ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಕಾರ್ಖಾನೆಯೊಂದರಲ್ಲಿ ಸಿಲಿಂಡರ್ ಸ್ಫೋಟ: ಆರು ಮಂದಿ ಬಲಿ

|
Google Oneindia Kannada News

ನವದೆಹಲಿ, ಜನವರಿ 04:ಪಶ್ಚಿಮ ದೆಹಲಿಯ ಮೋತಿ ನಗರ್ ಎಂಬಲ್ಲಿಯ ಕಾರ್ಖಾನೆಯೊಂದರಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಆರು ಮಂದಿ ಮೃತರಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಸಂಗಾಪುರ ಸರ್ಕಾರಿ ಶಾಲೆಯಲ್ಲಿ ಕುಕ್ಕರ್ ಸ್ಫೋಟ: ವಿದ್ಯಾರ್ಥಿನಿಗೆ ಗಾಯಸಂಗಾಪುರ ಸರ್ಕಾರಿ ಶಾಲೆಯಲ್ಲಿ ಕುಕ್ಕರ್ ಸ್ಫೋಟ: ವಿದ್ಯಾರ್ಥಿನಿಗೆ ಗಾಯ

ಸೀಲಿಂಗ್ ಫ್ಯಾನ್ ಗಳಿಗೆ ಫೇಂಟ್ ಮಾಡುವ ಕಾರ್ಖಾನೆ ಇದಾಗಿದ್ದು, ದೆಹಲಿಯ ಸುದರ್ಶನ್ ಪಾರ್ಕ್ ಬಳಿ ಇದೆ. 8:50 ರ ಸಮಯಕ್ಕೆ ಸಿಲೀಂಡರ್ ಸ್ಫೋಟ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಆದರೂ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಚೀನಾದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 22 ಮಂದಿ ಸಾವುಚೀನಾದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 22 ಮಂದಿ ಸಾವು

Few Dead In Explosion At Factory In West Delhi; Many Still Trapped

ಕಾರ್ಖಾನೆಯ ಮಾಲೀಕರೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ 15 ಜನರನ್ನು ರಕ್ಷಿಸಲಾಗಿದ್ದು, ಆಚಾರ್ಯ ಭಿಕ್ಷು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಐದು ವರ್ಷ ವಯಸ್ಸಿನ ಮಗುವೂ ಮೃತವಾಗಿದೆ ಎನ್ನಲಾಗಿದೆ.

ಸಾಗರದಲ್ಲಿ ಸಿಲಿಂಡರ್ ಸಾಗಣೆ ಲಾರಿ ಸ್ಫೋಟ, ಚಾಲಕ ಸಜೀವ ದಹನಸಾಗರದಲ್ಲಿ ಸಿಲಿಂಡರ್ ಸಾಗಣೆ ಲಾರಿ ಸ್ಫೋಟ, ಚಾಲಕ ಸಜೀವ ದಹನ

ಘಟನೆಯಲ್ಲಿ ಕಾರ್ಖಾನೆಯ ಒಂದು ಭಾಗ ಕುಸಿದ ಪರಿಣಾಮ ಅವಶೇಷದೊಳಗೆ 8-10 ಜನ ಸಿಲುಕಿರಬಹುದು ಎನ್ನಲಾಗಿದೆ. ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.

English summary
Six people, including a child, were killed in an LPG cylinder explosion at a factory in west Delhi's Moti Nagar on Thursday evening, police said. While 15 people were rescued from the factory, about seven or eight others are said to be trapped in the building, a portion of which collapsed after the explosion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X