ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ತುಘಲಕಾಬಾದ್ ಸ್ಲಂನಲ್ಲಿ ಅಗ್ನಿ ಅವಘಡ: 200 ಕ್ಕೂ ಹೆಚ್ಚು ಗುಡಿಸಲು ಭಸ್ಮ

|
Google Oneindia Kannada News

ನವದೆಹಲಿ, ಜೂನ್ 3: ನವದೆಹಲಿಯ ತುಘಲಕಾಬಾದ್ ನಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ, 200 ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.

Recommended Video

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು | virat kohli | Oneindia Kannada

ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ, ತುಘಲಕಾಬಾದ್ ನಲ್ಲಿನ ವಾಲ್ಮೀಕಿ ಬಸ್ತಿಗೆ ಆಗಮಿಸಿದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿ ಕಾರ್ಯಾಚರಣೆ ನಡೆಸುತ್ತಿವೆ.

ಚಿಕ್ಕಮಗಳೂರು; ಶಾರ್ಟ್‌ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಟಯರ್ ಅಂಗಡಿಚಿಕ್ಕಮಗಳೂರು; ಶಾರ್ಟ್‌ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಟಯರ್ ಅಂಗಡಿ

''ಬುಧವಾರ ಬೆಳಗ್ಗೆ 1.31 ಸುಮಾರಿಗೆ ದೂರವಾಣಿ ಕರೆ ಬಂತು. ಬೆಂಕಿಯನ್ನು ನಂದಿಸಲು 20 ಅಗ್ನಿಶಾಮಕ ವಾಹನಗಳನ್ನು ನೇಮಿಸಲಾಗಿದೆ'' ಎಂದು ವಿಭಾಗೀಯ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

fire-breaks-out-at-slum-in-delhi-s-tughlakabad


ಮುಂಜಾನೆ 3 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯದವರೆಗೂ ಅಗ್ನಿ ಅವಘಡದಿಂದ ಯಾವುದೇ ಸಾವು ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ.. ಅಂದ್ರೆ ಮೇ 26 ರಂದು ಇದೇ ತುಘಲಕಾಬಾದ್ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡು ನೂರಾರು ಗುಡಿಸಲುಗಳು ಅಗ್ನಿಗೆ ಆಹುತಿಯಾಗಿತ್ತು.

English summary
Fire breaks out at Slum in Delhi's Tughlakabad on June 3rd. More than 200 shanties were burnt to ashes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X