ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ

|
Google Oneindia Kannada News

ನವದೆಹಲಿ, ಜೂನ್ 17: ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಸಂಭ್ರಮ, ಅವಿಸ್ಮರಣೀಯ ಕ್ಷಣದಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಯುವ ಸಂಸದರ ಪೈಕಿ ಒಬ್ಬರಾಗಿರುವ ತೇಜಸ್ವಿ ಸೂರ್ಯ ಅವರು ಸಂಸತ್ ಪ್ರವೇಶಕ್ಕೂ ಮುನ್ನ ಮಾತನಾಡಿದರು.

17ನೇ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೈಸೂರು ಶೈಲಿಯ ಪಂಚೆ, ಶಲ್ಯ ಧರಿಸಿ ತೇಜಸ್ವಿ ಸೂರ್ಯ ಅವರು ಬಂದಿದ್ದು ವಿಶೇಷವಾಗಿತ್ತು. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಎರಡನೇ ಬಾರಿ ಸಂಸದರಾದ ಸಂತಸದಲ್ಲಿ ಈ ಬಾರಿ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.

ಅಧಿವೇಶನದ LIVE ಅಪ್ಡೇಟ್ಸ್ : ಪ್ರಮಾಣ ವಚನ ಸ್ವೀಕರಿಸಿದ ಮೋದಿಅಧಿವೇಶನದ LIVE ಅಪ್ಡೇಟ್ಸ್ : ಪ್ರಮಾಣ ವಚನ ಸ್ವೀಕರಿಸಿದ ಮೋದಿ

ಇವರಿಬ್ಬರ ಜೊತೆಗೆ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಾಲಿವುಡ್ಡಿನ ಹಿರಿಯ ನಟ ಸನ್ನಿ ಡಿಯೋಲ್, ಭೋಜ್ ಪುರಿ ನಟ, ದೆಹಲಿ ಸಂಸದ ರವಿ ಕಿಷನ್ ಅವರು ಕಪ್ಪುಬಣ್ಣದ ಗಾಗಲ್ಸ್, ನೀಲಿ ವೇಸ್ಟ್​ಕೋಟ್​ ಧರಿಸಿ ಗಮನ ಸೆಳೆದರು.

First-time MP From Bangalore South Tejasvi Surya Enters Parliament

ತೇಜಸ್ವಿ ಸೂರ್ಯ ಮಾತು: ಸಂಸತ್​ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಜನರಿಗೆ ವಿನಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತಾ, ಸಂಸತ್​ ಭವನವನ್ನು ಪ್ರವೇಶಿಸುತ್ತಿದ್ದೇನೆ ಎಂದರು.

ತೇಜಸ್ವಿಸೂರ್ಯ - ಲೋಕಸಭೆಗೆ ಆಯ್ಕೆಯಾದ ಕಿರಿಯ ವಯಸ್ಸಿನ ಸಂಸದತೇಜಸ್ವಿಸೂರ್ಯ - ಲೋಕಸಭೆಗೆ ಆಯ್ಕೆಯಾದ ಕಿರಿಯ ವಯಸ್ಸಿನ ಸಂಸದ

ಸಂಸತ್​ ಭವನ ಬಹುದೊಡ್ಡ ಸಂಸ್ಥೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಹಣೆಬರಹ ನಿರ್ಧಾರವಾಗಿರುವ, ನಿರ್ಧಾರವಾಗಲಿರುವ ಪವಿತ್ರ ಸ್ಥಳವಿದು. ಇಂಥ ಪವಿತ್ರ ಸ್ಥಳದಲ್ಲಿ ಕುಳಿತು ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಆದರ್ಶದೊಂದಿಗೆ ಸಂಸತ್​ನ ಒಳಗೆ ಮತ್ತು ಹೊರಗೆ ಹೋರಾಡುವೆ ಎಂದರು.

English summary
First-time MP and BJP candidate from Bangalore South, Tejasvi Surya reached Parliament to take oath as MP in 17th Lok Sabha. I am entering the Parliament with a lot of gratitude for people who elected me: Tejasvi Surya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X