ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಹಿಂಸಾಚಾರ: ಭಯದಲ್ಲಿ ಕ್ಯಾಂಪಸ್ ತೊರೆದ ವಿದ್ಯಾರ್ಥಿನಿಯರು

|
Google Oneindia Kannada News

ನವದೆಹಲಿ, ಜನವರಿ 7: ಪ್ರತಿಷ್ಠಿತ ಜವಾಹರ್‌ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಬಳಿಕ ಭಯದಲ್ಲಿ ವಿದ್ಯಾರ್ಥಿನಿಯರು ಕ್ಯಾಂಪಸ್ ತೊರೆಯುತ್ತಿದ್ದಾರೆ.

ಪೋಷಕರು ತಮ್ಮ ಭದ್ರತೆ ಬಗ್ಗೆ ಆತಂಕಗೊಂಡಿದ್ದು, ಮಕ್ಕಳನ್ನು ಮನೆಗೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಕ್ಯಾಂಪಸ್ ತೊರೆಯುತ್ತಿದ್ದ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಹಿಂಸಾಚಾರ ಘಟನೆಯಿಂದ ಆತಂಕಗೊಂಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದು, ತಮ್ಮ ಮನೆಗೆ ಹಾಗೂ ಇನ್ನು ಕೆಲವರು ತಮ್ಮ ಸಂಬಂಧಿಗಳ ಮನೆಗೆ ಬ್ಯಾಗ್ ಸಮೇತ ತೆರಳುತ್ತಿರುವ ದೃಶ್ಯ ಕಂಡು ಬಂತು.

ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?

ಭಾನುವಾರ ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಉಪನ್ಯಾಸಕರು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

Fearing For Safety Several Women Students Leave Campus

ಸುರಕ್ಷತೆಯ ಭಯದಿಂದ ನಾನು ಹಾಸ್ಟೆಲ್ ಬಿಟ್ಟು ಹೋಗುತ್ತಿದ್ದೇನೆ ಎಂದು ಹಿಂಸಾಚಾರ ನಡೆದ ಕೊಯ್ನಾ ಹಾಸ್ಟೆಲ್ ನ ವಿದ್ಯಾರ್ಥಿನಿ ಪಂಚಮಿ ಅವರು ಹೇಳಿದ್ದಾರೆ.

ನನ್ನ ಸುರಕ್ಷತೆ ಬಗ್ಗೆ ನನ್ನ ಪೋಷಕರು ತುಂಬಾ ಆತಂಕಗೊಂಡಿದ್ದಾರೆ. ಹೀಗಾಗಿ ನಾನು ನನ್ನ ರಾಜ್ಯ ಹರಿಯಾಣಕ್ಕೆ ತೆರಳುತ್ತಿದ್ದೇನೆ ಎಂದು ಎಂಎ ಸಮಾಜಶಾಸ್ತ್ರ ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ ಹೀಗೆ ದಿನದಿಂದ ದಿನಕ್ಕೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ವಿದ್ಯಾರ್ಥಿಗಳು ಒಬ್ಬಬ್ಬರಾಗಿ ಊರಿನ ಕಡೆಗೆ ತೆರಳುತ್ತಿದ್ದಾರೆ.

English summary
Some were heading back to their home and some to their relatives’ place as fear gripped several women students who were leaving the Jawaharlal Nehru University (JNU) campus Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X