• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿಶಾ ರವಿ ಪ್ರಕರಣ: "ಪೊಲೀಸರು ಮಾಡುತ್ತಿರುವುದೇ ಸರಿ" ಎಂದು ರಾಷ್ಟ್ರಪತಿಗೆ ಪತ್ರ

|

ನವದೆಹಲಿ, ಫೆಬ್ರವರಿ 22: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾಯಾಧೀಶರು, ಸಿಬಿಐ ಮಾಜಿ ಅಧಿಕಾರಿ ನಾಗೇಶ್ವರ ರಾವ್ ಒಳಗೊಂಡಂತೆ ಮಾಜಿ ಉನ್ನತ ಪೊಲೀಸ್ ಅಧಿಕಾರಿಗಳ ಗುಂಪು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಮುಗ್ಧತೆಯ ಸಾಬೀತಿಗೆ ಅವರ ವಯಸ್ಸನ್ನು ಎತ್ತಿತೋರಿಸುತ್ತಿರುವುದು ಆಶ್ಚರ್ಯ ಎನಿಸುತ್ತಿದೆ ಎಂದು ಹೇಳಿದ್ದಾರೆ.

ಅಪರಾಧಗಳ ವಿಷಯದಲ್ಲಿ ವಯಸ್ಸು ಎಂಬುದು ಅಪ್ರಸ್ತುತ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಟೂಲ್‌ಕಿಟ್‌ ಪ್ರಕರಣ; ದಿಶಾ ರವಿಗೆ ಸದ್ಯಕ್ಕೆ ಜಾಮೀನಿಲ್ಲ

ಹೈಕೋರ್ಟ್‌ನ ಮೂರು ಮಾಜಿ ಮುಖ್ಯ ನ್ಯಾಯಾಧೀಶರು, ಹದಿನೇಳು ಮಾಜಿ ನ್ಯಾಯಾಧೀಶರು, 18 ಮಾಜಿ ಡಿಜಿಪಿಗಳು, ದೆಹಲಿ ಮಾಜಿ ಪೊಲೀಸ್ ಆಯುಕ್ತ, ಗೃಹ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಮಾಜಿ ವಿಶೇಷ ಕಾರ್ಯದರ್ಶಿಗಳು ಐಬಿ ಹಾಗೂ ಸಿಆರ್‌ಪಿಎಫ್ ಮಾಜಿ ವಿಶೇಷ ಡಿಜಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಮುಂದೆ ಓದಿ...

"ದಿಶಾ ಬಂಧನವನ್ನು ಬೇರೆ ರೀತಿ ಚಿತ್ರಿಸುತ್ತಿದ್ದಾರೆ"

ಕೆಲವು ಬುದ್ಧಿಜೀವಿಗಳು ದಿಶಾ ಬಂಧನವನ್ನು ವಾಕ್ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಎಂದು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದಿರುವ ಅವರು, ದೆಹಲಿ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.

"ದೇಶವಿರೋಧಿ ಕೃತ್ಯಗಳಿಗೆ ಬುದ್ಧಿಜೀವಿಗಳ ಮುಖವಾಡ"

ದೆಹಲಿ ಪೊಲೀಸರು ಯಾವುದೇ ಪಟ್ಟಭದ್ರ ಹಿತಾಸಕ್ತಿಯಿಂದ ಕೆಲಸ ನಿರ್ವಹಿಸುತ್ತಿಲ್ಲ. ಯಾವುದೇ ಒತ್ತಡವಿಲ್ಲದೇ ಮುಕ್ತ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸಲು ಅವರು ಸಮರ್ಥವಾಗಿದ್ದಾರೆ. ಭಾರತದಲ್ಲಿ ಅರಾಜಕತೆ ಪ್ರೇರೇಪಿಸಲು, ದೇಶವಿರೋಧಿ ಕೃತ್ಯಗಳಿಗೆ ಬುದ್ಧಿಜೀವಿಗಳ ಮುಖವಾಡ ಹೊದಿಸಲು ಪ್ರಯತ್ನಿಸುತ್ತಿರುವ ಪ್ರತ್ಯೇಕತಾವಾದಿ ಶಕ್ತಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಂಪು ಒತ್ತಾಯಿಸಿದೆ.

 ಶನಿವಾರ ನಡೆದಿದ್ದ ದಿಶಾ ರವಿ ಪ್ರಕರಣ ವಿಚಾರಣೆ

ಶನಿವಾರ ನಡೆದಿದ್ದ ದಿಶಾ ರವಿ ಪ್ರಕರಣ ವಿಚಾರಣೆ

ಶನಿವಾರ ದಿಶಾ ರವಿ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯ, ದಿಶಾ ರವಿ ವಿರುದ್ಧ ಪುರಾವೆಗಳು ಇವೆಯೇ ಅಥವಾ ಇವು ಬರೀ ಅನುಮಾನ, ಊಹೆಗಳು ಎನ್ನಬಹುದೇ ಎಂದು ಪೊಲೀಸರನ್ನು ಪ್ರಶ್ನಿಸಿ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿತ್ತು.

 ಹೈಕೋರ್ಟ್‌ನಲ್ಲಿ ದಿಶಾ ವಿರುದ್ಧ ಪೊಲೀಸರ ವಾದ

ಹೈಕೋರ್ಟ್‌ನಲ್ಲಿ ದಿಶಾ ವಿರುದ್ಧ ಪೊಲೀಸರ ವಾದ

ಗ್ರೆಟಾ ಜೊತೆ ಹಾಗೂ ಖಲಿಸ್ತಾನಿ ಸಂಬಂಧಿ ಗುಂಪಿನೊಂದಿಗೆ ದಿಶಾ ರವಿ ಸಂಪರ್ಕ ಹೊಂದಿದ್ದರು ಎಂಬುದು ಅವರ ಚಾಟ್‌ಗಳಿಂದ ತಿಳಿದುಬಂದಿದೆ. ಅಷ್ಟಲ್ಲದೇ ಕಾನೂನು ಕ್ರಮದ ಭಯದಿಂದ ಅವುಗಳನ್ನು ಡಿಲೀಟ್ ಮಾಡಿರುವುದೂ ಕಂಡುಬಂದಿದೆ. ಇದು ಟೂಲ್ ‌ಕಿಟ್ ಸೃಷ್ಟಿ ಹಿಂದಿನ ಉದ್ದೇಶವನ್ನೂ ತಿಳಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಜಾಗತಿಕ ಸಂಚಿನಲ್ಲಿ ಭಾರತದವರೇ ಆದ ದಿಶಾ ರವಿ ಅವರೂ ಇದ್ದಾರೆ. ರೈತರ ಪ್ರತಿಭಟನೆ ನೆಪವನ್ನೇ ಅವರು ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ನ್ಯಾಯಾಲಕ್ಕೆ ತಿಳಿಸಿದ್ದರು. ದಿಶಾ ರವಿ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನ ಪಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ತಪ್ಪು ಮಾಡಿಲ್ಲವೆಂದರೆ ಈ ಪ್ರಯತ್ನದ ಅಗತ್ಯವೇ ಇರಲಿಲ್ಲ ಎಂದು ಹೇಳಿದ್ದರು.

English summary
A group of former judges, ex police officers has written to President Ram Nath Kovind on the Disha Ravi arrest supporting delhi police,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X