ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳ ಉತ್ಪಾದಿಸಲು ಸರ್ಕಾರದ ಕ್ರಮ

|
Google Oneindia Kannada News

ನವ ದೆಹಲಿ, ಮೇ 16: ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳ ಉತ್ಪಾದಿಸಲು ಕೇಂದ್ರ ಸರ್ಕಾರದ ಹೊಸ ಯೋಜನೆಯನ್ನು ಹಾಕಿಕೊಂಡಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

Recommended Video

ಮುತ್ತಪ್ಪ ರೈ ನಿಧನಕ್ಕೆ ಡಾನ್ ಜಯರಾಜ್ ಪುತ್ರ ವ್ಯಂಗ್ಯ..! | Ajith Jayraj | Muthappa Rai

ಇಂದು ಆರ್ಥಿಕ ಪ್ಯಾಕೇಜ್ ನಾಲ್ಕನೇ ಹಂತವನ್ನು ನಿರ್ಮಲಾ ಸೀತಾರಾಮನ್ ವಿವರಿಸಿದರು. ಪ್ರಮುಖವಾಗಿ ಕಲ್ಲಿದ್ದಲು, ನಾಗರಿಕ ವಿಮಾನಯಾನ, ಪರಮಾಣು ಶಕ್ತಿ, ವಿದ್ಯುತ್‌ ಸರಬರಾಜು ಕಂಪನಿಗಳು, ಬಾಹ್ಯಾಕಾಶ, ರಕ್ಷಣೆ ಹಾಗೂ ಖನಿಜಗಳ ಕ್ಷೇತ್ರಗಳ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

FDI Limits In Defence Manufacturing Raised From 49 Percent To 74 Percent

ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಸರ್ಕಾರ ಹಲವು ಯೋಜನೆಯನ್ನು ರೂಪಿಸಿದೆ. ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

''ರಕ್ಷಣಾ ವಲಯದ ಉತ್ಪನ್ನ ಆಮದು ಕಡಿಮೆ ಮಾಡಲು ಮತ್ತು ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸಲು ಆದ್ಯತೆ ನೀಡಿದೆ. ಶಸ್ತ್ರಾಸ್ತ್ರ ಕೈಗಾರಿಕೆ ಮಂಡಳಿಯಲ್ಲಿ ಸ್ವಾಯತ್ತತೆ, ಹೊಣೆಗಾರಿಕೆ, ದಕ್ಷತೆಗೆ ಒತ್ತು ನೀಡಿದ್ದು, ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಖರೀದಿಗೆ ಬಜೆಟ್ ನಲ್ಲಿ ಅವಕಾಶ ನೀಡಲಾಗುವುದು'' ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: 4ನೇ ಕಂತಿನ ಪ್ರಮುಖ ಘೋಷಣೆಗಳು

ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಕ್ಷಣಾ ವಲಯದಲ್ಲಿ ಎಫ್.ಡಿ.ಐ 49% ರಿಂದ 74% ಕ್ಕೆ ಹೆಚ್ಚಳ ಮಾಡಲಾಗಿದೆ. ಕಾಲಮಿತಿಯಲ್ಲಿ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.

English summary
Finance Minister Nirmala Sitharaman on Saturday announced that FDI limit in defence manufacturing under automatic route to be raised from 49 per cent to 74 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X