗಳಲ್ಲಿ ಮೊದಲ ಬಾರಿ ಚೀನಾ ಇಂತಹ ಕುಕೃತ್ಯಕ್ಕೆ ಕೈಹಾಕಿದೆ. ಈ ಮಧ್ಯೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

   ಗಾಲ್ವಾನ್ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರ ಲೆಕ್ಕ ಕೊಟ್ಟ ಅಮೇರಿಕಾ | Oneindia Kannada

   ಚೀನಾ ಸೇನೆ ದೇಶದ ಗಡಿದಾಟಿ ಪೂರ್ವ ಲಡಾಕ್‌ನ ಗಾಲ್ವನ್ ಕಣಿವೆಯೊಳಗೆ ನುಗ್ಗಿ ಬಂದಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ವಸಿದ್ದಾರೆಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ. ಚೀನಾ ಪಡೆಗಳು ದೇಶದ ಗಡಿಯೊಳಗೆ ನುಗ್ಗಿ ಬಂದರೂ ಈ ವರೆಗೂ ಸರ್ಕಾರದಿಂದ ಒಂದೇ ಒಂದು ಅಧಿಕೃತ ಹೇಳಿಕೆ ಬಂದಿಲ್ಲ. ಇದು ದೇಶದ ಜನರನ್ನು ಚಿಂತೆಗೀಡು ಮಾಡಿದೆ ಎಂದು ಚಿದಂಬರಂ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

   ಮೋದಿ ಮೌನವೇಕೆ? ಏಕೆ ಅಡಗಿಕೊಂಡಿದ್ದಾರೆ? ಪಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

   ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಮೇ 5 ರಿಂದ ದೇಶದ ಜನತೆಯನ್ನು ಚಿಂತೆಗೀಡುವಂತಹ ದಿವ್ಯ ಮೌನವಹಿಸಿದ್ದಾರೆ. ವಿದೇಶಿ ಸೇನೆ ದೇಶದ ಗಡಿಯನ್ನು ಪ್ರವೇಶಿಸಿದ 7 ವಾರಗಳ ಬಳಿಕವೂ ಒಂದೇ ಒಂದು ಶಬ್ದವನ್ನು ಆಡದಿರುವುದನ್ನು ಉಹಿಸಿಕೊಳ್ಳುವುದು ಅಸಾಧ್ಯ ಎಂದಿದ್ದಾರೆ.

   ಜೂ. 16 ರಂದು ಮಧ್ಯಾಹ್ನ 12.52ಕ್ಕೆ ಗಡಿಯಲ್ಲಿ ಯೋಧರು ಹುತಾತ್ಮರಾಗಿದ್ದ ಸುದ್ದಿ ಬ್ರೇಕ್ ಆದ ಬಳಿಕವೂ ವಿದೇಶಾಂಗ ಸಚಿವಾಲಯ ಏನೂ ಆಗೇ ಇಲ್ಲ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಸೇನೆಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸುದ್ದಿ ಬಹಿರಂಗವಾಯಿತು ಎಂದು ಚಿದಂಬರಂ ಟ್ವೀಟ್‌ನಲ್ಲಿ ಹೇಳಿದ್ದಾರೆ.

   ಚೀನಾ ಸೇನೆ ಭಾರತದ ಗಡಿಯನ್ನು ದಾಟಿ ಒಳಬಂದು 7 ವಾರಗಳೇ ಕಳೆದಿವೆ ಎಂಬ ಆರೋಪವನ್ನು ಪಿ. ಚಿದಂಬರಂ ಟ್ವೀಟ್‌ನಲ್ಲಿ ಮಾಡಿದ್ದಾರೆ.

   English summary
   Former Union Minister P Chidambaram has questioned why Prime Minister Narendra Modi remained silent even though the Chinese army had infiltrated India's border.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X