• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾಸನದಲ್ಲಿ ಐಐಟಿ ಸ್ಥಾಪಿಸಲು ದೇವೇಗೌಡರ ಆಗ್ರಹ

By Mahesh
|

ನವದೆಹಲಿ, ಆಗಸ್ಟ್ 10: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಮತ್ತೊಮ್ಮೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ.

ದೆಹಲಿಯಲ್ಲಿ ಗುರುವಾರ(ಆಗಸ್ಟ್ 10) ಪ್ರಧಾನಿ ಮೋದಿ ಅವರನ್ನು ಅವರ ಕಚೇರಿಯಲ್ಲಿ ದೇವೇಗೌಡರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಪ್ರಧಾನಿ ಅವರ ಮುಂದಿಟ್ಟರು. ಈ ಪೈಕಿ ಹಾಸನದಲ್ಲಿ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಆರಂಭಿಸುವಂತೆ ಮನವಿ ಮಾಡಿದ್ದು ಪ್ರಮುಖವಾಗಿದೆ.

Former PM Deve Gowda seeks IIT in Hassan from PM Modi

ಮುಂದಿನ ಬಜೆಟ್​ನಲ್ಲಿ ಇದು ಈಡೇರಬೇಕು. ಇದಕ್ಕಾಗಿ ಕಾಯ್ದಿಟ್ಟಿರುವ 1057 ಎಕರೆ ಭೂಮಿ ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಕೇಳಿಕೊಂಡರು.

ಮುಂದಿನ ಬಜೆಟ್​ನಲ್ಲಿ ಮಹಾಮಸ್ತಕಾಭಿಷೇಕಕ್ಕೆ 100 ಕೋಟಿ ರೂ ಮೀಸಲಿಡಬೇಕು. ಹಾಸನ-ಬೇಲೂರು-ಚಿಕ್ಕಮಗಳೂರು ಶೃಂಗೇರಿ ವರೆಗಿನ ರೈಲ್ವೆ ಮಾರ್ಗವನ್ನು ಪೂರ್ಣ ಗೊಳಿಸಬೇಕೆಂದು ದೇವೇಗೌಡರಿಂದ ನರೇಂದ್ರ ಮೋದಿಗೆ ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime Minister HD Deve Gowda has again made appeal to Prime Minister Narendra Modi, in person, to grant Indian Institute of Technology (IIT) for Hassan in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more