ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ದ್ವಾರಕದಲ್ಲಿ ನಿರ್ಮಾಣವಾಗಲಿದೆ ಮೊದಲ ಪ್ರಾಣಿಗಳ ಸ್ಮಶಾನ

|
Google Oneindia Kannada News

ನವದೆಹಲಿ, ಡಿಸೆಂಬರ್ 22: ದೆಹಲಿಯ ದ್ವಾರಕದಲ್ಲಿ ಮೊದಲ ಪ್ರಾಣಿ ಸ್ಮಶಾನ ಶೀಘ್ರದಲ್ಲೇ ನಿರ್ಮಾಣವಾಗಲಿದೆ.

ಇನ್ನುಮುಂದೆ ದೆಹಲಿಯಲ್ಲಿ ಸತ್ತ ಪ್ರಾಣಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.ದೆಹಲಿಯಲ್ಲಿ ಬೆಕ್ಕುಗಳು ಮತ್ತು ನಾಯಿಗಳಿಗೆ ಮೊದಲ ಸಾರ್ವಜನಿಕ ಶವಾಗಾರವನ್ನು ಸ್ಥಾಪಿಸಲು ದೆಹಲಿ ಮಹಾನಗರ ಪಾಲಿಕೆ ಮುಂದಾಗಿದೆ.

ಒಟ್ಟು 700 ಚದರಡಿ ಪ್ರದೇಶವನ್ನು ಇದಕ್ಕೆ ಮೀಸಲಿಡಲಾಗಿದೆ. ಪ್ರಾಣಿಗಳನ್ನು ವಿಧಿವಿಧಾನದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ, ಹಾಗೆಯೇ ಅವುಗಳ ಅಸ್ತಿಯನ್ನು 15 ದಿನಗಳ ವರೆಗೆ ಶೇಖರಿಸಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

First Dedicated Animal Crematorium To Come Up In Delhis Dwarka

ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಮುನುಷ್ಯರಂತೆ ಪ್ರಾಣಿಗಳು ಕೂಡ ಒಂದು ಜೀವಿ, ಮನುಷ್ಯರಿಗೆ ಅಂತ್ಯಸಂಸ್ಕಾರ ಮಾಡಿದಂತೆ ನಿಮ್ಮ ಮನೆಯ ನೆಚ್ಚಿನ ಪ್ರಾಣಿಗಳುಗೂ ಕೂಡ ಅಂತ್ಯ ಸಂಸ್ಕಾರ ಮಾಡಬಹುದು.

ಅಂತ್ಯ ಸಂಸ್ಕಾರಕ್ಕೆ ಪ್ರಾಣಿಯ ತೂಕದ ಮೇರೆಗೆ ಶುಲ್ಕ ನಿಗದಿಪಡಿಸಲಾಗುತ್ತದೆ. ನಾಯಿ 30 ಕೆಜಿಗಿಂತ ಕಡಿಮೆ ಇದ್ದರೆ 2 ಸಾವಿರ ರೂ ನೀಡಬೇಕಾಗುತ್ತದೆ, 30 ಕೆಜಿಗಿಂತ ಹೆಚ್ಚಿದ್ದರೆ 3 ಸಾವಿರ ರೂ ನೀಡಬೇಕು.

ಸುಮಾರು 100 ಕೆಜಿ ಯಷ್ಟು ದೊಡ್ಡ ಪ್ರಾಣಿಗಳನ್ನು ಕೂಡ ಅಂತ್ಯ ಸಂಸ್ಕಾರ ಮಾಡಬಹುದಾಗಿದೆ. ಈ ಸ್ಮಶಾನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

English summary
Finally, there will be a dignified cremation/burial for your deceased animals in India's national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X