ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಫೆಬ್ರವರಿ 03: ದೆಹಲಿಯಲ್ಲಿ ಸುರಕ್ಷತೆಗಾಗಿ, ಸುಗಮವಾದ ಜೀವನಕ್ಕೆ ಬಿಜೆಪಿ ಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆಯ ತಮ್ಮ ಮೊದಲ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರದ ಸಾಧನೆಗಳ ಜೊತೆಗೆ, ಹಲವು ಭರವಸೆಗಳನ್ನು ನೀಡಿದರು. ಜೊತೆಗೆ ಎಎಪಿ ವಿರುದ್ಧ ವಾಗ್ದಾಳಿಯನ್ನೂ ಮಾಡಿದರು.

ದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆ

'ಈ ಚುನಾವಣೆಯು ದೆಹಲಿ ಜನರ ಭವಿಷ್ಯ ನಿರ್ಧರಿಸುತ್ತದೆ. ಸುರಕ್ಷತೆಯಿಂದ ಬದುಕಬೇಕು ಎಂದುಕೊಂಡಿದ್ದರೆ ಬಿಜೆಪಿಗೆ ಮತ ನೀಡಿ' ಎಂದು ಮೋದಿ ಹೇಳಿದರು.

For Safe Delhi Give Vote To BJP: Narendra Modi

'ಲೋಕಸಭೆ ಚುನಾವಣೆ ವೇಳೆ ದೆಹಲಿ ಜನ ಅಭಿವೃದ್ಧಿಗೆ ಪೂರಕವಾಗಿ ಮತ ನೀಡಿದ್ದರು. ಈಗ ದೆಹಲಿಯ ಜನ ತಮ್ಮ ವೈಯಕ್ತಿಕ ಅಭಿವೃದ್ಧಿಗೆ, ಸುರಕ್ಷತೆ ನೆಲಸಲು ಮತ ನೀಡಬೇಕಿದೆ ಎಂದು ಅವರು ಹೇಳಿದರು.

ಎಎಪಿ ಮೇಲೂ ವಾಗ್ದಾಳಿ ನಡೆಸಿದ ಮೋದಿ, ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳನ್ನು ವಿತರಿಸಲು ದೆಹಲಿ ಸರ್ಕಾರ ಬಿಡುತ್ತಿಲ್ಲ ಎಂದರು. 'ಬಿಜೆಪಿ ಧನಾತ್ಮಕ ರಾಜಕೀಯದಲ್ಲಿ ನಂಬಿಕೆ ಇಟ್ಟಿದೆ, ಬಿಜೆಪಿಗೆ ದೇಶದ ಅಭಿವೃದ್ಧಿ ಒಂದೇ ಮೂಲ ಮಂತ್ರ' ಎಂದು ಹೇಳಿದರು.

ಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ: ಸಮೀಕ್ಷೆಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ: ಸಮೀಕ್ಷೆ

2022 ರ ವೇಳೆಗೆ ಕೇಂದ್ರ ಸರ್ಕಾರವು ಬಡವರಿಗೆ 'ಪಕ್ಕಾ ಹೌಸ್‌' ಮನೆ ಹಂಚುವ ಕಾರ್ಯ ಮುಗಿಸಲಿದೆ ಎಂಬ ಭರವಸೆಯನ್ನೂ ಮೋದಿ ಅವರು ನೀಡಿದರು. ಸರ್ಕಾರದ ಸಾಧನೆಗಳ ಬಗ್ಗೆಯೂ ಮೋದಿ ಅವರು ಭಾಷಣದಲ್ಲಿ ಮಾತನಾಡಿದರು.

English summary
PM Narendra Modi said for safer Delhi give vote to BJP. He addressed his first rally for Delhi assembly elections today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X