ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 1ಕ್ಕೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮಂಡನೆ

|
Google Oneindia Kannada News

ನವದೆಹಲಿ, ನವೆಂಬರ್ 29: ಮೋದಿ ಸರ್ಕಾರದ ಐದು ವರ್ಷ ಪೂರ್ಣ ಆಗಲು ಕೆಲವೇ ತಿಂಗಳು ಬಾಕಿ ಇದ್ದು, ಫೆಬ್ರವರಿ ತಿಂಗಳ ಒಂದನೇ ತಾರೀಖಿನಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು! ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು!

2019-20 ನೇ ಸಾಲಿನ ಮಧ್ಯಂತರ ಬಜೆಟ್ ಇದಾಗಲಿದ್ದು, ಈಗಾಗಲೇ ಬಜೆಟ್ ಮಂಡಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಮೋದಿ ಕುಟುಂಬದ ಬಗ್ಗೆ ಮಾತಾಡಿದ ಕಾಂಗ್ರೆಸ್ಸಿಗರಿಗೆ ಜೇಟ್ಲಿ 3 ಪ್ರಶ್ನೆ ಮೋದಿ ಕುಟುಂಬದ ಬಗ್ಗೆ ಮಾತಾಡಿದ ಕಾಂಗ್ರೆಸ್ಸಿಗರಿಗೆ ಜೇಟ್ಲಿ 3 ಪ್ರಶ್ನೆ

ಪ್ರತಿ ಬಾರಿ ಫೆಬ್ರವರಿ ಕೊನೆಯ ವಾರದಲ್ಲಿ ಮುಂದಿನ ಸಾಲಿನ ಬಜೆಟ್ ಮಂಡಿಸಲಾಗುತ್ತಿತ್ತು. ಅದು ಪೂರ್ಣ ಬಜೆಟ್ ಆಗಿರುತ್ತಿತ್ತು. ಇದು ಚುನಾವಣಾ ವರ್ಷ ಆಗಿರುವ ಕಾರಣ ಈಗ ಮಂಧ್ಯಂತರ ಬಜೆಟ್ ಅಥವಾ 'ವೋಟ್‌ ಆನ್ ಅಕೌಂಟ್‌' ಮಂಡಿಸಿ ಮುಂದೆ ಬರುವ ಸರ್ಕಾರದಿಂದ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ.

Finance minister will present interim budget on February 1

ಮೋದಿ ಅವರ ಸರ್ಕಾರದ ಅವಧಿಯು ಏಪ್ರಿಲ್‌ಗೆ ಮುಗಿಯಲಿದೆ ಆ ನಂತರ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಹಾಗಾಗಿ ಕೇಂದ್ರವು ಮಧ್ಯಂತರ ಬಜೆಟ್ ಮಂಡಿಸುತ್ತಿದೆ.

ಭಯೋತ್ಪಾದನೆ ಬೆಳೆಯಲು ಅನುವು ಮಾಡಿಕೊಟ್ಟ ಕಾಂಗ್ರೆಸ್: ಜೇಟ್ಲಿ ಆರೋಪ ಭಯೋತ್ಪಾದನೆ ಬೆಳೆಯಲು ಅನುವು ಮಾಡಿಕೊಟ್ಟ ಕಾಂಗ್ರೆಸ್: ಜೇಟ್ಲಿ ಆರೋಪ

ಮೋದಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್‌ ಇದಾಗಿದ್ದು, ಭಾರಿ ನಿರೀಕ್ಷೆಗಳು ಇವೆ. ಚುನಾವಣೆಗೆ ಎರಡು ತಿಂಗಳು ಮಂಡಿಸಲಾಗುತ್ತಿರುವ ಈ ಬಜೆಟ್‌ನಲ್ಲಿ ಭಾರಿ ಜನಪ್ರಿಯ ಯೋಜನೆಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ.

ಈ ಬಜೆಟ್‌ ಅನ್ನು ಫೆಬ್ರವರಿಯಲ್ಲಿ ಮಂಡಿಸಲಾದರೂ ಸಹ ಸಾರ್ವತ್ರಿಕ ಚುನಾವಣೆ ನಂತರ ಬರುವ ಸರ್ಕಾರವೇ ಅದಕ್ಕೆ ಅನುಮೋದನೆ ನೀಡಬೇಕಾಗುತ್ತದೆ.

English summary
Finance miniser Arun Jaitley will present interim budget on February 1. This will be Modi government's this terms last budget. Budget will be present ahead of election so lot of hopes on the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X