• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಹೆಚ್ಚಳ: ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳ ಆಗಮನವಿಲ್ಲ

|
Google Oneindia Kannada News

ನವದೆಹಲಿ ಜನವರಿ 19: ಗಣರಾಜ್ಯೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಆದರೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಿದೇಶಿ ಅತಿಥಿಗಳು ಗಣರಾಜ್ಯೋತ್ಸವಕ್ಕೆ ಆಗಮಿಸುವುದಿಲ್ಲ. ಸತತ ಎರಡನೇ ವರ್ಷವೂ ಕೊರೊನಾ ಭೀತಿಯಿಂದಾಗಿ ವಿದೇಶಿ ಅತಿಥಿಗಳಿಲ್ಲದೆ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನಾಯಕರನ್ನು ಭಾರತ ಆಹ್ವಾನಿಸುತ್ತದೆ. ಆದರೆ ಈ ಬಾರಿ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಕೊರೋನಾ ಕಾರಣ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ವಿದೇಶಿ ಅತಿಥಿಗಳು ಭಾಗವಹಿಸುವುದಿಲ್ಲ.

ಕಳೆದ ಕೆಲವು ವಾರಗಳಲ್ಲಿ ಕೊರೋನವೈರಸ್ ಓಮಿಕ್ರಾನ್‌ನ ಹೊಸ ರೂಪಾಂತರದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಝಾಕಿಸ್ತಾನ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರದರ್ಶನಗಳು 220 ಜೀವಗಳನ್ನು ಬಲಿ ಪಡೆದಿವೆ. ಈ ಕಾರಣದಿಂದಾಗಿ ಗಣ್ಯರು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಪ್ರಸ್ತುತ ಐದು ದೇಶಗಳು ವರ್ಚುವಲ್ ಶೃಂಗಸಭೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿವೆ ಎಂದು ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ. ಎಲ್ಲಾ 6 ದೇಶಗಳ ರಾಜತಾಂತ್ರಿಕ ಸಂಬಂಧಗಳು 30 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ವರ್ಚುವಲ್ ಶೃಂಗಸಭೆಯನ್ನು ಆಯೋಜಿಸಲಾಗುವುದು. ಆದರೆ ಅದರ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ವರದಿಯ ಪ್ರಕಾರ ಪರ್ಯಾಯ ಮುಖ್ಯ ಅತಿಥಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗಿದೆ.

Happy Republic Day 2022: ಗಣರಾಜ್ಯೋತ್ಸವದ ಮಹತ್ವ, ಶುಭ ಸಂದೇಶಗಳು
ಕಳೆದ ವರ್ಷವೂ ಭಾರತದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಯಾವುದೇ ಮುಖ್ಯ ಅತಿಥಿಗಳಿಲ್ಲದೆ ಆಚರಿಸಲಾಯಿತು. ಕಳೆದ ವರ್ಷ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬರಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಭಾರತಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಿದರು. 2021ರ ಮೊದಲು 1966ರಲ್ಲಿ ಮುಖ್ಯ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಆ ವರ್ಷ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣದ ನಂತರ ಇಂದಿರಾ ಗಾಂಧಿ ಅವರು ಜನವರಿ 24 ರಂದು ದೇಶದ ಪ್ರಧಾನಿಯಾದರು. ಇದಲ್ಲದೇ 1952 ಮತ್ತು 1953ರಲ್ಲಿಯೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಬಂದಿರಲಿಲ್ಲ.

   INS ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ,ಭಾರತೀಯ ನೌಕಾಪಡೆಯ 3 ಯೋಧರು ಹುತಾತ್ಮ | Oneindia Kannada
   ಕೋವಿಡ್​ ಸೋಂಕು ದೇಶದಲ್ಲಿ ಹೆಚ್ಚುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 2,58,089 ಹೊಸ ಕರೋನವೈರಸ್ ಸೋಂಕು ಪತ್ತೆ ಆಗಿದೆ. ಸೋಂಕಿತರ ಸಾವಿನ ಸಂಖ್ಯೆ 4,86,761 ಕ್ಕೆ ಏರಿದ್ದು, ಕಳೆದ 24 ಗಂಟೆಗಳಲ್ಲಿ 310 ಹೆಚ್ಚಿನ ಸಾವುಗಳು ಸಂಭವಿಸಿವೆ.ಈ ವರ್ಷ ಆಹ್ವಾನಿತರ ಪಟ್ಟಿಯಲ್ಲಿ ಕಟ್ಟಡ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರು, ಮುಂಚೂಣಿ ಕಾರ್ಮಿಕರು ಮತ್ತು ಆಟೋ-ರಿಕ್ಷಾ ಚಾಲಕರು ಸೇರಿದ್ದಾರೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅವಕಾಶ ಕಲ್ಪಿಸುವುದು ಇದರ ಉದ್ದೇಶ ಆಗಿದೆ. ಆಹ್ವಾನಿತರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೇಂದ್ರ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

   ಗಣರಾಜ್ಯೋತ್ಸವದಂದು 75 ವಿಮಾನಗಳಿಂದ ಬಹುದೊಡ್ಡ ವೈಮಾನಿಕ ಪ್ರದರ್ಶನ
   ಈ ಬಾರಿ ಗಣರಾಜೋತ್ಸವಕ್ಕೆ ವಿಶೇಷವಾಗಿ ಕೊರೊನಾ ಜಾಗೃತಿ ಮೂಡಿಸಲು ಒತ್ತು ನೀಡಲಾಗುತ್ತದೆ. ಗಣರಾಜೋತ್ಸವ ಆಹ್ವಾನ ಪತ್ರಿಕೆಯಲ್ಲಿ ಔಷಧೀಯ ಬೀಜಗಳಿವೆ. ಇವುಗಳನ್ನು ಹೂವಿನ ಮಡಕೆ ಅಥವಾ ಉದ್ಯಾನದಲ್ಲಿ ಬಿತ್ತಬಹುದು. ಜೊತೆಗೆ ಈ ಬಾರಿ ಡ್ರೋನ್ ಪ್ರದರ್ಶನ ನಡೆಯಲಿದೆ. ಸಾವಿರ ಡ್ರೋನ್ ಗಳು ಪ್ರದರ್ಶನ ನೀಡಲಿವೆ. ಚೀನಾ, ರಷ್ಯಾ ಹಾಗೂ ಯುನೈಟೆಡ್ ಕಿಂಗ್‌ ಡಮ್ ನಂತರ ನಾಲ್ಕನೇ ದೇಶವಾಗಿ ಭಾರತದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ.

   ಈ ವರ್ಷ ಜನವರಿ 24 ಬದಲು ಜನವರಿ 23ರಿಂದ ಆಚರಣೆಗಳು ಆರಭವಾಗಲಿವೆ. ಪ್ರತಿಭಾವಂತ ನೃತ್ಯಗಾರರನ್ನು ಪ್ರೋತ್ಸಾಹಿಸಲು ಈ ಬಾರಿ ರಾಷ್ಟ್ರಮಟ್ಟದ ಸ್ಪರ್ಧೆ ' ವಂದೇ ಭಾರತಂ' ಮೂಲಕ ಕಲಾವಿದರ ಆಯ್ಕೆ ಮಾಡಲಾಗಿದೆ. ಆಯ್ಕೆಗೊಂಡ ಒಟ್ಟು 600 ಯುವ ಕಲಾವಿದರು ಈ ವರ್ಷ ಪ್ರದರ್ಶನ ನೀಡಲಿದ್ದಾರೆ.

   English summary
   The preparations for Republic Day are going on in full swing. But in view of the way Corona cases are increasing in the country, this time foreign guests will not attend the Republic Day celebrations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion