ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಕಸರಿಗೆ ಗಲ್ಲು: ಸುಪ್ರೀಂ ತೀರ್ಪಿಗೆ ಟ್ವಿಟ್ಟಿಗರ ಹರ್ಷ

ಬೆಳಿಗ್ಗೆ ತಾನೇ ಆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಗುಡುಗಿದ್ದ ಟ್ವಿಟ್ಟರಿಗರು, ತೀರ್ಪು ಪ್ರಕಟವಾಗುತ್ತಿದ್ದಂತೆಯೇ, ಸುಪ್ರೀಂ ಕೋರ್ಟಿನ ನಡೆಯನ್ನು ಶ್ಲಾಘಿಸತೊಡಗಿದ್ದಾರೆ.

|
Google Oneindia Kannada News

ನವದೆಹಲಿ, ಮೇ 05: ಭಾರತದ ನ್ಯಾಯ ದೇವತೆ ಕಟ್ಟಿದ್ದ ಕಣ್ಣಿನ ಪಟ್ಟಿಯೊಳಗಿಂದಲೇ ಕ್ಷಣ ಹೊತ್ತು ಆನಂದಬಾಷ್ಪ ಸುರಿಸಿದ ದಿನ ಇದು. ಭಾರತದ ನ್ಯಾಯಾಂಗದ ಕೇಂದ್ರ ಬಿಂದುವಾದ ಸುಪ್ರೀಂ ಕೋರ್ಟ್ ಎದುರು ಉಸಿರು ಬಿಗಿಹಿಡಿದು ಕಾದಿದ್ದ ನೂರಾರು ಜನರ ನಿರೀಕ್ಷೆಗೆ ನ್ಯಾಯ ದೊರೆತ ಕ್ಷಣ.

ಹೌದು, ನಾಲ್ಕೂವರೆ ವರ್ಷಗಳ ನಿರಂತರ ಕಾಯುವಿಕೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಇಂದು ಸರ್ವೋಚ್ಚ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪು ನ್ಯಾಯಾಂಗದ ಮೇಲಿನ ನಂಬಿಕೆ ಉಸಿರಾಡುವಂತೆ ಮಾಡಿದ್ದು ಸುಳ್ಳಲ್ಲ.[ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ]

ಡಿಸೆಂಬರ್ 16, 2012 ರ ಕರಾಳ ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದಿದ್ದ ಭಾರತದ ಮಾನವನ್ನು ಸುಪ್ರೀಂ ಕೋರ್ಟಿನ ಈ ತೀರ್ಪು ಪುನಃ ಪ್ರತಿಷ್ಠಾಪನೆ ಮಾಡಿದೆ ಎಂದರೆ ತಪ್ಪಾಗಲಾರದು. ಈ ಐತಿಹಾಸಿಕ ತೀರ್ಪನ್ನು ಇಡೀ ದೇಶ ಅತ್ಯಂತ ನಿರಾಳತೆಯಿಂದ ಸ್ವಾಗತಿಸಿದೆ. ಅಷ್ಟೇ ಅಲ್ಲ, ಇನ್ನೆಷ್ಟೋ ನಿರ್ಭಯಾರಿಗೂ ಹೀಗೇ ನ್ಯಾಯ ಸಿಗಬೇಕು ಎಂಬ ಇಂಗಿತವನ್ನು ಭಾರತೀಯರು ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ತಾನೇ ಆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಗುಡುಗಿದ್ದ ಟ್ವಿಟ್ಟರಿಗರು, ತೀರ್ಪು ಪ್ರಕಟವಾಗುತ್ತಿದ್ದಂತೆಯೇ, ಸುಪ್ರೀಂ ಕೋರ್ಟಿನ ನಡೆಯನ್ನು ಶ್ಲಾಘಿಸತೊಡಗಿದ್ದಾರೆ. ಕೊನೆಗೂ ನಿರ್ಭಯಾಗೆ ನ್ಯಾಯ ದೊರಕಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಬಾಲಾಪರಾಧಿ ಮೊಹ್ಮದ್ ಅಫ್ರೋಜ್ ಗೆ ಸಹ ಗಲ್ಲುಶಿಕ್ಷೆಯಾಗಬೇಕು ಎಂದಿದ್ದಾರೆ. ನಿರ್ಭಯಾ ತೀರ್ಪಿಗೆ ಸಂಬಂಧಿಸಿದ ಟ್ವಿಟ್ಟರ್ ನುಡಿ, ನಿಮಗಾಗಿ.['ನಿರ್ಭಯಾ 13 ದಿನ ಬದುಕುಳಿದಿದ್ದೇ ದೊಡ್ಡ ಪವಾಡ'!]

ವಿಶ್ವಾಸ ಉಳಿಸಿಕೊಂಡ ನ್ಯಾಯಾಂಗ ವ್ಯವಸ್ಥೆ

ನಿರ್ಭಯಾ ಅತ್ಯಾಚಾರಿಗಳಿಗೆ ಮರಣ ದಂಡನೆ ನೀಡುವ ಮೂಲಕ ಸುಪ್ರೀಂ ಕೋರ್ಟ್ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿದ್ದ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ತೀರ್ಪು ವಿರೋಧಿಸುವವರು ತಾವೇ ನೇಣು ಹಾಕಿಕೊಳ್ಳಲಿ

ನಿರ್ಭಯಾ ಪ್ರಕರಣದ ತೀರ್ಪನ್ನು ಮಾನವ ಹಕ್ಕಿನ ಹಿನ್ನೆಲೆಯಲ್ಲಿ ವಿರೋಧಿಸುವವರು ತಾವೇ ನೇಣು ಹಾಕಿಕೊಳ್ಳಲಿ, ಅಂಥ ಕ್ರೂರ ಅಪರಾಧಿಗಳಿಗೆ ನೇಣು ಶಿಕ್ಷೆ ನೀಡಿದ್ದನ್ನೂ ವಿರೋಧಿಸುವವರೂ ಅಂಥದೇ ಶಿಕ್ಷೆಗೆ ಅರ್ಹರು ಎಂದು ಯಶವಂತ್ ದೇಶಮುಖ್ ಎನ್ನುವವರು ಟ್ವೀಟ್ ಮಾಡಿದ್ದಾರೆ.[ಬಾಲಾಪರಾಧಿಗಳ ವಯೋಮಿತಿ ಇಳಿಕೆ, ವಿಧೇಯಕದ ಪ್ರಮುಖ ಅಂಶಗಳು]

ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಲಿ

ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗುವ ಅಗತ್ಯವನ್ನೂ ಉಲ್ಲೇಖಿಸಲಾಗಿದೆ. ಇದು ಅತ್ಯಂತ ಗಂಭೀರ ವಿಚಾರ ಎಂದು ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದಾರೆ.

ಬಾಲಾಪರಾಧಿಯನ್ನೂ ಶಿಕ್ಷಿಸಲಿ

ನ್ಯಾಯಾಂಗದ ಕುರಿತ ನಮ್ಮ ನಂಬಿಕೆಯನ್ನು ಉಳಿಸಿದ್ದಕ್ಕಾಗಿ ಸುಪ್ರೀಂ ಕೋರ್ಟಿಗೆ ಧನ್ಯವಾದಗಳು. ಆದರೆ ಉಳಿದ ಬಾಲಾಪರಾಧಿಯನ್ನೂ ಶಿಕ್ಷಿಸಿದರೆ ಸಂಪೂರ್ಣ ನ್ಯಾಯ ಸಿಕ್ಕಂತಾಗುತ್ತದೆ ಎಂದು ಯೋಗಿ ಎಂಬುವವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಅಡಲಾಗಿದೆ.[ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್]

Array

ಪ್ರಜಾ ಪ್ರಭುತ್ವದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ

ಕೆಲವೊಮ್ಮೆ ಪ್ರಜಾಪ್ರಭುತ್ವದಲ್ಲಿ ಬಹಳ ಕಟ್ಟು ನಿಟ್ಟಿನ ಮತ್ತು ನಿರ್ದಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವೆಂದರೆ ದಿನದಿಂದ ದಿನಕ್ಕೆ ಅಪರಾಧಿಗಳು ಹೆಚ್ಚುತ್ತಲೇ ಹೋಗುತ್ತಾರೆ ಎಂದು ಮೇಘಾ ಕುಮಾರಿ ಎಂಬುವವರು ಟ್ವೀಟ್ ಮಾಡಿದ್ದಾರೆ.[ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ]

English summary
Finally Nirbhaya got justice. Here are some twitter statements on supreme court's historical verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X