ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ

|
Google Oneindia Kannada News

Recommended Video

ಸಂಸತ್‍ನಲ್ಲಿ ವಿವಾದಕ್ಕೆ ಕಾರಣವಾಯ್ತು ನುಸ್ರತ್ ಕೆಲಸ | Oneindia Kannada

ನವದೆಹಲಿ, ಜೂನ್ 29: ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದು, ವಿವಾದಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಹಸೆಮಣೆ ಏರಿದ್ದ ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ತಮ್ಮ ದೀರ್ಘಕಾಲದ ಗೆಳೆಯ ಕೋಲ್ಕತಾ ಮೂಲದ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು.

ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ! ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನವ ವಿವಾಹಿತೆ!

ಮೂಲತಃ ಮುಸ್ಲಿಂ ಕುಟುಂಬದವರಾದ ನುಸ್ರತ್ ಅವರು, ನಸು ಗುಲಾಬಿ ಮತ್ತು ಬಿಳಿ ಬಣ್ಣದ ಸೀರೆಯಲ್ಲಿ ಹಣೆಗೆ ಸಿಂಧೂರ ಇರಿಸಿಕೊಂಡು, ಕೈ ತುಂಬಾ ಬಳೆಯನ್ನು ತೊಟ್ಟುಕೊಂಡು ಸಂಸತ್ತಿಗೆ ಬಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೌಲ್ವಿ ಮುಫ್ತಿ ಅಸಾದ್ ವಾಸ್ಮಿ ಅವರು, ನುಸ್ರತ್ ಅವರು ಜೈನ ಸಮುದಾಯದ ಯುವಕನನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಸ್ಲಾಂ ಪ್ರಕಾರ ಮುಸ್ಲಿಮರು ಮುಸ್ಲಿಮರನ್ನು ಮಾತ್ರ ವರಿಸಬೇಕು, ಆದರೆ, ನಟನಾ ಕ್ಷೇತ್ರದಲ್ಲಿರುವವರಿಗೆ ಜಾತಿ ಧರ್ಮದ ಬಗ್ಗೆ ಕಾಳಜಿಯಿಲ್ಲ, ಇದು ಸಂಸತ್ತಿನಲ್ಲಿ ಎದ್ದು ಕಂಡಿದೆ ಎಂದಿದ್ದಾರೆ.

ಸಂಸದೆಯಾಗಿ ಪ್ರಮಾಣ ಸ್ವೀಕರಿಸುವ ಮೊದಲೇ ನುಸ್ರತ್ ಮದುವೆ ಸಂಸದೆಯಾಗಿ ಪ್ರಮಾಣ ಸ್ವೀಕರಿಸುವ ಮೊದಲೇ ನುಸ್ರತ್ ಮದುವೆ

ಸಂಸತ್ತಿಗೆ ಸಿಂಧೂರ ಹಾಗೂ ಮಂಗಳಸೂತ್ರ ಧರಿಸಿ ಬಂದಿದ್ದು, ನಾವು ಅವರ ವೈಯಕ್ತಿಕ ಇಚ್ಛೆಯ ಬಗ್ಗೆ ಪ್ರತಿಕ್ರಿಯಿಸಲಾರೆ, ಶರಿಯಾರ್ ಕಾನೂನು ಏನು ಹೇಳುತ್ತದೆಯೋ ಅದನ್ನು ಮಾಧ್ಯಮದ ಮುಂದಿಟ್ಟಿದ್ದೇವೆ ಎಂದು ವಾಸ್ಮಿ ಹೇಳಿದ್ದಾರೆ.

ಸಂಸದೆ ಸಾಧ್ವಿ ಪ್ರಾಚಿ ಬೆಂಬಲ

ಸಂಸದೆ ಸಾಧ್ವಿ ಪ್ರಾಚಿ ಬೆಂಬಲ

ಮೌಲ್ವಿಗಳ ವಿರುದ್ಧ ತಿರುಗಿ ಬಿದ್ದಿರುವ ಸಂಸದೆ, ಸಾಧ್ವಿ ಪ್ರಾಚಿ ಅವರು ನುಸ್ರತ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮಹಿಳೆಯೊಬ್ಬರು ಹಿಂದುವೊಬ್ಬರನ್ನು ಮದುವೆಯಾದರೆ, ಸಿಂಧೂರ, ಮಂಗಳಸೂತ್ರ, ಬಳೆ ತೊಡುವುದು ರೂಢಿ, ಸಂಪ್ರದಾಯ, ಇದನ್ನು ಮೌಲ್ವಿಗಳು ಹರಾಮ್ ಎಂದು ಕರೆದು ಫತ್ವಾ ಹೊರಡಿಸಿದ್ರೆ, ಅವರ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಮರು ಬಲೆಗೆ ಬೀಳಿಸಿಕೊಂಡು ಅವರು ಬುರ್ಖಾ ತೊಡುವಂತೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ನುಸ್ರತ್ ಜಹಾನ್ ಅವರು ಎಲ್ಲ ಸಂಸದರಿಗೂ 'ಅಸ್ ಸಲಾಮು ಅಲಾಯ್ಕುಮ್, ನಮಸ್ಕಾರ್' ಎಂದು ಹೇಳಿದರು. ಬಳಿಕ ಬಂಗಾಳಿ ಭಾಷೆಯಲ್ಲಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೊನೆಯಲ್ಲಿ 'ಜೈ ಹಿಂದ್, ವಂದೇ ಮಾತರಂ, ಜೈ ಬಾಂಗ್ಲಾ' ಎನ್ನುವ ಮೂಲಕ ಮತ್ತೊಮ್ಮೆ ಸದನದ ಗಮನವನ್ನು ಸೆಳೆದರು. ನಂತರ ಸ್ಪೀಕರ್ ಓ ಬಿರ್ಲಾ ಅವರ ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು.

ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರುಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರು

ನುಸ್ರತ್ ಅವರ ಮದುವೆ ಟರ್ಕಿಯಲ್ಲಿ ನಡೆದಿತ್ತು

ನುಸ್ರತ್ ಅವರ ಮದುವೆ ಟರ್ಕಿಯಲ್ಲಿ ನಡೆದಿತ್ತು

ನುಸ್ರತ್ ಅವರ ಮದುವೆ ಟರ್ಕಿಯಲ್ಲಿ ನಡೆದಿತ್ತು. ಹೀಗಾಗಿ ಜೂನ್ 17 ಮತ್ತು 18ರಂದು ನಡೆದಿದ್ದ ಸಂಸತ್ ಕಲಾಪ, ಪ್ರಮಾಣ ವಚನ ಸ್ವೀಕಾರಕ್ಕೆ ನುಸ್ರತ್ ಮತ್ತು ಮಿಮಿ ಇಬ್ಬರೂ ಗೈರಾಗಿದ್ದರು. ಈ ಕಾರಣದಿಂದ ಇಬ್ಬರೂ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಟರ್ಕಿಯ ಬೋಡ್ರಮ್ ಪಟ್ಟಣದಲ್ಲಿ ಮದುವೆ ನಡೆದಿತ್ತು. ಕುಟುಂಬ ವರ್ಗ ಮತ್ತು ಅವರ ಆಪ್ತ ಸ್ನೇಹಿತರು ಹಾಗೂ ಬಂಧುಗಳು ಭಾಗವಹಿಸಿದ್ದರು.

ಸ್ನೇಹಿತೆಯರಾದ ನುಸ್ರತ್ ಹಾಗೂ ಮಿಮಿ

ಸ್ನೇಹಿತೆಯರಾದ ನುಸ್ರತ್ ಹಾಗೂ ಮಿಮಿ

ಸ್ನೇಹಿತೆಯರಾದ ನುಸ್ರತ್ ಪಶ್ಚಿಮ ಬಂಗಾಳದ ಬಸಿರ್‌ಹತ್ ಕ್ಷೇತ್ರದಿಂದ ಗೆದ್ದಿದ್ದರೆ, ಮಿಮಿ ಜಾದವಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸಂಸತ್‌ಗೆ ಮೊದಲ ದಿನ ಪ್ರವೇಶಿಸಿದ ಸಂದರ್ಭದಲ್ಲಿ ಇಬ್ಬರೂ ಆಧುನಿಕ ಉಡುಗೆ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು. ಮೊದಲ ಬಾರಿಗೆ ಸಂಸದೆಯರಾಗಿ ಆಯ್ಕೆಯಾದ ಬಳಿಕ ಸಂಸತ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದ್ದ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರಜಾಪ್ರಭುತ್ವದ ದೇಗುಲ ಎಂದೇ ಪರಿಗಣಿಸಿರುವ ಸಂಸತ್ ಒಳಗೆ ಪ್ರವೇಶಿಸುವಾಗ ಸಭ್ಯ ಹಾಗೂ ಸೂಕ್ತ ಉಡುಪುಗಳನ್ನು ಧರಿಸಬೇಕು ಎಂದು ಅಸಮಾಧಾನ ವ್ಯಕ್ತವಾಗಿತ್ತು.

ಮತೋತ್ಸವದಲ್ಲಿ ಗಮನ ಸೆಳೆದ ಈ ಇಬ್ಬರು ಸುಂದರಿಯರದ್ದೇ ಎಲ್ಲೆಡೆ ಚರ್ಚೆ ಮತೋತ್ಸವದಲ್ಲಿ ಗಮನ ಸೆಳೆದ ಈ ಇಬ್ಬರು ಸುಂದರಿಯರದ್ದೇ ಎಲ್ಲೆಡೆ ಚರ್ಚೆ

English summary
Trinamool Congress (TMC) MP from Basirhat, West Bengal,Nusrat Jahan Jain has been targeted yet again, now not by trolls for her choice of clothes at the Parliament but for her wedding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X