ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸೇರಿದ ಎನ್ ಸಿಪಿ ಮಾಜಿ ಮುಖಂಡ ತಾರಿಖ್ ಅನ್ವರ್

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಎನ್ ಸಿಪಿ ಮಾಜಿ ಮುಖಂಡ ತಾರಿಖ್ ಅನ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಮೋದಿಯನ್ನು ‌ಪವಾರ್ ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದು ಪಕ್ಷ ತೊರೆದ ಸಂಸದಮೋದಿಯನ್ನು ‌ಪವಾರ್ ಬೆಂಬಲಿಸಿದ್ದಕ್ಕೆ ಸಿಟ್ಟಿಗೆದ್ದು ಪಕ್ಷ ತೊರೆದ ಸಂಸದ

ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತಾರಿಖ್ ಅನ್ವರ್, ನಂತರ ಕಾಂಗ್ರೆಸ್ಸಿಗೆ ಸೇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿ, ಪಕ್ಷದ ನಾಯಕರೊಂದಿಗೆ ಕೈಜೋಡಿಸಿದರು.

ದೇವೇಗೌಡ್ರು ಪ್ರಧಾನಿಯಾಗಿದ್ದು ಆಕಸ್ಮಿಕ, ಮುಂದೆ ಎಂದೂ ಹೀಗಾಗಬಾರದು: ಶರದ್ ಪವಾರ್ ದೇವೇಗೌಡ್ರು ಪ್ರಧಾನಿಯಾಗಿದ್ದು ಆಕಸ್ಮಿಕ, ಮುಂದೆ ಎಂದೂ ಹೀಗಾಗಬಾರದು: ಶರದ್ ಪವಾರ್

ಸಂಸದರಾಗಿದ್ದ ಅನ್ವರ್, ತಮ್ಮ ಲೋಕಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇತ್ತೀಚೆಗಷ್ಟೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಫೇಲ್ ಡೀಲ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರದು ತಪ್ಪಿಲ್ಲ, ಅವರು ಈ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟಿದ್ದನ್ನು ಅನ್ವರ್ ಬಲವಾಗಿ ಖಂಡಿಸಿದ್ದರು. ಬದ್ಧವೈರಿ ಬಿಜೆಪಿಯ ಮೋದಿ ಅವರ ಬಗ್ಗೆ ಎನ್ ಪವಾರ್ ಉತ್ತಮ ಮಾತುಗಳನ್ನಾಡಿದ್ದು ಅನ್ವರ್ ಅವರಿಗೆ ಸಹ್ಯವಾಗಿರಲಿಲ್ಲ. ಇದೇ ಕಾರಣ ನೀಡಿ ಅವರು ಎನ್ ಸಿಪಿಗೆ ಗುಡ್ ಬೈ ಹೇಳಿದ್ದರು.

'2019ರ ಲೋಕಸಭೆ ಚುನಾವಣೆಗೆ ಶರದ್ ಪವಾರ್ ಸ್ಪರ್ಧಿಸಲ್ಲ' '2019ರ ಲೋಕಸಭೆ ಚುನಾವಣೆಗೆ ಶರದ್ ಪವಾರ್ ಸ್ಪರ್ಧಿಸಲ್ಲ'

Former NCP leader Tariq Anwar meets Rahul Gandhi, joins Congress

ಮೊದಲು ಕಾಂಗ್ರೆಸ್ಸಿನಲ್ಲೇ ಇದ್ದ ಅನ್ವರ್ 1980 ರಲ್ಲಿ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಇಲ್ಲಿನ ಕತಿಯಾರ್ ಕ್ಷೇತ್ರವನ್ನು ಅವರು ಹಲವು ಅವಧಿಗಳಿಗೆ ಪ್ರತಿನಿಧಿಸಿದ್ದರು. ನಂತರ 1999 ರಲ್ಲಿ ಪವಾರ್ ಜೊತೆ ಕೈಜೋಡಿದಿದ್ದರು.

English summary
Days after resigning from the Nationalist Congress Party, Tariq Anwar on Saturday joined Congress, news agency PTI reported. Anwar met Congress president Rahul Gandhi on Saturday after he is said to have joined the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X