ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸ್ಟಾ ವೆಸ್ಟ್ ಲ್ಯಾಂಡ್: ಮಾಜಿ ವಾಯುಸೇನಾ ಮುಖ್ಯಸ್ಥ ತ್ಯಾಗಿ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್9: ಅಗಸ್ಟಾ ವೆಸ್ಟ್ ಲ್ಯಾಂಡ್ ಸೇನಾ ಹೆಲಿಕಾಪ್ಟರ್ ಕೇಸಿನಲ್ಲಿ ನಿವೃತ್ತ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಕೈವಾಡವಿದೆಯೆಂದು ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ತ್ಯಾಗಿ ಅವರೊಂದಿಗೆ ದೆಹಲಿ ಮೂಲದ ಲಾಯರ್, ಗೌತಮ್ ಕೇತನ್ ಮತ್ತು ಸಂಜೀವ್ ತ್ಯಾಗಿಯವರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಸೇನಾ ಹೆಲಿಕಾಪ್ಟರ್ ಗೆ ಕುರಿತ ಒಪ್ಪಂದ 2002ರಲ್ಲಿ ಮುರಿದು ಬಿದ್ದಿತ್ತು. ಏಕೆಂದರೆ 6000 ಮೀಟರ್ ಹಾರಡಲು ಕಾಪ್ಟರ್ ಗಳು ಅಸಮರ್ಥವಾಗಿದ್ದವು. ಅದರೆ 2005ರಲ್ಲಿ ಹಾರಾಟದ ಮಿತಿ ಮತ್ತೆ 4500 ಮೀಟರ್ ಗೆ ಇಳಿಸಿ ಅವನ್ನೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. [3,600 ಕೋಟಿ ರು ಮೌಲ್ಯದ ಡೀಲ್ ಕ್ಯಾನ್ಸಲ್]

tyagi

ಆದರೆ ಇದರ ತೀರ್ಮಾನವನ್ನು ತ್ಯಾಗಿ ತೆಗೆದುಕೊಂಡಿದ್ದರು ಎಂದು ಸಿಬಿಐ ತಿಳಿಸಿದೆ. ಅದರೆ ತ್ಯಾಗಿ ಅವರು ಹೇಳುವ ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳುವಾಗ ಅನೇಕ ಅಧಿಕಾರಿಗಳು ಇದ್ದರು ಎಂದಿದ್ದಾರೆ.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ಸೇನಾ ಹೆಲಿಕಾಪ್ಟರ್ ಗಳ ತಾಂತ್ರಿಕ ವರ್ಗವನ್ನು ಅಧಿಕಾರಿಗಳ ಪ್ರಭಾವ ಬಳಸಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.

chopper

ಅಲ್ಲದೆ ಬೇರೆಯವರ ಪ್ರಭಾವ ಬಳಸಿ ಕಾನೂನು ಭಾಹಿರವಾದ ಉಡುಗೊರೆ ಮತ್ತು ಭ್ರಷ್ಟಾಚಾರದಲ್ಲಿ ತೆಗೆದುಕೊಂಡಿದ್ದಾರೆ ಸಿಬಿಐ ಸ್ಪಷ್ಟಪಡಿಸಿದೆ.

English summary
Former Air Chief S P Tyagi has been arrested in connection with the AgustaWestland case. The arrest was carried out by the CBI. CBI said that the arrest was made on the charge that he and others had accepted illegal gratification for exercising influence through corrupt or illegal means.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X