• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವದೆಹಲಿಯಲ್ಲಿ ನಾಲ್ವರು ಆಪ್ ಶಾಸಕರ ವಿರುದ್ಧ ಎಫ್ಐಆರ್

|

ನವದೆಹಲಿ, ಅಕ್ಟೋಬರ್.29: ಕೊರೊನಾವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಯಾನಿಟೈಸರ್ ಕಾರ್ಯವನ್ನು ಖಾಸಗೀಕರಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂದೆ ಆಮ್ ಆದ್ಮಿ ಪಕ್ಷದ ಶಾಸಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ನಾಲ್ವರು ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೊಂಡ್ಲಿ ಶಾಸಕ ಕುಲ್ದೀಪ್ ಮೋನು, ಶಾಲಿಮರ್ ಬಾಗ್ ಶಾಸಕ ವಂದನಾ ಕುಮಾರಿ, ಮಾಡೆಲ್ ಕಾಲೋನಿ ಶಾಸಕ ಅಖಿಲೇಶ್ ತ್ರಿಪಾಠಿ, ತ್ರಿಲೋಕಪುರಿ ಶಾಸಕ ರೋಹಿತ್ ಮಹಲಿಯಾನ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಗೋ ಕೊರೊನಾ ಗೋ ಅಂದ್ರೂ ಸಚಿವ ಅಠಾವಳೆಯವರನ್ನು ಬಿಡಲಿಲ್ಲ ಸೋಂಕು

ನವದೆಹಲಿ ನಾಗರಿಕ ಕೇಂದ್ರದ ಎದುರಿನಲ್ಲಿ ಆಮ್ ಆದ್ಮಿ ಮುಖಂಡ ದುರ್ಗೇಶ್ ಪಥಾಕ್ ಜೊತೆಗೆ 1000 ದಿಂದ 1500 ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸ್ಯಾನಿಟೈಸರ್ ಕಾರ್ಯವನ್ನು ಖಾಸಗೀಯವರಿಗೆ ಒಪ್ಪಿಸುವ ಯೋಜನೆಗೆ ವಿರೋಧಿ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕೊವಿಡ್-19 ನಿಯಮ ಉಲ್ಲಂಘನೆ:

ಕೊರೊನಾವೈರಸ್ ಭೀತಿ ನಡುವೆಯೂ ಪ್ರತಿಭಟನಾಕಾರರು ಯಾವುದೇ ಮಾರ್ಗಸೂಚಿಗಳನ್ನು ಪಾಲನೆ ಮಾಡಿರಲಿಲ್ಲ. ಮುಖಕ್ಕೆ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ಹಾಗೂ ಪೂರ್ವಾನುಮತಿ ಇಲ್ಲದೇ ಪ್ರತಿಭಟನೆಗೆ ಮುಂದಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಾಲ್ವರು ಶಾಸಕರ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ 186, 188, 353, 332, 269, 270 ಮತ್ತು ಸಾಂಕ್ರಾಮಿಕ ರೋಗ ಕಾಯ್ದೆ 3ನೇ ಸೆಕ್ಷನ್ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

English summary
FIR Against 4 MLAs Of Aam Aadmi Party And Others For Violation The Covid-19 Rules At Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X