ನವದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆ
ನವದೆಹಲಿ, ನ. 19 : ವಿಶ್ವದಲ್ಲಿ ಆತಂಕ ಮೂಡಿಸಿರುವ ಮಹಾಮಾರಿ ಎಬೋಲಾ ಭಾರತದಲ್ಲಿಯೂ ಪತ್ತೆಯಾಗಿದೆ. ಲೈಬೀರಿಯಾದಿಂದ ದೆಹಲಿಗೆ ಬಂದಿಳಿದ ಭಾರತದ ಯುವಕನ ವೀರ್ಯದಲ್ಲಿ ಎಬೋಲಾ ವೈರಸ್ ಪತ್ತೆಯಾಗಿದೆ. ಆದರೆ, ರೋಗ ಲಕ್ಷಣಗಳು ಕಂಡುಬಂದಿಲ್ಲ.
ನ.10ರಂದು
ದೆಹಲಿ
ವಿಮಾನ
ನಿಲ್ದಾಣಕ್ಕೆ
ಆಗಮಿಸಿದ್ದ
ಯುವಕನನ
ದೇಹದಲ್ಲಿ
ಎಬೋಲಾ
ಕಾಯಿಲೆಯ
ಸೂಚನೆಗಳು
ಕಂಡುಬಂದಿಲ್ಲ.
ಆದರೂ
ಆತನನ್ನು
ವಿಮಾನನಿಲ್ದಾಣದ
ವಿಶೇಷ
ಆರೋಗ್ಯ
ಘಟಕದಲ್ಲಿ
ಪ್ರತ್ಯೇಕವಾಗಿ
ಇರಿಸಲಾಗಿದೆ
ಎಂದು
ಆರೋಗ್ಯ
ಸಚಿವಾಲಯ
ಮಂಗಳವಾರ
ಹೇಳಿದೆ.
[ಮಹಾಮಾರಿ
ಎಬೋಲಾ
ತಡೆಗೆ
ಒಬಾಮಾ
ಸೂತ್ರ]
ಸೆಪ್ಟೆಂಬರ್ನಲ್ಲಿ ಲೈಬೀರಿಯಾದ ಆಸ್ಪತ್ರೆಯಲ್ಲಿ ಎಬೋಲಾಗೆ ಯುವಕ ಚಿಕಿತ್ಸೆ ಪಡೆದುಕೊಂಡಿದ್ದ. ಈಗ ಎಬೋಲಾದಿಂದ ಮುಕ್ತನಾಗಿದ್ದಾನೆ ಎಂದು ಲೈಬೀರಿಯಾ ಆರೋಗ್ಯ ಸಚಿವಾಲಯ ಪ್ರಮಾಣಪತ್ರ ನೀಡಿತ್ತು. ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಎಬೋಲಾ ತಪಾಸಣೆಗೆ ಒಳಪಡಿಸಲಾಗಿದ್ದು, ರಕ್ತದಲ್ಲಿ ಎಬೋಲಾ ವೈರಸ್ ಕಂಡುಬಂದಿಲ್ಲ.[ಹತ್ತು ಸಾವಿರ ಜನರಿಗಂಟಿದ ಮಹಾಮಾರಿ ಎಬೋಲಾ]
ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹಾಗೂ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಯುವಕನ ವೀರ್ಯ ತಪಾಸಣೆ ನಡೆಸಲಾಗಿದ್ದು, ವೀರ್ಯದಲ್ಲಿ ಈ ವೈರಸ್ ಪತ್ತೆಯಾಗಿದೆ. ವೈರಸ್ ಇಲ್ಲ ಎಂದು ಖಚಿತವಾಗುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಯುವಕನನ್ನು ಇಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.