ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾ 5ನೇ ಕಂತು: ಏಳು ವಲಯಗಳಿಗೆ ಹಲವು ಯೋಜನೆ ಘೋಷಣೆ

|
Google Oneindia Kannada News

ದೆಹಲಿ, ಮೇ 17: ಕೊರೊನಾ ವೈರಸ್‌ ವಿರುದ್ಧ ಹೋರಾಟಕ್ಕಾಗಿ 'ಆತ್ಮ ನಿರ್ಭರ್ ಭಾರತ' ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

ಈ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ ನಾಲ್ಕು ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

Live Updates: ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿLive Updates: ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ನಾಲ್ಕು ಹಂತದಲ್ಲಿ 18.5 ಲಕ್ಷ ಮೌಲ್ಯದ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಇಂದು ಐದನೇ ಹಂತದಲ್ಲಿ ಉಳಿದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇಂದು ಯಾವೆಲ್ಲ ಕ್ಷೇತ್ರಕ್ಕೆ ಏನು ಕೊಡುಗೆ ಸಿಕ್ಕಿದೆ ಎಂಬುದರ ಪ್ರಮುಖ ಅಂಶಗಳು ಇಲ್ಲಿದೆ.

ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ

ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ

* ರಾಜ್ಯಗಳಿಗೆ 4113 ಕೋಟಿ ಹಣ ಬಿಡುಗಡೆ, ಅಗತ್ಯ ವಸ್ತುಗಳ ಖರೀದಿಗೆ 3750 ಕೋಟಿ

* ಕೊರೊನಾ ವಾರಿಯರ್ಸ್ ಗೆ 50 ಲಕ್ಷ ವಿಮೆ

* ಟೆಸ್ಟಿಂಗ್ ಕಿಟ್, ಟೆಸ್ಟಿಂಗ್ ಕಿಟ್‌ಗೆ 550 ಕೋಟಿ

* 51 ಲಕ್ಷ ಪಿಪಿಇ ಕಿಟ್ ಗಳನ್ನು 400 ಮಂದಿ ಉತ್ಪಾದನಾ ಸಂಸ್ಥೆ ನೀಡಿವೆ

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು

ಆನ್‌ಲೈನ್‌ ಶಿಕ್ಷಣಕ್ಕೆ ಆಧ್ಯತೆ

ಆನ್‌ಲೈನ್‌ ಶಿಕ್ಷಣಕ್ಕೆ ಆಧ್ಯತೆ

* ಆನ್‌ಲೈನ್ ಎಜುಕೇಶನ್ ದೊಡ್ಡಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ, ಆನ್‌ ಲೈನ್ ಶಿಕ್ಷಣಕ್ಕೆ ಹೆಚ್ಚು ಅವಕಾಶ

* ಆನ್ಲೈನ್ ಶಿಕ್ಷಣ ಪ್ರಸಾರಕ್ಕಾಗಿ 3 ಪ್ರತ್ಯೇಕ ಚಾನೆಲ್

* ಡಿಟಿಎಚ್, ಸ್ಕೈಪ್ ಮೂಲಕ ವಿದ್ಯಾರ್ಥಿಗಳಿಗೆ ಇ-ಪಾಠ

* ಸ್ವಯಂಪ್ರಭಾ ಆನ್‌ಲೈನ್ ಮಾಧ್ಯಮದ ಮೂಲಕ ಪ್ರಸಾರ

* ಶಿಕ್ಷಣ ಕುರಿತು 12 ಹೊಸ ಚಾನಲ್‌ಗಳು ಕಾರ್ಯನಿರ್ವಹಿಸಲಿದೆ

* ಆನ್‌ಲೈನ್ ಶಿಕ್ಷಣ ನೀಡಲು 200 ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಲಾಗುತ್ತದೆ

'ಪಿಎಂ ಇ-ವಿದ್ಯಾ' ಯೋಜನೆ

'ಪಿಎಂ ಇ-ವಿದ್ಯಾ' ಯೋಜನೆ

* ಒನ್ ಕ್ಲಾಸ್, ಒನ್ ಚಾನಲ್ ಯೋಜನೆ

* 1 ರಿಂದ 12ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್ ಪ್ರಾರಂಭ

* ಡಿಜಿಟಲ್ ಶಿಕ್ಷಣಕ್ಕಾಗಿ 'ಪಿಎಂ ಇ-ವಿದ್ಯಾ' ಯೋಜನೆ

* ಅಂಧರಿಗೆ ರೆಡಿಯೋ ಮೂಲಕ ಶಿಕ್ಷಣಕ್ಕೆ ನಿರ್ಧಾರ

* ದಿವ್ಯಾಂಗರಿಗಾಗಿ ಪ್ರತ್ಯೇಕ ಪಠ್ಯ ಪುಸ್ತಕ ನೀಡಲು ನಿರ್ಧಾರ

* ವಿವಿಗಳಿಗಲ್ಲಿ ಆನ್‌ಲೈನ್‌ ಕೋರ್ಸ್‌ಗಳಿಗೆ ಹೆಚ್ಚು ಒತ್ತು ನೀಡಲಾಗುವುದು

* ಟಾಪ್ 100 ವಿವಿಗಳಲ್ಲಿ ಆನ್‌ಲೈನ್ ಶಿಕ್ಷಣ ಆರಂಭ, ಮೇ ರಿಂದ ಶುರು

ಮನ್ರೇಗಾ ಯೋಜನೆಗಾಗಿ 40 ಸಾವಿರ ಕೋಟಿ

ಮನ್ರೇಗಾ ಯೋಜನೆಗಾಗಿ 40 ಸಾವಿರ ಕೋಟಿ

* ಮನ್ರೇಗಾ ಯೋಜನೆಗಾಗಿ 40 ಸಾವಿರ ಕೋಟಿ ಹೆಚ್ಚುವರಿ ಅನುದಾನ, ನರೇಗಾ ಯೋಜನೆಗಾಗಿ 61 ಸಾವಿರ ಕೋಟಿ ಮೀಸಲಾಗಿಡಲಾಗಿತ್ತು.

* ಗ್ರಾಮೀಣ ಭಾಗದ ಆರ್ಥಿಕತೆ ಅಭಿವೃದ್ದಿಗೆ ಅನುಕೂಲ

* ಗ್ರಾಮೀಣ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ

* ದೇಶದಲ್ಲಿ ಆರೋಗ್ಯ ಮತ್ತು ಮೂಲ ಸೌಕರ್ಯವೃದ್ದಿಗೆ ಕ್ರಮ

* ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲ್ಯಾಬ್‌ಗಳ ನಿರ್ಮಾಣ

* ರೋಗಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನಗೆ ಕ್ರಮ

* ಎಲ್ಲಾ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ತಡೆ ಮತ್ತು ಬ್ಲಾಕ್ ಹೊಂದಿರುತ್ತದೆ

ಕಂಪನಿ ಕಾನೂನುಗಳಲ್ಲಿ ಭಾರಿ ಬದಲಾವಣೆ

ಕಂಪನಿ ಕಾನೂನುಗಳಲ್ಲಿ ಭಾರಿ ಬದಲಾವಣೆ

* ಲಾಕ್‌ಡೌನ್‌ನಿಂದ ಸಾಲ ಮರುಪಾವತಿ ಮಾಡದಿದ್ದರೆ ಸುಸ್ತಿದಾರ ಎಂದು ಪರಿಗಣಿಸಲ್ಲ

* ಎಂಎಸ್ಎಂಇಗಳು ದಿವಾಳಿಯಾಗಿವೆ ಎಂದು ಘೋಷಿಸಲು ಇದ್ದ ಮಿತಿಯನ್ನು ಒಂದು ಕೋಟಿಗೆ ಏರಿಕೆ, ದಿವಾಳಿ ಎಂದು ಘೋಷಿಸೋದನ್ನ ಒಂದು ವರ್ಷಕ್ಕೆ ಮುಂದೂಡಿಕೆ

* ಕಂಪನಿ ಕಾಯ್ದೆ ಅಪರಾಧ ಮುಕ್ತ ಮಾಡುವುದು, ಅಪರಾಧೀಕರಣದಿಂದ ಕೈಬಿಡುವುದು, ದಂಡ ವಿಧಿಸುವ 7 ಅಪರಾಧಗಳನ್ನು ಕೈಬಿಡಲಾಗುವುದು

* 5 ಅಪರಾಧಗಳನ್ನು ಪರ್ಯಾಯ ಕ್ರಮಗಳ ಮೂಲಕ ನಿವಾರಿಸಲಾಗುವುದು

* ವಿದೇಶಿ ಷೇರು ಮಾರ್ಕೆಟ್‌ಗಳಲ್ಲಿ ಭಾರತೀಯ ಕಂಪನಿಗಳ ನೋಂದಣಿಗೆ ಅವಕಾಶ

* ಕಾರ್ಪೊರೇಟ್ ಕಂಪನಿಗಳ ಉದ್ಯಮ ಸರಳೀಕರಣ

* ಎಲ್ಲ ವಲಯಗಳಲ್ಲೂ ಖಾಸಗಿ ಕಂಪನಿಗಳ ಹೂಡಿಕೆಗೆ ಅವಕಾಶ

* ಸಾರ್ವಜನಿಕ ಸಂಬಂಧಿಸಿದ ಕೆಲವು ಉದ್ಯಮಗಳ ಖಾಸಗೀಕರಣ

'ಮತ್ಸ್ಯ ಸಂಪಧ' ಯೋಜನೆಗೆ 20 ಸಾವಿರ ಕೋಟಿ

'ಮತ್ಸ್ಯ ಸಂಪಧ' ಯೋಜನೆಗೆ 20 ಸಾವಿರ ಕೋಟಿ

* ಬೀದಿ ಬದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ
* ರೈತರಿಗೆ ಸಾಲ ನೀಡಲು 86,600 ಕೋಟಿ
* ಕಿಸಾನ್ ಕಾರ್ಡ್‌ ಸಾಲಕ್ಕಾಗಿ 2,25,000 ಕೋಟಿ
* ರೈತರಿಗಾಗಿ 17,400 ಕೋಟಿ ಮೀಸಲಾಗಿಡಲಾಗಿದೆ.
* ಪ್ರಧಾನಮಂತ್ರಿ 'ಮತ್ಸ್ಯ ಸಂಪಧ' ಯೋಜನೆಗೆ 20 ಸಾವಿರ ಕೋಟಿ.
* ಹಣ್ಣು-ತರಕಾರಿ ಬೆಳೆಗಾರರಿಗೆ ಸಾಲ ನೀಡಲು 500 ಕೋಟಿ
* ನಬಾರ್ಡ್ ಮೂಲಕ ರೈತರಿಗೆ ಸಾಲ ನೀಡಲು 30 ಸಾವಿರ ಕೋಟಿ ಮೀಸಲಾಗಿಡಲಾಗಿದೆ.

* ರಾಜ್ಯ ಸರ್ಕಾರಗಳಿಗೆ ಈಗ 4.28 ಲಕ್ಷ ರೂ. ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವು ನೀಡುವಂತೆ ವಿವಿಧ ರಾಜ್ಯಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದವು. ಇದುವರೆಗೂ ರಾಜ್ಯಗಳು ಶೇ 14ರಷ್ಟು ಸಾಲ ಮಾತ್ರ ತೆಗೆದುಕೊಂಡಿವೆ.
* ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೊಳಿಸುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಉತ್ತಮ ರೀತಿಯಲ್ಲಿ ಯೋಜನೆ ಜಾರಿಗೊಳಿಸಿದರೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ.

English summary
Finance Minister Nirmala Sitharaman Announces 5th Tranche of Rs 20 Lakh Crore Economic Package Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X