ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನ್ಯಾಯವಾದಿ ಇಂದಿರಾ ಜೈ ಸಿಂಗ್ ಮನೆ ಮೇಲೆ ಸಿಬಿಐ ದಾಳಿ

|
Google Oneindia Kannada News

ನವದೆಹಲಿ, ಜುಲೈ 11: ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್ ಅವರ ಮನೆ, ಕಚೇರಿ ಮೇಲೆ ಗುರುವಾರ ಬೆಳಗ್ಗೆ ಸಿಬಿಐ ತಂಡ ದಾಳಿ ನಡೆಸಿದೆ.

ಇಂದಿರಾ ಜೈಸಿಂಗ್ ಅವರ ನೇತೃತ್ವ ಸರ್ಕಾರೇತರ ಸಂಸ್ಥೆಯು ಕಾನೂನು ಉಲ್ಲಂಘಿಸಿ ವಿದೇಶದಿಂದ ಸಿಗುತ್ತಿರುವ ದೇಣಿಗೆ ಪಡೆಯುತ್ತಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ.

ಎನ್ಜಿಒಗಳು ವಿದೇಶದಿಂದ ಪಡೆಯುವ ಮೊತ್ತವನ್ನು ನಿಯಂತ್ರಿಸುವ ಕಾಯ್ದೆ ಎಫ್ ಸಿ ಆರ್ ಎ ಉಲ್ಲಂಘಿಸಿದ ಕಾರಣ, ಇಂದಿರಾ ಜೈಸಿಂಗ್ ಹಾಗೂ ಆನಂದ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Foreign Funding Case: Lawyer Indira Jaising, Anand Grovers house raided by CBI

2009 ರಿಂದ 2014ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಆಗಿ ಇಂದಿರಾ ಜೈಸಿಂಗ್ ಅವರು ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅವರ ಒಡೆತನದ ಎನ್ ಜಿಒ ಗೆ ಸಂದಾಯವಾಗಿರುವ ದೇಣಿಗೆ ಮೊತ್ತ, ವ್ಯವಹಾರದ ಮೇಲೆ ಶಂಕೆ ವ್ಯಕ್ತವಾಗಿದ್ದರಿಂದ ಸಿಬಿಐ ತನಿಖೆ ಕೈಗೊಂಡಿತ್ತು. ಗೃಹ ಸಚಿವಾಲಯದ ಅನುಮತಿ ಪಡೆಯದೆ ವಿದೇಶಿ ಪ್ರಯಾಣಕ್ಕೆ ಆದ ಖರ್ಚು ವೆಚ್ಚವನ್ನು ಎನ್ಜಿಒ ಭರಿಸಿತ್ತು ಎಂದು ಸಿಬಿಐ ಆರೋಪಿಸಿದೆ.

English summary
Foreign Funding Case: Lawyer Indira Jaising, Anand Grover's house raided by CBI, which have accused them of violating a law on foreign funding for their NGO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X