ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನಿಯರ್ ಅಧಿಕಾರಿ ಜೊತೆ ಚೆಲ್ಲಾಟ ನ್ಯಾಯಾಧೀಶರಿಗೆ ಒಪ್ಪಿತ ನಡೆಯಲ್ಲ; ಸುಪ್ರೀಂ

|
Google Oneindia Kannada News

ನವದೆಹಲಿ, ಫೆಬ್ರವರಿ 17: ನ್ಯಾಯಾಧೀಶ ಸ್ಥಾನದಲ್ಲಿದ್ದವರು ತಮ್ಮ ಕಿರಿಯ ಅಧಿಕಾರಿ ಜೊತೆ ಚೆಲ್ಲಾಟವಾಡುವುದು ಸ್ವೀಕಾರಾರ್ಹ ನಡೆಯಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿಕೆ ನೀಡಿದೆ.

ನ್ಯಾಯಾಧೀಶರೊಬ್ಬರ ಮೇಲೆ ಕಿರಿಯ ಅಧಿಕಾರಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು, ನ್ಯಾಯಾಧೀಶರ ಮೇಲೆ ವಿಭಾಗೀಯ ತನಿಖೆಗೆ ಮಧ್ಯ ಪ್ರದೇಶ ಹೈಕೋರ್ಟ್‌ ಆದೇಶಿಸಿದೆ. ಈ ಆದೇಶದ ವಿರುದ್ಧ ನಿವೃತ್ತ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ಈ ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು.

ಸುಳ್ಳು ಸುದ್ದಿ, ನಕಲಿ ಖಾತೆ; ಕೇಂದ್ರ, ಟ್ವಿಟ್ಟರ್‌ಗೆ ಸುಪ್ರೀಂ ನೋಟೀಸ್ಸುಳ್ಳು ಸುದ್ದಿ, ನಕಲಿ ಖಾತೆ; ಕೇಂದ್ರ, ಟ್ವಿಟ್ಟರ್‌ಗೆ ಸುಪ್ರೀಂ ನೋಟೀಸ್

ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿಯಾದ ಸಂದರ್ಭ ಈ ಆರೋಪ ಕೇಳಿಬಂದಿದೆ ಎಂದು ನಿವೃತ್ತ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ, ವಿ ರಾಮಸುಬ್ರಹ್ಮಣಿಯನ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಪ್ ಚಾಟ್ ಗಳನ್ನು ಪರಿಶೀಲಿಸಿದ್ದು, ಈ ಆರೋಪ ಆಕ್ಷೇಪಾರ್ಹ ಎಂದು ತಿಳಿಸಿದ್ದಾರೆ.

Flirting With Junior Official Not Acceptable Conduct For Judge Says Supreme Court

"ನ್ಯಾಯಾಧೀಶರಾದವರು ಕಿರಿಯ ಅಧಿಕಾರಿಯೊಂದಿಗೆ ಹೀಗೆ ಚೆಲ್ಲಾಟವಾಡುವುದು ಸ್ವೀಕಾರಾರ್ಹ ನಡೆಯಲ್ಲ" ಎಂದು ಪೀಠ ಹೇಳಿದ್ದು, ಈ ನಡೆಯನ್ನು ಮನ್ನಿಸಿದ್ದೇ ಆದರೆ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಕೆಲಸದ ವಾತಾವರಣವು ಅನುಕೂಲಕರವಾಗಿರಲು ಸಾಧ್ಯವೇ ಇಲ್ಲ" ಎಂದು ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಪ್ ಚಾಟ್‌ಗಳನ್ನು ಪರಿಶೀಲಿಸಲಾಗಿದೆ. ಅವು ಈ ಆರೋಪವನ್ನು ಸಾಬೀತುಪಡಿಸುವಂತಿವೆ. ನಿವೃತ್ತ ನ್ಯಾಯಾಧೀಶರು ಹೈ ಕೋರ್ಟ್ ಆದೇಶದ ವಿರುದ್ಧದ ಅರ್ಜಿಯನ್ನು ಹಿಂಪಡೆದುಕೊಂಡು ತನಿಖೆ ಎದುರಿಸುವುದು ಒಳ್ಳೆಯದು ಎಂದು ಪೀಠ ಸಲಹೆ ನೀಡಿದೆ.

English summary
"To flirt with a junior official is not acceptable conduct for a judge", the Supreme Court Tuesday observed while hearing an appeal of a retired District Judge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X