ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್

|
Google Oneindia Kannada News

ನವದೆಹಲಿ, ಜೂನ್ 4: ದೇಶದಲ್ಲಿ ಹರಡುತ್ತಿದ್ದ ಕೊವಿಡ್ -19 ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಲಾಕ್‌ಡೌನ್‌ನಿಂದ ವೈರಸ್ ನಿಯಂತ್ರಣವಾಗಿಲ್ಲ ಬದಲಾಗಿ ಜಿಡಿಪಿ ತಗ್ಗಿದೆ ಎಂದು ಉದ್ಯಮಿ ರಾಜೀವ್ ಬಜಾಜ್ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಜಾಜ್ ಆಟೋ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ಅವರು, ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಖಂಡಿತಾ ನಿಯಂತ್ರಣವಾಗಿದೆ, ಆದರೆ ಅದು ವೈರಸ್ ನಿಯಂತ್ರಣವಲ್ಲ ಬದಲಿಗೆ ದೇಶದ ಆರ್ಥಿಕತೆ ನಿಯಂತ್ರಣವಾಗಿದೆ.

ದೇಶದ ಆರ್ಥಿಕತೆಯ ಮೇಲೆ ಕೊರೊನಾ ಪರಿಣಾಮ ಬೀರಲಿದೆ: ಮೋದಿದೇಶದ ಆರ್ಥಿಕತೆಯ ಮೇಲೆ ಕೊರೊನಾ ಪರಿಣಾಮ ಬೀರಲಿದೆ: ಮೋದಿ

ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಿದ್ದಾರೆ.ಕೊರೊನಾ ವೈರಸ್ ಗೆ ತುತ್ತಾಗಿದ್ದ ಇತರೆ ದೇಶಗಳೂ ಕೂಡ ಇದೇ ರೀತಿಯ ನಡೆ ಅನುಸರಿಸಿತ್ತು. ಆದರೆ ಆ ಬಳಿಕ ಈ ದೇಶಗಳಲ್ಲಿ ಕೊರೋನಾ ಸಾವು ದುಪ್ಪಾಟಾಗಿತ್ತು.

ವಿಶ್ವದ ಬಹುತೇಕ ದೇಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪರ್ಯಾಯ ಮಾರ್ಗಗಳನ್ನು ಹುಡುಕಿ ಜನರಿಗೆ ಮಾಹಿತಿ ನೀಡುತ್ತಿವೆ. ಅದಕ್ಕೆ ತಕ್ಕಂತೆ ನಿಯಮಾವಳಿಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರುತ್ತಿವೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.

ಲಾಕ್‌ಡೌನ್ ಬಳಿಕ ಅನ್‌ಲಾಕ್ ಕುರಿತು ರಾಜೀವ್ ಮಾತು

ಲಾಕ್‌ಡೌನ್ ಬಳಿಕ ಅನ್‌ಲಾಕ್ ಕುರಿತು ರಾಜೀವ್ ಮಾತು

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಉತ್ತಮ ಕ್ರಮವಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಜಪಾನ್ ಮತ್ತು ಸ್ವೀಡನ್ ದೇಶಗಳ ಉದಾಹರಣೆ ನೀಡಿದ ರಾಜೀವ್ ಬಜಾಜ್ ಅವರು, ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆ ನೀಡಿದ್ದವು. ಈ ದೇಶಗಳಲ್ಲಿ ಅಂಗಡಿಗಳು, ರೆಸ್ಟೋರೆಂಟ್ ಗಳು ತೆರೆದೇ ಇದ್ದವು ಎಂದರು.ಈ ದೇಶಗಳು ಲಾಕ್ ಡೌನ್ ಹೇರಿರಲಿಲ್ಲ. ಬದಲಿಗೆ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದವು.

ರಾಹುಲ್ ಗಾಂಧಿ ಹೇಳಿದ್ದೇನು?

ರಾಹುಲ್ ಗಾಂಧಿ ಹೇಳಿದ್ದೇನು?

2ನೇ ವಿಶ್ವಯುದ್ಧದ ಸಂದರ್ಭದಲ್ಲೂ ಇಡೀ ವಿಶ್ವ ಲಾಕ್ ಡೌನ್ ಎದುರಿಸಿತ್ತು. ಆದರೆ ಅಂತಹ ಕಠಿಣ ಸಂದರ್ಭದಲ್ಲೂ ಕೂಡ ಸಂಪೂರ್ಣ ವ್ಯವಸ್ಥೆ ಸ್ಥಗಿತವಾಗಿರಲಿಲ್ಲ. ಕೇಂದ್ರ ಸರ್ಕಾರ ಲಾಕ್ ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿದೆ. ಆದರೆ ಮೋದಿ ಸರ್ಕಾರ ಕೈಗೊಂಡ ಕ್ರಮದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಆರ್ಥಿಕ ಅಭಿವೃದ್ಧಿ ದರ ನೆಗೆಟಿವ್ ಗೆ ಕುಸಿದಿದೆ. ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಲಾಕ್ ಡೌನ್ ವೈರಸ್ ಗಿಂತಲೂ ಮಾರಕವಾಗಿ ಪರಿಣಮಿಸಿತ್ತು ಎಂದು ಹೇಳಿದ್ದಾರೆ.

ವೈರಸ್‌ನಿಂದ ಆರಂಭವಾದ ಬಿಕ್ಕಟ್ಟು

ವೈರಸ್‌ನಿಂದ ಆರಂಭವಾದ ಬಿಕ್ಕಟ್ಟು

ಒಂದು ವೈರಸ್‌ನಿಂದ ಬಿಕ್ಕಟ್ಟು ಆರಂಭಗೊಂಡಿತ್ತು, ಆದರೆ ಸರ್ಕಾರವು ಅದನ್ನು ಹರಡುತ್ತಿದೆ. ಲಾಕ್‌ಡೌನ್ ಆರೋಗ್ಯ ಬಿಕ್ಕಟ್ಟಿಗೆ ದೀರ್ಘಾವಧಿಯ ಉತ್ತರವಲ್ಲ. ಯುವಜನರು ಮತ್ತು ಆರೋಗ್ಯವಂತರು ಕೆಲಸಕ್ಕೆ ಮರಳುವುದು ಅಗತ್ಯವಾಗಿದೆ. ಲಾಕ್‌ಡೌನ್ ನಿರಂಕುಶವಾಗಿದೆ ಮತ್ತು ಅದು ಆರ್ಥಿಕ ಬಿಕ್ಕಟ್ಟಿಗೆ ಉತ್ತರವೂ ಅಲ್ಲ.

ಕೊರೊನಾ ವೈರಸ್ ನಿರ್ಣಾಯಕ ಹಂತ

ಕೊರೊನಾ ವೈರಸ್ ನಿರ್ಣಾಯಕ ಹಂತ

ಕೊರೊನಾ ವೈರಸ್ ನಿರ್ಣಾಯಕ ಹಂತ ತಲುಪಿರುವಾಗ ಕೇಂದ್ರ ಸರ್ಕಾರ ನಿಯಂತ್ರಣವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಈ ನಡೆ ತೀರಾ ತಡವಾದದ್ದು. ಬಹುಶಃ ಭಾರತ ದೇಶವೊಂದೇ ಕೊರೋನಾ ವೈರಸ್ ನಿಯಂತ್ರಣದಲ್ಲಿದ್ದಾಗ ಲಾಕ್ ಡೌನ್ ಹೇರಿ, ವೈರಸ್ ಆರ್ಭಟ ಜಾರಾಗಿದ್ದಾಗ ಲಾಕ್ ಡೌನ್ ತೆಗೆಯುತ್ತಿರುವ ಮೊದಲ ದೇಶವೇನೋ ಎಂಬಂತಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆಯೇ ಕೂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಇದೇ ರೀತಿಯ ವಾಗ್ದಾಳಿ ನಡೆಸಿದ್ದರು.

English summary
A draconian but porous lockdown to slow the spread of coronavirus ended up flattening the wrong curve and left the country with the worst of both worlds, industrialist Rajiv Bajaj has said in a video interaction with Congress leader Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X