ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಈ ಬಾರಿ 'ದೇಶಭಕ್ತಿ' ಬಜೆಟ್ ಮಂಡನೆ

|
Google Oneindia Kannada News

ನವದೆಹಲಿ, ಮಾರ್ಚ್ 09: ದೆಹಲಿಯಲ್ಲಿಂದು ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ 'ದೇಶಭಕ್ತಿ' ಬಜೆಟ್ ಮಂಡಿಸಿದ್ದಾರೆ.

ಎಂದಿನಂತೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿರುವ ಆಪ್ ಸರ್ಕಾರ 75 ವರ್ಷದ ಸ್ವಾತಂತ್ರ್ಯೋತ್ಸವ ಹಾಗೂ ದೇಶಭಕ್ತಿಗೆ ಹೆಚ್ಚಿನ ಮಹತ್ವ ನೀಡಿದೆ.

ಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳುಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳು

ದೆಹಲಿ ಜನರಲ್ಲಿ ದೇಶಭಕ್ತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ, ಸುಮಾರು 2 ಕಿ.ಮೀ ವ್ಯಾಪ್ತಿಗೆ ರಾಷ್ಟ್ರಧ್ವಜ ಕಾಣಿಸುವಂತೆ ನಗರಾದ್ಯಂತ 500 ಕಡೆಗಳಲ್ಲಿ ತ್ರಿವರ್ಣಧ್ವಜ ಹಾರಿಸಲು 45 ಕೋಟಿ ರೂ.ವನ್ನು ಸರ್ಕಾರ ಮೀಸಲಿರಿಸಿದೆ.

Focus On Education, Health In AAP Govt’s Desh Bhakti Budget

ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಜೀವನಗಾಥೆ ತಿಳಿಸಲು ವಿಶೇಷವಾಗಿ 10 ಕೋಟಿ ರೂ. ಮೀಸಲಿಡಲಾಗಿದೆ. ಮುಂದಿನ 25 ವರ್ಷಗಳನ್ನು ತಲೆಯಲ್ಲಿರಿಸಿಕೊಂಡು ಬಜೆಟ್ ರೂಪಿಸಲಾಗಿದೆ ಎಂದಿರುವ ಸಿಸೊಡಿಯಾ, ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನ ಶೇ.25ರಷ್ಟು ಹಣವನ್ನು ಮೀಸಲಿರಿಸಿದ್ದಾರೆ.

ಅಂದಹಾಗೆ ಈ ಬಾರಿಯ ಒಟ್ಟು ಬಜೆಟ್ ಗಾತ್ರವು 69 ಸಾವಿರ ಕೋಟಿ ರೂ.ದ್ದಾಗಿದೆ. ಈ ಆರ್ಥಿಕ ವರ್ಷದಲ್ಲಿ 44.1 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ.

ದೆಹಲಿ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಎಎಪಿಗೆ ಗೆಲುವುದೆಹಲಿ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಎಎಪಿಗೆ ಗೆಲುವು

ಬಜೆಟ್‌ ಮುಖ್ಯಾಂಶಗಳು
*ಶಿಕ್ಷಣ ಕ್ಷೇತ್ರಕ್ಕೆ 16,377 ಕೋಟಿ ರೂ. ಹಂಚಿಕೆ
*ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯುವಕರು ಪಾಠ ಮಾಡುವ ವಿನೂತನ ಅವಕಾಶ.
*ವರ್ಚ್ಯುವಲ್ ಶಾಲೆ ಆರಂಭ
*ಡೆಲ್ಲಿ ಲಾ ಯೂನಿವರ್ಸಿಟಿ
*ನರ್ಸರಿಯಿಂದ 8ನೇ ತರಗತಿಯವರೆಗೆ ನೂತನ ಪಠ್ಯಕ್ರಮ
*ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಮೀಸಲು
*ದೆಹಲಿಯಲ್ಲಿ ದಿನ 60 ಸಾವಿರ ಮಂದಿಗೆ ಕೊರೊನಾ ಲಸಿಕೆ ನೀಡಲು ಅವಕಾಶ ನಿರ್ಮಾಣ
*100 ಮಹಿಳಾ ಮೊಹೊಲ್ಲಾ ಕ್ಲಿನಿಕ್‌ ಆರಂಭ
*ಎಲ್ಲಾ ಅನಧಿಕೃತ ಕಾಲೊನಿಗಳಿಗೆ ಪೈಪ್‌ಲೈನ್‌ನಲ್ಲಿ ನೀರು ಸರಬರಾಜು
*ಮುಂದಿನ ಮೂರು ವರ್ಷಗಳಲ್ಲಿ ಯಮುನಾ ನದಿ ಸ್ವಚ್ಛತೆ ಕಾರ್ಯ ಪೂರ್ಣ
*ಪ್ರತಿ ಮೂರು ಕಿ.ಮೀಗೆ ಇ-ವಾಹನ ಚಾರ್ಜಿಂಗ್ ಕೇಂದ್ರ
* ಮುಂದಿನ 25 ವರ್ಷಗಳಲ್ಲಿ ಒಲಂಪಿಕ್ ಆತಿಥ್ಯವಹಿಸುವ ನಿಟ್ಟಿನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ
*ಅಂಗನವಾಡಿ ಕೇಂದ್ರಗಳನ್ನು ಮಧ್ಯಾಹ್ನದ ನಂತರ ಮಹಿಳಾ ಸಮನ್ವಯ ಕೇಂದ್ರವಾಗಿ ಬಳಕೆಗೆ ಪ್ರೋತ್ಸಾಹ, ಇಲ್ಲಿ ಮಹಿಳೆಯರು ತಮ್ಮ ಉದ್ಯಮವನ್ನು ಆರಂಭಿಸಬಹುದು.

English summary
Delhi Deputy Chief Minister Manish Sisodia on Tuesday presented the AAP government’s budget for 2021-22 in the state Assembly. The theme of the Rs 69,000 crore budget was desh bhakti (patriotism).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X