ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಲ್ಲಿ ನಾಲ್ವರನ್ನು ಗಲ್ಲಿಗೇರಿಸಿದ್ದು ಇದೇ ಮೊದಲು

|
Google Oneindia Kannada News

ನವದೆಹಲಿ, ಮಾರ್ಚ್ 20 : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಗಲ್ಲು ತಪ್ಪಿಸಿಕೊಳ್ಳಲು ನಡುರಾತ್ರಿಯ ಹೈಡ್ರಾಮ ಮಾಡಿದ ಅಪರಾಧಿಗಳು ಅಂತಿಮವಾಗಿ ಶುಕ್ರವಾರ ಮುಂಜಾನೆ ನೇಣು ಕುಣಿಕೆಗೆ ಕೊರಳೊಡ್ಡಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ದೆಹಲಿಯ ತಿಹಾರ್ ಜೈಲಿನಲ್ಲಿದ್ದರು. ಪವನ್ ಎಂಬುವವರು ಗಲ್ಲು ಶಿಕ್ಷೆಯನ್ನು ಅಧಿಕಾರಗಳ ಸಮ್ಮುಖದಲ್ಲಿ ಜಾರಿಗೊಳಿಸಿದರು. ಏಳು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

ನಿರ್ಭಯ ಪ್ರಕರಣ; ಗಲ್ಲು ತಪ್ಪಿಸಿಕೊಳ್ಳಲು ನಡುರಾತ್ರಿ ಹೈಡ್ರಾಮ ನಿರ್ಭಯ ಪ್ರಕರಣ; ಗಲ್ಲು ತಪ್ಪಿಸಿಕೊಳ್ಳಲು ನಡುರಾತ್ರಿ ಹೈಡ್ರಾಮ

ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಗಲ್ಲಿಗೇರಿಸಲಾಗಿದೆ. ರಾಮ್ ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣದ ಬಾಲಾಪರಾಧಿ 3 ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದಾನೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇದು ನಾರಿ ಶಕ್ತಿಯ ಗೆಲುವು ಎಂದ ಮೋದಿನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಇದು ನಾರಿ ಶಕ್ತಿಯ ಗೆಲುವು ಎಂದ ಮೋದಿ

Tihar Jail

1983ರಲ್ಲಿ ಒಟ್ಟಿಗೆ ನಾಲ್ವರನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ನಾಲ್ವರಿಗೆ ಒಟ್ಟಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.

ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾ ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾ

ಅಭಯಂಕರ ಕೊಲೆ ಪ್ರಕರಣ ಸೇರಿದಂತೆ 1976ರ ಜನವರಿಯಿಂದ 1977ರ ಮಾರ್ಚ್ ತನಕ ನಡೆದ 10 ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದ ನಾಲ್ವರನ್ನು ಒಟ್ಟಿಗೆ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

English summary
This is for the first time four men have been executed simultaneously at Tihar jail. In 1983 four convicts were hanged together at Yerwada jail, Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X