ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣದ ಬಗ್ಗೆ ಮಾಜಿ ಚುನಾವಣಾಧಿಕಾರಿಗಳ ಸ್ಪೋಟಕ ಹೇಳಿಕೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 03: "ಅಪನಗದೀಕರಣದಿಂದ ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆ ಕಡಿಮೆಯಾಗಿರಬಹುದು ಎಂಬ ನಿರೀಕ್ಷೆ ಸುಳ್ಳು. ನೋಟು ನಿಷೇಧದ ನಂತರೂ ಕಪ್ಪು ಹಣದ ಬಳಕೆ ಮತ್ತಷ್ಟು ಜಾಸ್ತಿಯೇ ಆಗಿದೆ" ಎಂಬ ಸ್ಫೋಟಕ ಸತ್ಯವನ್ನು ಮಾಜಿ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ನಿವೃತ್ತರಾದ ಒ ಪಿ ರಾವತ್ ಅವರು, ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡುತ್ತಿದ್ದರು.

ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ

"ಅಪನಗದೀಕರಣದ ನಂತರ ಚುನಾವಣೆಯಲ್ಲಿ ಕಪ್ಪು ಹಣಗಳನ್ನು ಬಳಸುವುದು ಕಡಿಮೆಯಾಗಬಹುದು ಎಂದು ನಾವೂ ನಿರೀಕ್ಷಿಸಿದ್ದೆವು. ಆದರೆ ನಮ್ಮ ಊಹೆ ಸುಳ್ಳಾಯಿತು. ಅಪನಗದೀಕರಣದ ನಂತರೂ ಯಾವೊಬ್ಬ ರಾಜಕಾರಣಿಯೂ ಕಪ್ಪು ಹಣದ ಕೊರತೆಯಿಂದ ಬಳಲಿದ್ದನ್ನು ನೋಡಿಲ್ಲ. ಅಪನಗದೀಕರಣಕ್ಕೂ ಮೊದಲ ಮತ್ತು ನಂತರದ ಚುನಾವಣೆಗಳಿಗೆ ಹೋಲಿಸಿದರೆ, ನಂತರವೇ ಹೆಚ್ಚು ಕಪ್ಪು ಹಣ ಬಳಕೆಯಾದಂತಿದೆ" ಎಂಬ ಆಘಾತಕಾರಿ ಅಂಶವನ್ನು ರಾವತ್ ಹೊರಹಾಕಿದ್ದಾರೆ.

Former CEC OP Rawats shocking statement on demonetisation

ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ, ಮತ್ತು ಖರ್ಚು ವೆಚ್ಚಗಳಲ್ಲಿ ಕಡಿತವಾಗಬೇಕು ಎಂಬುದು ದೀರ್ಘಾವಧಿ ಯೋಜನೆ. ಅದಕ್ಕೆ ಸಮಯ ಬೇಕು. ಕಳೆದ ಆಗಸ್ಟ್ ನಲ್ಲಿ ಚುನಾವಣಾ ಆಯೋಗದದ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚುನಾವಣೆಯ ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲಾ ಪಕ್ಷಗಳೂ ಒಪ್ಪಿಗೆ ಸೂಚಿಸಿವೆ. ಭವಿಷ್ಯದಲ್ಲಿ ಇದು ಸಹಕಾರಿಯಾಗಬಹುದು ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಕರ್ನಾಟಕದ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?ಕರ್ನಾಟಕದ ಉಪ ಚುನಾವಣೆ: ಆಯೋಗ ನೀಡಿದ ಸಮರ್ಥನೆ ಏನು ಗೊತ್ತೇ?

ಕಳೆದ ವಾರವಷ್ಟೇ ತಮ್ಮ ಸ್ಥಾನದಿಂದ ನಿವೃತ್ತರಾದ ಒಪಿ ರಾವತ್ ಅವರ ನಂತರ ಸುನೀಲ್ ಅರೋರಾ ಅವರನ್ನು ನೂತನ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.

English summary
Former Chief Election Commissioner OP Rawat on Monday said that there was no impact of demonetisation on the misuse of money in elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X