ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ದೆಹಲಿ ಕೋರ್ಟ್ ಆವರಣದಲ್ಲೇ ದರೋಡೆಕೋರನ ಶೂಟೌಟ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲೇ ನಡೆದ ಗುಂಡಿನ ದಾಳಿಯಲ್ಲಿ ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

"ವಕೀಲರ ಸಮವಸ್ತ್ರದಲ್ಲಿದ್ದ ಇಬ್ಬರು ದಾಳಿಕೋರರು ನ್ಯಾಯಾಲಯದಲ್ಲಿ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರರನ್ನು ಹೊಡೆದು ಉರುಳಿಸಲಾಗಿದೆ" ಎಂದು ರೋಹಿಣಿ ಡಿಸಿಪಿ ಪ್ರಣವ್ ತಾಯಲ್ ಹೇಳಿದ್ದಾರೆ.

Firing in Delhis Rohini Court : Rivals Kill Gangster Gogi, 3 Others

ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು 'ಟಿಲ್ಲು' ಗ್ಯಾಂಗ್‌ಗೆ ಸೇರಿದ ಕೊಲೆಗಾರರನ್ನು ಅಧಿಕಾರಿಗಳು "ಕೊಂದಿದ್ದಾರೆ" ಎಂದು ಹೇಳಿದರು. ಇದು "ಗ್ಯಾಂಗ್ ವಾರ್ ಅಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

ನ್ಯಾಯಮೂರ್ತಿ ಎದುರಿನಲ್ಲಿ ಗುಂಡಿನ ದಾಳಿ:
ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರ ಎದುರಿನಲ್ಲೇ ಸುಮಾರು 25-30 ಸುತ್ತು ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿ ಸತ್ಯನಾರಾಯಣ ಶರ್ಮಾ ಹೇಳಿದ್ದಾರೆ. ಕಳೆದ ಮಾರ್ಚ್ 2018ರಲ್ಲಿ 'ಟಿಲ್ಲು' ಗ್ಯಾಂಗ್ ಸದಸ್ಯನನ್ನು ರೋಹಿಣಿ ಕೋರ್ಟ್ ಸುತ್ತಮುತ್ತಲಿನ ಪ್ರದೇಶದಲ್ಲೇ ಗೋಗಿ ಗ್ಯಾಂಗ್ ಹೊಡೆದುರುಳಿಸಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿಯಲ್ಲಿ ದೆಹಲಿ ಪೋಲಿಸ್‌ನ ವಿಶೇಷ ಪಡೆಯು ಜಿತೇಂದರ್ ಗೋಗಿಯನ್ನು ಬಂಧಿಸಿತು. ಸುಲಿಗೆ, ದರೋಡೆ, ಕಾರುಗಳ್ಳತನ ಮತ್ತು ದರೋಡೆಗಳ ಜೊತೆಗೆ ಕೊಲೆ ಮತ್ತು ಕೊಲೆ ಯತ್ನದ 19 ಪ್ರಕರಣಗಳನ್ನು ದಾಖಲಿಸಲಾಗಿತ್ತು.
2010ರಲ್ಲಿ ತಮ್ಮ ತಂದೆಯ ಮರಣ ನಂತರ ಶಾಲೆಯಿಂದ ದೂರ ಉಳಿದ ಗೋಗಿ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದು, ನಂತರದಲ್ಲಿ ಆಸ್ತಿ ವ್ಯವಹಾರವನ್ನು ಶುರು ಮಾಡಿಕೊಂಡಿದ್ದನು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಸೆಪ್ಟೆಂಬರ್ 2010ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗೋಗಿ ಗುಂಡು ಹಾರಿಸಿದ್ದನು. ನಂತರ ದೆಹಲಿ ವಿಶ್ವವಿದ್ಯಾನಿಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆಗಳಲ್ಲಿ ಗೋಗಿ ಮತ್ತು ಆತನ ಸ್ನೇಹಿತರು ಸಂದೀಪ್ ಮತ್ತು ರವೀಂದರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದರು.

English summary
Firing in Delhi’s Rohini Court : Posing as Lawyers, Rivals Kill Gangster Gogi and 3 Others; 25 Rounds Shot in Front of Judge. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X