ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೆಸ್ ಕೋಡ್ ಹೇಳಿಕೆ ವಿವಾದ: ಯೇಸುದಾಸ್ ವಿರುದ್ಧ ಎಫ್ ಐಆರ್

By Mahesh
|
Google Oneindia Kannada News

ನವದೆಹಲಿ, ಅ.5: ಮಹಿಳೆಯರು ಜೀನ್ಸ್ ಬಟ್ಟೆ ಧರಿಸಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ಗಾಯಕ, ಪದ್ಮವಿಭೂಷಣಾ ಕೆ.ಜೆ ಯೇಸುದಾಸ್(74) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಸುದ್ದಿ ಬಂದಿದೆ. ಮಹಿಳಾ ಆಯೋಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮಹಿಳೆಯರು ಜೀನ್ಸ್ ತೊಡಬಾರದು, ಅದು ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಕಳೆದ ಗುರುವಾರದಂದು ಸಂಗೀತ ದಿಗ್ಗಜ, ಗಾಯಕ ಕೆ.ಜೆ. ಯೇಸುದಾಸ್ ಅವರು ಹೇಳಿಕೆ ನೀಡಿದ್ದರು.

"ಮಹಿಳೆಯರು ಜೀನ್ಸ್ ಧರಿಸಿ ಇತರರಿಗೆ ತೊಂದರೆ ಕೊಡಬಾರದು. ಏನೇನು ಕವರ್ ಆಗಿರಬೇಕೋ ಅದೆಲ್ಲ ಕವರ್ ಆಗಿರಬೇಕು" ಎಂದು ಹೇಳಿರುವುದು ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಕೆಂಗಣ್ಣಿಗೆ ಗುರಿಯಾಗಿದೆ. [ಮಹಿಳೆ ಜೀನ್ಸ್ ತೊಟ್ಟು ತೊಂದರೆ ಕೊಡಬಾರದು]

FIR filed against KJ Yesudas for remarks against women clad in jeans

ಯೇಸುದಾಸ್‌ರಂಥ ಮೇರು ವ್ಯಕ್ತಿಗಳು ಅಂಥ ಹೇಳಿಕೆ ನೀಡಿದ್ದು ಸರಿಯಲ್ಲ. ಅದು ಅವರ ವೈಯಕ್ತಿಕ ನಿಲುವೇ ಆಗಿರಬಹುದು. ಕಾನೂನು ಬದ್ಧವಾಗಿ ಯೇಸುದಾಸ್ ಹೇಳಿಕೆಯಲ್ಲಿ ಆಕ್ಷೇಪ ಇರದಿದ್ದರೂ ನೈತಿಕವಾಗಿ ಸರಿಯಲ್ಲ ಎಂದು ಲಲಿತಾ ಕುಮಾರಮಂಗಲಂ ಅವರು ಹೇಳಿದ್ದಾರೆ.

ಯೇಸುದಾಸ್ ಅವರ ಹೇಳಿಕೆಯನ್ನು ತಿರುವನಂತಪುರಂನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಹೇಳಿಕೆ ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಬಿಂದು ಕೃಷ್ಣ ಟೀಕಿಸಿದ್ದಾರೆ.

ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಗಳಿಸಿರುವ ಕೆಜೆ ಯೇಸುದಾಸ್ ಅವರು ಹಲವಾರು ಪ್ರಮುಖ ಹಿಂದೂ ದೇಗುಲಗಳ ಆಸ್ಥಾನ ಕಲಾವಿದರಾಗಿ ಕೂಡಾ ಸಂಗೀತ ಸೇವೆ ಸಲ್ಲಿಸಿದ್ದಾರೆ. ಜನಪ್ರಿಯ ಗಾಯಕ ಕೆಜೆ ಯೇಸುದಾಸ್ ಅವರಿಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಯೇಸುದಾಸ್ ದೇಗುಲ ಪ್ರವೇಶ ನಿರಾಕರಿಸುವವರೂ ಕೂಡಾ ಅವರು ಗುರುವಾಯೂರಪ್ಪನ್ ಕುರಿತು ಹಾಡಿದ ಹಾಡುಗಳನ್ನು ಮೆಚ್ಚಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
An FIR has reportedly been filed against legendary singer and Padma Vibhushan awardee KJ Yesudas regarding his statement about women wearing jeans.Chairperson of National Commission for Women, Lalitha Kumaramangalam, today said that it was very unfortunate that such an "unethical" comment was made by the singer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X