ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ಸಂಜೆ 4ಕ್ಕೆ ನಿರ್ಮಲಾ ಸೀತಾರಾಮನ್ 3ನೇ ಸುದ್ದಿಗೋಷ್ಠಿ

|
Google Oneindia Kannada News

ದೆಹಲಿ, ಮೇ 15: ಪ್ರಧಾನಿ ಮೋದಿ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್‌ಗೆ ಸಂಬಂಧಪಟ್ಟಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೂಡ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಶುಕ್ರವಾರ (ಮೇ 15) ಸಂಜೆ 4 ಗಂಟೆಗೆ ದೆಹಲಿಯಲ್ಲಿ ವಿತ್ತ ಸಚಿವೆ ಸುದ್ದಿಗೋಷ್ಠಿ ನಿಗದಿಪಡಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಟ್ವಿಟ್ಟರ್ ಖಾತೆ ಪ್ರಕಟಿಸಿದೆ.

ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಸತತ ಎರಡು ದಿನ ಸುದ್ದಿಗೋಷ್ಠಿ ನಡೆಸಿ, ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಹೇಗೆ ಯೋಜನೆಗಳನ್ನು ರೂಪಿಸಿದೆ ಎಂದು ವಿವರಣೆ ನೀಡಿದ್ದಾರೆ.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?

Finance Minister Nirmala Sitharaman To Address Media On May 15th

ಇದೀಗ, ಅದರ ಮುಂದುವರಿದ ಭಾಗವಾಗಿ ಮೇ 15 ರಂದು ಮತ್ತಷ್ಟು ವಿವರಣೆ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಭಾನುವಾರವರೆಗೂ ಪ್ರತಿದಿನವೂ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರಂತೆ.

ಅಡಮಾನವಿಲ್ಲದೆ 3 ಲಕ್ಷ ಕೋಟಿ ಸಾಲ: ಇದೆಲ್ಲ ಸರ್ಕಾರದ 'ಗಿಮಿಕ್' ಎಂದ MSME.!ಅಡಮಾನವಿಲ್ಲದೆ 3 ಲಕ್ಷ ಕೋಟಿ ಸಾಲ: ಇದೆಲ್ಲ ಸರ್ಕಾರದ 'ಗಿಮಿಕ್' ಎಂದ MSME.!

ವಲಸೆ ಕಾರ್ಮಿಕರಿಗೆ ಉಚಿತ ಪಡಿತರ, ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ರೈತರಿಗೆ ಸಾಲ, ರೈತರಿಗೆ ಸಾಲು, ಕಾರ್ಮಿಕರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಸಾಲು ಸೇರಿದಂತೆ ಹಲವು ಯೋಜನೆಗಳನ್ನು ಗುರುವಾರ ಘೋಷಣೆ ಮಾಡಿದ್ದರು.

ನರೇಂದ್ರ ಮೋದಿ ಅವರು ಲಾಕ್‌ಡೌನ್‌ನಲ್ಲಿ ಸಿಲುಕಿರುವ ಬಡವರ್ಗದ ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಸಣ್ಣ ಕೈಗಾರಿಕೆ, ಅಸಂಘಟಿತ ವಲಯಗಳಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಮೇ 12 ರಂದು 20 ಲಕ್ಷ ಕೋಟಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು.

English summary
Finance Minister Nirmala Sitharaman will address a press conference today, 15th May 2020, at 4 PM in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X