ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಮಾಸ್ಕ್ ತಯಾರಿಕಾ ಘಟಕದಲ್ಲಿ ಅಗ್ನಿ ಅನಾಹುತ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ನವದೆಹಲಿಯ ಮಾಯಾಪುರಿಯಲ್ಲಿನ ಮಾಸ್ಕ್ ತಯಾರಿಕಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು ಒಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ.

ಶನಿವಾರ ಬೆಳಿಗ್ಗೆ 3.54 ಗಂಟೆ ಸುಮಾರಿಗೆ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿ ರಕ್ಷಣಾ ಕಾರ್ಯ ನಡೆಸಿರುವುದಾಗಿ ದೆಹಲಿ ಅಗ್ನಿಶಾಮಕ ಸೇವೆ ಮುಖ್ಯಸ್ಥ ಅತುಲ್ ಗರ್ಗ್ ಮಾಹಿತಿ ನೀಡಿದ್ದಾರೆ. ಅನಾಹುತದಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರನ್ನು ರಕ್ಷಿಸಿರುವುದಾಗಿ ತಿಳಿಸಿದ್ದಾರೆ. ಮೃತಪಟ್ಟವರನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ.

Fire Broke Out At Mask Manufacturing Unit One Dead In Delhi

ಉರಲ್ ಪರ್ವತ ಪ್ರದೇಶ ವೃದ್ಧಾಶ್ರಮಕ್ಕೆ ಬೆಂಕಿ, 11 ಮಂದಿ ಮೃತಉರಲ್ ಪರ್ವತ ಪ್ರದೇಶ ವೃದ್ಧಾಶ್ರಮಕ್ಕೆ ಬೆಂಕಿ, 11 ಮಂದಿ ಮೃತ

ಮಾಸ್ಕ್ ತಯಾರಿಕಾ ಘಟಕದ ಮೂರನೇ ಅಂತಸ್ತಿನಲ್ಲಿ ಯಂತ್ರಗಳು ಹಾಗೂ ಸಾಮಗ್ರಿಗಳಿಗೆ ಬೆಂಕಿ ತಗುಲಿ ಅನಾಹುತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಅಗ್ನಿಶಾಮಕ ತಂಡ ಘಟಕದ ಬಾಗಿಲು ಹಾಗೂ ಗೋಡೆಗಳನ್ನು ಒಡೆದು ಮೂವರನ್ನು ರಕ್ಷಿಸಿದ್ದಾರೆ. ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
One dead and 3 rescued after fire broke out at mask manufacturing unit in delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X