ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲೀಗ್ ಜಮಾತ್‌ಗೆ ಯಾವ ದೇಶದಿಂದ ಹೆಚ್ಚು ಜನರು ಆಗಮಿಸಿದ್ದರು?

|
Google Oneindia Kannada News

ನವದೆಹಲಿ, ಏಪ್ರಿಲ್ 03: ಕಳೆದ ತಿಂಗಳು ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಈಗ ದೇಶಾದ್ಯಂತ ಚರ್ಚೆಯ ವಸ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೊರೊನಾ ಸೋಂಕು ತಗುಲಿದ್ದು, ದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಮೆರಿಕ ಸೇರಿದಂತೆ 41 ರಾಷ್ಟ್ರಗಳ ವಿವಿಧ ಸದಸ್ಯರು ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಅವರ ವೀಸಾವನ್ನು ರದ್ದುಗೊಳಿಸಲಾಗುತ್ತದೆ.

ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!

41 ರಾಷ್ಟ್ರಗಳ ಪೈಕಿ ಇಂಡೋನೆಷಿಯಾದಿಂದ ಅತಿ ಹೆಚ್ಚು ಜನರು ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. 379 ಜನರು ಬಂದಿದ್ದರು ಎಂಬ ಮಾಹಿತಿ ಸಿಕ್ಕಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

 ದೆಹಲಿ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಚಿತ್ರದುರ್ಗದ 8 ಜನ ಭಾಗಿ? ದೆಹಲಿ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಚಿತ್ರದುರ್ಗದ 8 ಜನ ಭಾಗಿ?

Foreign Nationals Banned For Attending Tablighi Cogregation From Indonesia

ಬಾಂಗ್ಲಾದೇಶ (110), ಕಝಕಿಸ್ತಾನ (77), ಥಾಲ್ಯಾಂಡ್ ಮತ್ತು ಮಯನ್ಮಾರ್‌ನಿಂದ 65 ಜನರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಇಲಾಖೆಯೇ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 960 ವಿದೇಶಿಗರು ಪಾಲ್ಗೊಂಡಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ದೆಹಲಿ ಮಸೀದಿ: ತಮಿಳುನಾಡಿನ 50 ಮಂದಿಗೆ ಕೊರೊನಾ ಸೋಂಕು ದೆಹಲಿ ಮಸೀದಿ: ತಮಿಳುನಾಡಿನ 50 ಮಂದಿಗೆ ಕೊರೊನಾ ಸೋಂಕು

ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ 4 ಸಾವಿರ ವಿದೇಶಿಯರನ್ನು ಕಳೆದ 5 ವರ್ಷಗಳಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಪ್ರವಾಸಿ ವೀಸಾ ತೆಗೆದುಕೊಂಡು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುವಂತಿಲ್ಲ.

ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವವರು ಮಿಷನರಿ ವೀಸಾ ಅಡಿಯಲ್ಲಿ ಅರ್ಜಿಯನ್ನು ಹಾಕಬೇಕಿದೆ. ತಬ್ಲೀಜ್ ಸದಸ್ಯರು ಹಲವು ಬಾರಿ ವೀಸಾ ನಿಯಮ ಉಲ್ಲಂಘನೆ ಮಾಡಿದ್ದರಿಂದ, ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಕೇಂದ್ರ ಗೃಹ ಸಚಿವಾಯ ಎಲ್ಲಾ ರಾಜ್ಯಗಳಿಗೆ ಈಗಾಗಲೇ ಸ್ಪಷ್ಟ ಸೂಚನೆಯನ್ನು ನೀಡಿದೆ. ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಳ್ಗೊಂಡವರು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಕರೆ ನೀಡಬೇಕು ಎಂದು ಹೇಳಿದೆ.

English summary
Foreign nationals from 41 countries including the United States took part in the Tablighi Jamaat congregation in Delhi. Most number of foreign nationals to be blacklisted are from Indonesia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X