ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ಅಗ್ನಿ ಅವಘಡ; 32 ಸಾವು, ಹಲವರ ರಕ್ಷಣೆ

|
Google Oneindia Kannada News

ನವದೆಹಲಿ, ಡಿಸೆಂಬರ್ 8 : ನವದೆಹಲಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಸುಮಾರು 32 ಜನರು ಮೃತಪಟ್ಟಿದ್ದಾರೆ. ಅಗ್ನಿ ಶಾಮಕ ವಾಹನಗಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಭಾನವಾರ ಬೆಳಗ್ಗೆ ದೆಹಲಿಯ ಆಂಜ್ ಮಂಡಿ ಪ್ರದೇಶದ ರಾಣಿ ಝಾನ್ಸಿ ರಸ್ತೆಯಲ್ಲಿ ಈ ಅಪಘಡ ನಡೆದಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಂಬೈನ ಒಎನ್‌ಜಿಸಿ ಅನಿಲ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ: 5ಸಾವು ಮುಂಬೈನ ಒಎನ್‌ಜಿಸಿ ಅನಿಲ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ: 5ಸಾವು

ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ 20ಕ್ಕೂ ಅಧಿಕ ಜನರು ಸಿಲುಕಿಕೊಂಡಿದ್ದಾರೆ. 30 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ಸಾಗುತ್ತಿದೆ. ಕಟ್ಟದಲ್ಲಿ ಹೊಗೆ ತುಂಬಿಕೊಂಡಿದೆ.

ಅಯ್ಯಯ್ಯೋ, ವಿಧಾನಸಭೆ ಕಟ್ಟಡದಲ್ಲೇ ಹೊತ್ತಿಕೊಂಡಿತಾ ಬೆಂಕಿ! ಅಯ್ಯಯ್ಯೋ, ವಿಧಾನಸಭೆ ಕಟ್ಟಡದಲ್ಲೇ ಹೊತ್ತಿಕೊಂಡಿತಾ ಬೆಂಕಿ!

Fire Accident

ಅಗ್ನಿ ಅಪಘಡದಲ್ಲಿ ಗಾಯಗೊಂಡವರನ್ನು ಆರ್‌ಎಂಎಲ್ ಆಸ್ಪತ್ರೆ, ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದವರಲ್ಲಿಯೂ ಹಲವರು ಮೃತಪಟ್ಟದ್ದಾರೆ.

ಬೀದರ್; ಕಾರಿಗೆ ಬೆಂಕಿ, ಮಹಿಳೆ ಸಜೀವ ದಹನ ಬೀದರ್; ಕಾರಿಗೆ ಬೆಂಕಿ, ಮಹಿಳೆ ಸಜೀವ ದಹನ

ಭಾನುವಾರ ಮುಂಜಾನೆ 5.22ರ ವೇಳೆಗೆ ಮೊದಲು ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ತಿಳಿದಿದೆ. ಬೆಂಕಿ ಹೊತ್ತಿಕೊಂಡಾಗ ಕಟ್ಟದಲ್ಲಿ 25ಕ್ಕೂ ಅಧಿಕ ಜನರು ಮಲಗಿದ್ದರು ಎಂದು ಕಟ್ಟಡದ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಅಗ್ನಿಶಾಮಕ ದಳದ ಮುಖ್ಯಸ್ಥ ಸುನೀಲ್ ಚೌಧರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, " 600 ಚದರ ಅಡಿ ಇರುವ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಕಟ್ಟಡದಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ದಾಸ್ತಾನು ಮಾಡಲಾಗಿತ್ತು. ಇದರಿಂದಾಗಿ ಬೆಂಕಿಯೂ ಹೆಚ್ಚಾಗಿ ವ್ಯಾಪಿಸಿದೆ" ಎಂದು ಹೇಳಿದರು.

English summary
Delhi police said that 32 people dead in fire accident at Rani Jhansi road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X