ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ 'ಅಳುಮುಂಜಿ' ಪಕ್ಷ ಎಂದು ಜರಿದ ಕೇಂದ್ರ ಸಚಿವ ಜೇಟ್ಲಿ

|
Google Oneindia Kannada News

ನವದೆಹಲಿ, ಮೇ 6: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸೇರಿ ಈ ಬಾರಿ ಲೋಕಸಭಾ ಚುನಾವಣಾ ಅವಧಿಯಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅಳುಮುಂಜಿ ಮಗುವಿನಂತೆ ವರ್ತಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜರಿದಿದ್ದಾರೆ.

ಚುನಾವಣಾ ನೀತಿ ಸಂಹಿತೆ ಕುರಿತು ಅನವಶ್ಯ ಆರೋಪಗಳನ್ನು ಈ ಬಾರಿ ಪ್ರತಿಪಕ್ಷಗಳು ಮಾಡುತ್ತಿವೆ.ಅದರಲ್ಲಿ ಕಾಂಗ್ರೆಸ್ ಅಳುಮುಂಜಿ ಮಗುವಿನಂತೆ ಮುಂದೆನಿಂತು ಆರೋಪಿಸುತ್ತಿದೆ.

ಸ್ನಾತಕೋತ್ತರ ಪದವಿಯಿಲ್ಲದೆ ಎಂಫಿಲ್ ಸಾಧ್ಯವೆ? ಅರುಣ್ ಜೇಟ್ಲಿ ಪ್ರಶ್ನೆಸ್ನಾತಕೋತ್ತರ ಪದವಿಯಿಲ್ಲದೆ ಎಂಫಿಲ್ ಸಾಧ್ಯವೆ? ಅರುಣ್ ಜೇಟ್ಲಿ ಪ್ರಶ್ನೆ

ಚುನಾವಣೆ ಸಂದರ್ಭದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾದ್ಯವಿಲ್ಲ, ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಭ್ರಮದ ಕ್ಷಣಗಳಾಗಿವೆ ಹೀಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನಷ್ಟು ರಕ್ಷಿಸುವ ಸಮಯವಿದೆ. ನೀತಿ ಸಂಹಿತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಒಟ್ಟಾಗಿ ಸಾಗಬೇಕಿದೆ.

Finance minister Arun Jaitley calls Congress as cry baby

ಹೊಸ ಮತದಾರರಿಗೆ ಪ್ರಧಾನಿ ಮತದಾನದ ಮನವಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ವಿಚಾರಗಳು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವುದು ಹೇಗೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಗಾಂಧಿ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುವುದು ಹೇಗೆ ನೀತಿ ಸಂಹಿತೆಗೆ ಸಂಬಂಧಪಡುತ್ತದೆ.

ಹಾಲಿ ಪ್ರಧಾನಿಯನ್ನು ಯಾವುದೇ ಆಧಾರವಿಲ್ಲದೆ ಎಷ್ಟು ಬಾರಿ ಬೇಕಾದರೂ ಚೋರ್ ಎಂದು ಹೇಳಬಹುದು ಆದರೆ ಇತರರಿಗೆ ಆ ಅಧಿಕಾರವಿಲ್ಲವೆಂದರೆ ಹೇಗೆ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಗಳಲ್ಲಿ ಭಾರತ ಛಿದ್ರವಾಗುವ ಅಪಾಯ: ಜೇಟ್ಲಿ ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಗಳಲ್ಲಿ ಭಾರತ ಛಿದ್ರವಾಗುವ ಅಪಾಯ: ಜೇಟ್ಲಿ

ಕಳೆದ ಮೂರು ದಿನಗಳಿಂದ ಪ್ರಧಾನಿ ಮೋದಿಯ ಭ್ರಷ್ಟಾಚಾರಿ ನಂಬರ್ ಒನ್ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ವಿವಾದವನ್ನು ಎಬ್ಬಿಸುತ್ತಿದೆ. ಮೋದಿ ಹೇಳಿಕೆ ಪ್ರಶ್ನಿಸಿ ಚುನಾವಾ ಆಯೋಗಕ್ಕೂ ದೂರು ನೀಡಿತ್ತು. ಆದರೆ ಆಯೋಗ ಕ್ಲೀನ್ ಚಿಟ್ ನೀಡಿರುವುದರಿಂದ ಕಾಂಗ್ರೆಸ್ ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

English summary
Finance minister Arun Jaitley hits out at grand hold party Congress that they are behaving like Cry Baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X