ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್ ಆರ್ ಸುಬ್ರಹ್ಮಣಿಯನ್ ನಿಧನ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸರ್ಕಾರದ ಮಾಜಿ ಸಂಪುಟ ಕಾರ್ಯದರ್ಶಿ ಟಿ ಎಸ್ ಆರ್ ಸುಬ್ರಹ್ಮಣಿಯನ್(79) ಇಂದು(ಫೆ.26) ನವದೆಹಲಿಯಲ್ಲಿ ಕೊನೆಯುಸಿರಿಳೆದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲು ನೇಮಿಸಿದ್ದ ಸಮಿತಿಯ ಮುಖ್ಯಸ್ಥರೂ ಆಗಿದ್ದ ಅವರು, ಭಾರತೀಯ ಸರ್ಕಾರದ ಸಂಪುಟ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

1961 ರ ಬ್ಯಾಚಿನ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಯೂ ಆಗಿದ್ದ ಅವರು, ಜವಳಿ ಇಲಾಖೆಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಸುಬ್ರಹ್ಮಣಿಯನ್ ಅವರ ಅಂತ್ಯ ಸಂಸ್ಕಾರ ದೆಹಲಿಯ ಲೋಧಿ ರೋಡ್ ನಲ್ಲಿರುವ ಚಿತಾಗಾರದಲ್ಲಿ ಇಂದು(ಫೆ.26) ಸಂಜೆ 5:30 ಕ್ಕೆ ನಡೆಯಲಿದೆ.

Former Cabinet Secretary TSR Subramanian passes away

ಇವರ ನಿಧನಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಜವಳಿ ಸಚಿವೆ ಸ್ಮೃತಿ ಇರಾಣಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

English summary
SR Subramanian(79), former Cabinet Secretary of the Union government passed away due to prolonged illness on Feb 26th. Subramanian headed an expert committee that submitted a new National Education Policy to the Human Resource Development (HRD) ministry. He also headed the Cabinet Secretariat, which is responsible for the administration of the Indian government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X