ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ತೀರ್ಪಿನ ನಂತರ ಯಾವ್ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ?

|
Google Oneindia Kannada News

Recommended Video

ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯಾವುದಕ್ಕೆ ಕಡ್ಡಾಯ? ಯಾವುದಕ್ಕೆ ಅಲ್ಲ?

ನವದೆಹಲಿ, ಸೆಪ್ಟೆಂಬರ್ 26: ಬಹುದಿನದಿಂದ ಕುತೂಹಲದಿಂದ ಕಾಯುತ್ತಿದ್ದ ಆಧಾರ್ ಮಾನ್ಯತೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇತ್ತೀಚೆಗಷ್ಟೇ ಖಾಸಗೀತನ ಮೂಲಭೂತ ಹಕ್ಕು ಎಂಬ ಮಹತ್ವದ ತೀರ್ಪು ನೀಡಿದ್ದ ಕೋರ್ಟ್, ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದರೂ, ಎಲ್ಲಾ ಸೇವೆಗಳಿಗೂ ಅದು ಕಡ್ಡಾಯವಲ್ಲ ಎನ್ನುವ ಮೂಲಕ ಖಾಸಗೀತನಕ್ಕೆ ಧಕ್ಕೆಯಾಗುತ್ತಿದೆ ಎಂಬ ಕೂಗಿಗೆ ಸ್ಪಂದಿಸಿದೆ.

ಆದರೆ ಆಧಾರ್ ಅನ್ನು ವಿವಿಧ ಸೇವೆಗಳೊಂದಿಗೆ ಜೋಡಿಸುವುದರಿಂದ ಯಾವುದೇ ರೀತಿಯಲ್ಲಿ ಖಾಸಗೀ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ದತ್ತಾಂಶ(ಡೆಟಾ) ರಕ್ಷಿಸುವುದಕ್ಕೆ ಕೇಂದ್ರ ಸರ್ಕಾರ ಸೂಕ್ತ, ಸುರಕ್ಷಿತ ಕಾನೂನು ಜಾರಿಗೆ ತರಬೇಕು ಎಂದೂ ಕೋರ್ಟು ಹೇಳಿದೆ.

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಅಷ್ಟಕ್ಕೂ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಧಾರ್ ಕಾರ್ಡ್ ಯಾವೆಲ್ಲ ಸೇವೆಗಳಿಗೆ ಕಡ್ಡಾಯ ಮತ್ತು ಯಾವುದಕ್ಕೆ ಕಡ್ಡಾಯವಲ್ಲ. ಇಲ್ಲಿದೆ ನೋಡಿ...

ಆಧಾರ್ ಕಾರ್ಡ್ ಯಾವ್ಯಾವುದಕ್ಕೆ ಕಡ್ಡಾಯ?

ಆಧಾರ್ ಕಾರ್ಡ್ ಯಾವ್ಯಾವುದಕ್ಕೆ ಕಡ್ಡಾಯ?

* ಸರ್ಕಾರದ ಎಲ್ಲಾ ಯೋಜನೆಗಳಿಗೂ ಆಧಾರ್ ಕಡ್ಡಾಯ
* ಪ್ಯಾನ್ ಕಾರ್ಡ್ ಜೊತೆ ಆಧಾರ್ ಜೋಡಣೆಯೂ ಕಡ್ಡಾಯ
* ಆದಾಯ ತೆರಿಗೆ ರಿಟರ್ನ್ಸ್ ಪಾವತಿಗೆ ಆಧಾರ್ ಕಡ್ಡಾಯ

ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು

ಯಾವುದಕ್ಕೆ ಕಡ್ಡಾಯವಲ್ಲ?

ಯಾವುದಕ್ಕೆ ಕಡ್ಡಾಯವಲ್ಲ?

* ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ.
* ಶಾಲಾ, ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ.
* ಖಾಸಗೀ ಕಂಪನಿಗಳಿಗೆ ಆಧಾರ್ ಕಡ್ಡಾಯವಲ್ಲ.

ಸಿಮ್ ಕೊಳ್ಳಲು ಕಡ್ಡಾಯವಲ್ಲ!

ಸಿಮ್ ಕೊಳ್ಳಲು ಕಡ್ಡಾಯವಲ್ಲ!

* ಮೊಬೈಲ್ ಸಿಮ್ ಕೊಳ್ಳುವುದಕ್ಕೆ ಆಧಾರ್ ಕಡ್ಡಾಯವಲ್ಲ.
* ಮೊಬೈಲ್ ನಂಬರ್ ಜೊತೆ ಆಧಾರ್ ಜೋಡಣೆ ಕಡ್ಡಾಯವಲ್ಲ.
* ಯುಜಿಸಿ, ನೀಟ್ ಮತ್ತು ಸಿಬಿಎಸ್ ಇ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ

ಐವರು ನ್ಯಾಯಮೂರ್ತಿಗಳ ಪೀಠ

ಐವರು ನ್ಯಾಯಮೂರ್ತಿಗಳ ಪೀಠ

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪಂಚಸದಸ್ಯ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು, ಮಿಶ್ರಾ ಅವರೊಂದಿಗೆ ಈ ಪೀಠದಲ್ಲಿ ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಇದ್ದರು.

English summary
Supreme Court's historical verdict on Aadhaar. For which all services Aadhaar is mandatory and not mandatory after Supreme court verdict?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X