ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮೋಹನ್ ಸಿಂಗ್ ಆರೋಗ್ಯ ಏರುಪೇರು; ಏಮ್ಸ್‌ಗೆ ದಾಖಲು

|
Google Oneindia Kannada News

ನವದೆಹಲಿ, ಅಕ್ಟೋಬರ್ 13; ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. 89 ವರ್ಷದ ಮನಮೋಹನ್ ಸಿಂಗ್‌ರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬುಧವಾರ ಸಂಜೆ ಡಾ. ಮನಮೋಹನ್ ಸಿಂಗ್‌ರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ ಮತ್ತು ನಿಶಕ್ತಿಯಿಂದ ಅವರು ಬಳಲುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸೋಮವಾರವೂ ಅವರಿಗೆ ಜ್ವರ ಕಾಣಿಸಿಕೊಂಡಿತ್ತು, ಬಳಿಕ ಚೇತರಿಸಿಕೊಂಡರು ಸುಸ್ತು ಕಾಣಿಸಿಕೊಂಡಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಹೇಗಿದೆ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಹೇಗಿದೆ?

 Former PM Manmohan Singh Admitted To Delhi AIIMS

ಜ್ವರ ಕಾಣಿಸಿಕೊಂಡ ಬಳಿಕ ಮನಮೋಹನ್ ಸಿಂಗ್ ಅತಿಯಾಗಿ ಆಯಾಸಗೊಂಡಿದ್ದರು. ದ್ರವ ರೂಪದ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ. ಈ ವರ್ಷದ ಏಪ್ರಿಲ್‌ನಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು.

ಕೊರೊನಾ ನಿಯಂತ್ರಣಕ್ಕೆ ಪಂಚಸೂತ್ರ; ಪ್ರಧಾನಿಗೆ ಮನಮೋಹನ್ ಸಿಂಗ್ ಪತ್ರ! ಕೊರೊನಾ ನಿಯಂತ್ರಣಕ್ಕೆ ಪಂಚಸೂತ್ರ; ಪ್ರಧಾನಿಗೆ ಮನಮೋಹನ್ ಸಿಂಗ್ ಪತ್ರ!

ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಈ ಕುರಿತು ಮಾತನಾಡಿದ್ದಾರೆ, "ಅವರ ಆರೋಗ್ಯ ಸ್ಥಿರವಾಗಿದೆ. ಸಾಮಾನ್ಯ ಚಿಕಿತ್ಸೆಗಾಗಿ ಅವರು ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಮನಮೋಹನ್ ಸಿಂಗ್ ಬಗ್ಗೆ ಒಬಾಮಾ ಆತ್ಮಚರಿತ್ರೆಯಲ್ಲಿ ಉಲ್ಲೇಖ ಮನಮೋಹನ್ ಸಿಂಗ್ ಬಗ್ಗೆ ಒಬಾಮಾ ಆತ್ಮಚರಿತ್ರೆಯಲ್ಲಿ ಉಲ್ಲೇಖ

"ಮನಮೋಹನ್ ಸಿಂಗ್ ಅವರ ಆರೋಗ್ಯದ ಬಗ್ಗೆ ಕೆಲವು ವದಂತಿಗಳು ಕೇಳಿ ಬರುತ್ತಿವೆ. ಅವರ ಆರೋಗ್ಯ ಸ್ಥಿರವಾಗಿವೆ. ಯಾವುದಾದರೂ ಮಾಹಿತಿ ಇದ್ದರೆ ನಾವು ಹಂಚಿಕೊಳ್ಳುತ್ತೇವೆ. ಮಾಧ್ಯಮದ ಸ್ನೇಹಿತರ ಕಾಳಜಿಗೆ ಧನ್ಯವಾದಗಳು" ಎಂದು ಪ್ರಕಟಣೆಯಲ್ಲಿ ಪ್ರಣವ್ ಝಾ ತಿಳಿಸಿದ್ದಾರೆ.

ಏಮ್ಸ್‌ನ ಹೃದ್ರೋಗ ವಿಭಾಗಕ್ಕೆ ಡಾ. ಮನಮೋಹನ್ ಸಿಂಗ್ ದಾಖಲಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು. 2009ರಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ಕಳೆದ ವರ್ಷದ ಮೇ ತಿಂಗಳಿನಲ್ಲಿಯೂ ಎದೆ ನೋವಿನ ಕಾರಣ ಅವರು ಏಮ್ಸ್‌ಗೆ ದಾಖಲಾಗಿದ್ದರು.

ಕೋವಿಡ್ ಸೋಂಕು ತಗುಲಿದ್ದರಿಂದ ಈ ವರ್ಷದ ಏಪ್ರಿಲ್ 19ರಂದು ಡಾ. ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಏಪ್ರಿಲ್ 29ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

English summary
Former prime minister Dr. Manmohan Singh admitted to All India Institute of Medical Sciences in Delhi. He admitted to AIIMS due to fever and weakness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X