• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿನಿಂದ ಎನ್‌ಎಸ್‌ಜಿ ಅಧಿಕಾರಿ ಸಾವು

|

ನವದೆಹಲಿ, ಮೇ 05: ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಎನ್‌ಜಿಸಿಯಲ್ಲಿ ಮೊದಲ ಕೊರೊನಾ ಸಂಬಂಧಿತ ಸಾವು ಸಂಭವಿಸಿದೆ. ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ ಜಿ)ಯ ಅಧಿಕಾರಿಯೊಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

ಗ್ರೂಪ್ ಕಮಾಂಡರ್ (ಕೋ-ಆರ್ಡಿನೇಷನ್) ಬಿ.ಕೆ. ಝಾ (53) ಅವರನ್ನು ಗ್ರೇಟರ್ ನೋಯ್ಡಾದ ಕೇಂದ್ರ ಸೇನಾ ಪೊಲೀಸ್ ಪಡೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಸೋಂಕು ತೀವ್ರವಾದ ಪರಿಣಾಮ ಮೇ 05 ರಂದು ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಎನ್ಎಸ್ ಜಿ ಹೇಳಿದೆ.

ಸಚಿವ ಜೈಶಂಕರ್ ಜತೆ ಬ್ರಿಟನ್ ಪ್ರವಾಸದಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು ಸಚಿವ ಜೈಶಂಕರ್ ಜತೆ ಬ್ರಿಟನ್ ಪ್ರವಾಸದಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು

ಬಿಎಸ್ಎಫ್ ನಿಂದ 2018 ರಲ್ಲಿ ಅವರನ್ನು ಎನ್ಎಸ್ ಜಿಗೆ ನಿಯುಕ್ತಿಗೊಳಿಸಲಾಗಿತ್ತು. ಇದಕ್ಕೂ ಮುನ್ನ ಝಾ ಅವರು ಬಿಎಸ್ಎಫ್ ಮಹಾನಿರ್ದೇಶಕರ ಪ್ರಧಾನ ಸಿಬ್ಬಂದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಎನ್ ಎಸ್ ಜಿ ವ್ಯಾಪ್ತಿಯಲ್ಲಿ ವರದಿಯಾಗಿರುವ ಮೊದಲ ಸಾವು ಇದಾಗಿದೆ. ಈ ಅಧಿಕಾರಿ ಎನ್ ಎಸ್ ಜಿ ಪಡೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಾಚರಣೆಯ ವಿಭಾಗದಲ್ಲಿ ಇರಲಿಲ್ಲ ಎಂದು ಎನ್ಎಸ್ ಜಿ ಸ್ಪಷ್ಟನೆ ನೀಡಿದೆ. ಬಿಹಾರ ಮೂಲದವರಾದ ಝಾ, 1993 ರ ಬ್ಯಾಚ್ ನ ಬಿಎಸ್ಎಫ್ ಕೇಡರ್ ನ ಅಧಿಕಾರಿಯಾಗಿದ್ದರು.

ಎನ್ಎಸ್ ಜಿ ಹಾಗೂ ಎನ್ ಡಿಆರ್ ಎಫ್ ನಲ್ಲಿ ಒಟ್ಟು 66,000 ಕೋವಿಡ್-19 ಪ್ರಕರಾಣಗಳಿದ್ದು, 7,900 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ನಿಂದ ಈ ವರೆಗೂ 248 ಸಾವುಗಳು ಸಂಭವಿಸಿವೆ.

ಎರಡೂ ಪಡೆಗಳೂ ಝಾ ಅವರ ಸಾವಿಗೆ ಸಂತಾಪ ಸೂಚಿಸಿವೆ. ಎನ್ಎಸ್ ಜಿ ಅಂಕಿ-ಅಂಶಗಳ ಪ್ರಕಾರ ತನ್ನ ವ್ಯಾಪ್ತಿಯಲ್ಲಿ ಈ ವರೆಗೂ 430 ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿತ್ತು ಈ ಪೈಕಿ 59 ಸಕ್ರಿಯ ಪ್ರಕರಣಗಳಿವೆ.

English summary
Country's federal counter-terrorist commando force National Security Guard (NSG) reported its first coronavirus linked death on Wednesday when a senior commander succumbed to the infection, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X