ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್ ಕಣ್ಗಾವಲು; ಲೈಂಗಿಕ ಕಿರುಕುಳ ಆರೋಪ ಬಗ್ಗೆ ಗೊಗಾಯ್

|
Google Oneindia Kannada News

ನವದೆಹಲಿ, ಜುಲೈ 20: ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ರಂಜನ್‌ ಗೊಗೊಯ್‌ ಅವರ ಸುತ್ತಾ ಪೆಗಾಸಸ್ ಕಣ್ಗಾವಲು ವರದಿ ಸುತ್ತಿತ್ತಿದೆ. ಆದರೆ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಿಬ್ಬಂದಿಗೆ ಸೇರಿದ ಮೊಬೈಲ್ ನಂಬರ್‌ಗಳನ್ನು ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಕಣ್ಗಾವಲು ಇಡಲಾಗಿತ್ತು ಎಂದು ದಿ ವೈರ್ ವರದಿ ಮಾಡಿದೆ.

ಮಾಜಿ ಸಿಜೆಐ ಗೊಗೋಯಿ ವಿರುದ್ಧ ಆರೋಪಿಸಿದ್ದ ಮಹಿಳೆಗೆ ಕೊನೆಗೂ ನ್ಯಾಯ ಮಾಜಿ ಸಿಜೆಐ ಗೊಗೋಯಿ ವಿರುದ್ಧ ಆರೋಪಿಸಿದ್ದ ಮಹಿಳೆಗೆ ಕೊನೆಗೂ ನ್ಯಾಯ

ಮಹಿಳೆಗೆ ಸೇರಿದ 11 ಮೊಬೈಲ್ ಬಳಕೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು ಎಂದು ''ದಿ ವೈರ್‌'', ವಾಷಿಂಗ್ಟನ್ ಪೋಸ್ಟ್ ಇನ್ನಿತರ ಮಾಧ್ಯಮಗಳು ವರದಿ ಮಾಡಿದ್ದು, ಈ ಬಗ್ಗೆ ರಂಜನ್‌ ಗೊಗೊಯ್‌ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Former Chief Justice of India Ranjan Gogoi today refused to comment on Row Over Pegasus Scandal

2019ರಲ್ಲಿ ರಂಜನ್‌ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸುಪ್ರೀಂಕೋರ್ಟ್ ಮಹಿಳಾ ಸಿಬ್ಬಂದಿಯ ಮೂರು ಹಾಗೂ ಆಕೆಯ ಕುಟುಂಬ ಸದಸ್ಯರ ಎಂಟು ಮೊಬೈಲ್‌ ನಂಬರ್‌ಗಳ ಮೇಲೂ ನಿಗಾ ಇಡಲಾಗಿತ್ತು ಎಂದು ವರದಿ ಹೇಳಿದೆ.

ಇಸ್ರೇಲ್‌ ಮೂಲದ ಎನ್‌ಎಸ್‌ಒ ಎಂಬ ಸ್ಪೈವೇರ್‌ ಸಂಸ್ಥೆಯು ಹೊರ ತಂದಿರುವ 'ಪೆಗಾಸಸ್‌' ಸ್ಪೈವೇರ್ ತಂತ್ರಾಂಸ ಇಂದು ಭಾರಿ ಸಂಚಲನ ಮೂಡಿಸುತ್ತಿದೆ. ''ನಿರ್ದಿಷ್ಟ ವ್ಯಕ್ತಿಗಳ ಮೇಲೆ ಸರ್ಕಾರವು ನಿಗಾ ಇಟ್ಟಿದೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಅಥವಾ ಅದರಲ್ಲಿ ಸತ್ಯಾಂಶವಿಲ್ಲ'' ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸ್ಪಷ್ಟಪಡಿಸಿದೆ.

Former Chief Justice of India Ranjan Gogoi today refused to comment on Row Over Pegasus Scandal

ಏನಿದು ಪ್ರಕರಣ: ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಅಂದಿನ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದು ನೆನಪಿರಬಹುದು. ಸುಪ್ರೀಂಕೋರ್ಟಿನಿಂದ ಆ ಮಹಿಳೆಗೆ ಕೊನೆಗೂ ನ್ಯಾಯ ದೊರಕಿದ್ದು, ಮತ್ತೊಮ್ಮೆ ಉದ್ಯೋಗಕ್ಕೆ ಸೇರಲು ಅನುಮತಿ ಸಿಕ್ಕಿದೆ.

ಮೇ 2014ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ 2018ರ ಅಕ್ಟೋಬರ್ ನಲ್ಲಿ ಅಂದಿನ ಸಿಜೆಐ ಗೊಗಾಯ್ ಅವರ ವಿರುದ್ಧ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಅನಗತ್ಯವಾಗಿ ಬೇರೆ ಇಲಾಖೆಗೆ ವರ್ಗ ಮಾಡಿದ ಆರೋಪ ಮಾಡಿದ್ದರು.

ಈ ಕುರಿತಂತೆ ಜಸ್ಟೀಸ್ ಎಸ್ಎ ಬೊಬ್ಡೆ(ಇಂದಿನ ಸಿಜೆಐ), ಜಸ್ಟೀಸ್ ಇಂದು ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ ಅವರಿದ್ದ ಆಂತರಿಕ ಸಮಿತಿ ತನಿಖೆ ಕೈಗೊಂಡು ಗೊಗಾಯ್ ಗೆ ಕ್ಲೀನ್ ಚಿಟ್ ನೀಡಿತ್ತು.

ಸಂತ್ರಸ್ತೆಯ ಪತಿ ಹಾಗೂ ಸಂಬಂಧಿಕರ ಬಗ್ಗೆ ದೂರುಗಳು ಕೇಳಿ ಬಂದು ಉದ್ಯೋಗವನ್ನು ಕಳೆದುಕೊಂಡಿದ್ದರು. ದೆಹಲಿ ಪೊಲೀಸರು ಇತ್ತೀಚೆಗೆ ಕ್ಲೀನ್ ಚಿಟ್ ವರದಿ ನೀಡಿದ ಬಳಿಕ ಇಬ್ಬರಿಗೂ ಹಳೆ ಉದ್ಯೋಗ ಮರಳಿ ಸಿಕ್ಕಿದೆ.

English summary
Former Chief Justice of India Ranjan Gogoi today refused to comment on Row Over Pegasus Scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X