ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆ ಹರ್ಕ್ಯುಲಿಸ್ ವಿಮಾನ ಪತನ, 5 ಸಾವು

|
Google Oneindia Kannada News

ನವದೆಹಲಿ, ಮಾ.28 : ಭಾರತೀಯ ವಾಯುಪಡೆಗೆ ಸೇರಿದ ಸಿ-130ಜೆ ಹರ್ಕ್ಯುಲಿಸ್ ವಿಮಾನ ಶುಕ್ರವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಐವರು ಸಿಬ್ಬಂದಿಗಳು ಈ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಆಗ್ರಾದಿಂದ ಹೊರಟಿದ್ದ ಸಿ-130 ಸೂಪರ್ ಹರ್ಕ್ಯುಲಿಸ್ ವಿಮಾನ ಮಧ್ಯಾಹ್ನದ ವೇಳೆಗೆ ಮಧ್ಯಪ್ರದೇಶ-ರಾಜಸ್ಥಾನ ಗಡಿಯಿಂದ ಸುಮಾರು 72 ಕಿ.ಮೀ.ದೂರದಲ್ಲಿ ಪತನಗೊಂಡಿದೆ. ವಿಶೇಷ ಕಾರ್ಯಚರಣೆಗಾಗಿ ಈ ವಿಮಾನವನ್ನು ವಾಯುಪಡೆ ಬಳಸುತ್ತಿತ್ತು.

Hercules plane

ಸಿ-130 ವಿಮಾನ ಅಪಘಾತದಲ್ಲಿ ಇಬ್ಬರು ವಿಂಗ್ ಕಮ್ಯಾಂಡರ್ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ತರಬೇತಿಗಾಗಿ ನಡೆಸುತ್ತಿದ್ದಾಗ ಈ ಅಪಘಾತನ ನಡೆದಿದೆ ಎಂದು ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಭಾರತೀಯ ವಾಯುಪಡೆ ಕೆಲವು ವರ್ಷಗಳ ಹಿಂದೆಯಷ್ಟೇ ಆರು ಸಿ-130ಜೆ ವಿಮಾನವನ್ನು ಅಮೆರಿಕದಿಂದ ಖರೀದಿಸಿತ್ತು. ಸುಮಾರು 600 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದ್ದ ವಿಮಾನವನ್ನು ವಿಶೇಷ ಕಾರ್ಯಚರಣೆಗಳಿಗೆ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಉತ್ತರಾಖಂಡ್ ನಲ್ಲಿ ಭಾರೀ ಪ್ರವಾಹ ಉಂಟಾದಾಗ ರಕ್ಷಣಾ ಕಾರ್ಯಾಚರಣೆಗೆ ಈ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು.

ವಾಯುಪಡೆ ಮುಖ್ಯಸ್ಥ ಅರೂಪ್‌ ರಾಹಾ ವಿಮಾನ ಪತನದ ಕುರಿತು ರಕ್ಷಣಾ ಸಚಿವ ಎಕೆ ಆಂಟನಿ ಅವರಿಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ವಾಯುಪಡೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ವಾರ ಸಮುದ್ರದಲ್ಲಿ ಪತನವಾಗಿದೆ ಎಂದು ಘೋಷಿಸಲಾದ ಮಲೇಷ್ಯಾದ ಎಂಎಚ್ 370 ವಿಮಾನದ ಹುಡುಕಾಟಕ್ಕೂ ಸಿ-130ಜೆ ವಿಮಾನವನ್ನು ವಾಯುಪಡೆ ಬಳಸಿಕೊಂಡಿತ್ತು. [ಎಂಎಚ್ 370 ದುರಂತ ಅಂತ್ಯ]

English summary
In a major setback to the Air Force, a newly acquired US-made C-130J transport aircraft on Friday crashed near Gwalior after taking off from Agra air base, killing five crew members, including four officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X