ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋ ಇಂಡಿಯಾಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾಗೆ ದೇವೇಗೌಡರಿಂದ ಪತ್ರ!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 15: ದೇಶದ 'ರಕ್ಷಣಾ ರಾಜಧಾನಿ' ಎನಿಸಿಕೊಂಡಿರುವ ಬೆಂಗಳೂರಿನ ಹೆಮ್ಮೆಯ ಕಾರ್ಯಕ್ರಮಗಳಲ್ಲಿ ಒಂದೆನಿಸಿರುವ 'ಏರೋ ಇಂಡಿಯಾ' 2018 ಸ್ಥಳಾಂತರದ ಬಗ್ಗೆ ಎದ್ದಿರುವ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ ಈ ಕುರಿತಂತೆ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ ನಡೆಯಲಿದೆ ಎಂದಿದ್ದಾರೆ.

ಕೆಂಪುಕೋಟೆಯಲ್ಲಿ ಇಂದು ನಡೆದ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ

ಏರೋ ಇಂಡಿಯಾ ಸ್ಥಳಾಂತರವಾಗಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲೇ ಏರ್ ಶೋ ನಡೆಸುವಂತೆ ಒತ್ತಾಯಿಸುತ್ತೇನೆ ಎಂದು ದೇವೇಗೌಡರು ಹೇಳಿದರು.

Former PM HD Deve Gowda Urges not to shift Aero India from Bengaluru

ಈ ಬಾರಿ ಏರ್ ಶೋ ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬೆಂಗಳೂರಿನಲ್ಲೇ ಶೋ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ.

ವಿರೋಧದ ನಡುವೆಯೂ ಉ.ಪ್ರದೇಶಕ್ಕೆ ಹಾರಲಿದೆಯೇ ಏರ್ ಶೋ?ವಿರೋಧದ ನಡುವೆಯೂ ಉ.ಪ್ರದೇಶಕ್ಕೆ ಹಾರಲಿದೆಯೇ ಏರ್ ಶೋ?

ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಏರೋ ಇಂಡಿಯಾ ಶೋ ವಿಶ್ವವಿಖ್ಯಾತಿ ಗಳಿಸಿದೆ. ಈ ಬಾರಿಯೂ ಅದು ಇಲ್ಲೇ ನಡೆದರೆ ಚೆನ್ನಾಗಿರುತ್ತದೆ ಎಂದು ದೇವೇಗೌಡರು ಹೇಳಿದರು.

ಏರ್ ಶೋ ಸ್ಥಳಾಂತರದ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!ಏರ್ ಶೋ ಸ್ಥಳಾಂತರದ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!

ಅನಂತಕುಮಾರ್ ಅವರಂಥ ಹಿರಿಯ ಸಚಿವರು ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೂ ಈ ಬೆಳವಣಿಗೆ ಸರಿಯಲ್ಲ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಹೊರತಪಡಿಸಿ ಅನ್ಯ ರಾಜ್ಯದಲ್ಲಿ ಏರೋ ಇಂಡಿಯಾ-2018 ಶೋ ನಡೆಸುವುದು ಬೇಡ. ಈ ಬಗ್ಗೆ ತಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.

English summary
Former PM HD Deve Gowda today attended Independence Day celebration at Red Fort today(Aug 15). Deve Gowda urged union government not to shift Aero India Show from Bengaluru. He also said he will write a letter to Nirmala Sitharaman, Defence Minister regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X